I.N.D.I.A: ಸಂಸದರ ಅಮಾನತಿಗೆ ಇಂಡಿಯಾ ಕೋಪ
ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಭಾರೀ ಪ್ರತಿಭಟನೆ - ದೇಶಾದ್ಯಂತ ವಿವಿಧೆಡೆ ಧರಣಿ
Team Udayavani, Dec 23, 2023, 12:57 AM IST
ಹೊಸದಿಲ್ಲಿ: ಗುರುವಾರ ಮುಕ್ತಾಯವಾದ ಚಳಿ ಗಾಲದ ಅಧಿವೇಶನದಿಂದ 146 ಮಂದಿ ಸಂಸದ ರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದ ಒಕ್ಕೂಟದ “ಇಂಡಿಯಾ’ ಒಕ್ಕೂಟದ ಪಕ್ಷಗಳ ಮುಖಂಡರು ಮತ್ತು ನಾಯಕರು ಹೊಸದಿಲ್ಲಿ ಸೇರಿ, ದೇಶಾದ್ಯಂತ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.
ಹೊಸದಿಲ್ಲಿಯ ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರಜಾ ಪ್ರಭು ತ್ವವನ್ನು ದಮನಿಸಲು ಹೊರಟಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಹೀಗಾಗಿಯೇ, ವಿಪಕ್ಷಗಳ ಒಕ್ಕೂಟ ಇಂಡಿಯಾ ಹೆಸರಿನ ಮೈತ್ರಿ ಕೂಟ ರಚನೆ ಮಾಡಿ ಕೊಂಡಿದೆ. ನಾವೆಲ್ಲರೂ ಒಗ್ಗಟ್ಟಾಗಿ ಇರುವಾಗ ನರೇಂದ್ರ ಮೋದಿ ಏನೂ ಮಾಡಲು ಸಾಧ್ಯವಿಲ್ಲ. ನಮ್ಮನ್ನು ದಮನಿಸಲು ಯತ್ನಿಸಿದಷ್ಟೂ ನಾವು ಎದ್ದು ನಿಂತು ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ಸಂಸತ್‌ನ 2 ಸದನಗಳಿಂದ 146 ಸಂಸದರನ್ನು ಅಮಾನತು ಮಾಡುವ ಮೂಲಕ ಕೇಂದ್ರ ಸರಕಾರ ಶೇ.60 ಜನರ ಧ್ವನಿಯನ್ನು ಹತ್ತಿಕ್ಕಿದೆ ಎಂದು ಖರ್ಗೆ ಆರೋಪಿಸಿದರು. ದೇಶಾದ್ಯಂತ ಬಿಜೆಪಿ ದ್ವೇಷ ಹರಡಿಸಲು ಪ್ರಯತ್ನಿಸಿದರೆ ನಾವು ಪ್ರೀತಿಯ ಭಾವನೆ ಹಂಚುತ್ತೇವೆ ಎಂದರು.
ಹೆದರಿದವರು ಬಿಜೆಪಿಯವರು: ಪ್ರತಿಭಟನೆ ಯಲ್ಲಿ ಭಾಗವಹಿಸಿ ಮಾತನಾಡಿದ ವಯನಾಡ್ ಸಂಸದ ರಾಹುಲ್ ಗಾಂಧಿ ಡಿ.13ರಂದು ದಾಳಿಕೋರರು ಲೋಕಸಭೆಗೆ ನುಗ್ಗಿ ಹಳದಿ ಬಣ್ಣದ ಗ್ಯಾಸ್ ಸಿಂಪಡಿಸಿದ ಕೂಡಲೇ ಹೆದರಿ ಓಡಿದ್ದು ಬಿಜೆಪಿ ಸಂಸದರೇ ಎಂದು ಲೇವಡಿ ಮಾಡಿದ್ದಾರೆ. “ಅವರು ಸಂಸತ್‌ನ ಒಳ ಪ್ರವೇಶ ಮಾಡಿದ್ದು ಹೇಗೆ, ಗ್ಯಾಸ್ ಸಿಲಿಂಡರ್ ಅನ್ನು ತಮ್ಮ ಜತೆಗೆ ತಂದದ್ದು ಹೇಗೆ ಎನ್ನುವುದೇ ಅಚ್ಚರಿಯ ವಿಚಾರ. ಇಬ್ಬರು ದಾಳಿಕೋರರು ಹಳದಿ ಗ್ಯಾಸ್ ಸಿಂಪಡಿಸಿದ ತತ್‌ಕ್ಷಣವೇ ಮೊದಲು ಹೆದರಿ ಓಡಿದ್ದು ಬಿಜೆಪಿಯ ಸಂಸದರೇ ಎಂದು ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ನಿರುದ್ಯೋಗ, ಭ್ರಷ್ಟಾಚಾರದ ಸಮಸ್ಯೆ ಯಿಂದಲೇ ಆರು ಮಂದಿ ಪ್ರತಿಭಟನೆ ನಡೆಸಿದ್ದಾರೆ ಎಂದು ಮತ್ತೂಮ್ಮೆ ಪ್ರತಿಪಾದಿಸಿದ್ದಾರೆ.
ಗೋವಾ, ಬಿಹಾರ, ಕರ್ನಾಟಕ, ನಾಗಾಲ್ಯಾಂಡ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ನೇತೃತ್ವದ “ಇಂಡಿಯಾ’ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿಪಕ್ಷಗಳ ಸಂಸದರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಸಂಸತ್ ಭದ್ರತಾ ಲೋಪಕ್ಕೆ ಎಲ್ಲ ಸಂಸದರು ಒಟ್ಟಾಗಿ ಖಂಡನೆ ವ್ಯಕ್ತಪಡಿಸಬೇಕಾಗಿತ್ತು. ವಯನಾಡ್ ಸಂಸದರಿಗೆ ಇನ್ನೂ ಪ್ರೌಢಿಮೆ ಬಂದಿಲ್ಲ.
ಅನುರಾಗ್ ಠಾಕೂರ್, ಕೇಂದ್ರ ಸಚಿವ
ಇಬ್ಬರು ದಾಳಿಕೋರರು ಲೋಕಸಭೆಗೆ ಬಂದು ಹಳದಿ ಗ್ಯಾಸ್ ಸಿಂಪಡಿಸಿದ ತಕ್ಷಣವೇ ಮೊದಲು ಓಡಿ ಹೋದದ್ದು ಬಿಜೆಪಿ ಸಂಸದರು. ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದ್ದರಿಂದಲೇ ಅವರು ಪ್ರತಿಭಟನೆ ನಡೆಸಿದ್ದಾರೆ.
ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ
ಖರ್ಗೆ ಪಿಎಂ: ಕೋಪಗೊಂಡ ನಿತೀಶ್‌ಗೆ ಸಮಾಧಾನ ಹೇಳಿದ ರಾಹುಲ್?
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಫೋನ್ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬುಧವಾರ ಹೊಸದಿಲ್ಲಿಯಲ್ಲಿ ನಡೆದಿದ್ದ “ಇಂಡಿಯಾ’ ಒಕ್ಕೂಟದ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದಕ್ಕೆ ಜೆಡಿಯು ನಾಯಕ ಕೋಪಗೊಂಡಿದ್ದರು ಎಂಬ ಬಗ್ಗೆ ರಾಹುಲ್ ವಿವರಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಮಂತ್ರಿ ಹುದ್ದೆ ವಿಚಾರವಲ್ಲದೆ, ಜನವರಿಯ ಒಳಗಾಗಿ ಸ್ಥಾನ ಹೊಂದಾಣಿಕೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಆದರೆ ಈ ಬಗ್ಗೆ ಸೂಕ್ತ ಸ್ಪಂದನೆ ವ್ಯಕ್ತವಾಗಲಿಲ್ಲ ಎನ್ನಲಾಗಿದೆ. ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ನಿತೀಶ್ ಕುಮಾರ್ ಜತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸಂಸದರನ್ನು ಅಮಾನತು ಮಾಡಬೇಕು ಎಂಬ ಉದ್ದೇಶ ಸರಕಾರಕ್ಕೆ ಇರಲಿಲ್ಲ. ಪ್ರತಿಭಟನೆ ಬೇಡವೆಂದರೂ ಅವರು ಅದಕ್ಕೆ ಸ್ಪಂದಿಸಲಿಲ್ಲ. ಕೆಲವು ವಿಪಕ್ಷಗಳ ಸಂಸದರನ್ನು ಅಮಾನತು ಮಾಡಿದ ಬಳಿಕ ಕೆಲವರು ನಮ್ಮನ್ನೂ ಅಮಾನತು ಮಾಡಿ ಎಂದು ಕೋರಿಕೆ ಸಲ್ಲಿಸಿದ್ದರು.
ಪ್ರಹ್ಲಾದ್ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ
ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷ 48 ಕ್ಷೇತ್ರಗಳ ಪೈಕಿ 23 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಹಿಂದಿನ ಸಂದರ್ಭಗಳಲ್ಲಿಯೂ ಕೂಡ ಇಷ್ಟೇ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೆವು.
ಸಂಜಯ ರಾವತ್, ಶಿವಸೇನೆ ಉದ್ಧವ್ ಬಣದ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.