![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 6, 2024, 10:09 PM IST
ನವದೆಹಲಿ: ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿರುವ ಭಾರತದಲ್ಲಿ ಹೂಡಿಕೆ ಮಾಡಲು ಅನೇಕ ಜಾಗತಿಕ ಬೃಹತ್ ಕಂಪನಿಗಳು ತುದಿಗಾಲಿನಲ್ಲಿ ನಿಂತಿವೆ. ವಾಲ್‌ಸ್ಟ್ರೀಟ್‌ನಂತಹ ಪ್ರಮುಖ ಜಾಗತಿಕ ವಿತ್ತೀಯ ಕಂಪನಿಗಳು ಚೀನಾದಿಂದ ತಮ್ಮ ಹೂಡಿಕೆಯನ್ನು ಭಾರತಕ್ಕೆ ಸ್ಥಳಾಂತರಿಸುತ್ತಿವೆ.
ಇದೇ ವೇಳೆ ಮುಂದಿನ ದಶಕದಲ್ಲಿ ಭಾರತವೇ ಹೂಡಿಕೆಗೆ ಅತ್ಯುತ್ತಮ ತಾಣ ಎಂದು ವಾಲ್‌ಸ್ಟ್ರೀಟ್, ಗೋಲ್ಡ್‌ಮ್ಯಾನ್ ಸ್ಯಾಚ್, ಮೋರ್ಗನ್ ಸ್ಟಾ éನ್ಲಿಯಂಥ ಜಾಗತಿಕ ವಿತ್ತೀಯ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
ಮಾರ್ಷಲ್ ವೇಸ್ ಕಂಪನಿಯು ಭಾರತದಲ್ಲಿ 62 ಬಿಲಿಯನ್ ಡಾಲರ್(5.14 ಲಕ್ಷ ಕೋಟಿ ರೂ.) ಹೂಡಿಕೆ ಮಾಡಿದೆ. ಅಮೆರಿಕ ನಂತರ ಮಾರ್ಷಲ್ ವೇಸ್ ಭಾರತದಲ್ಲೇ ಅತ್ಯಂತ ಹೆಚ್ಚಿನ ಹೂಡಿಕೆ ಮಾಡಿದೆ. ಜತೆಗೆ ಸ್ವಿಜರ್‌ಲ್ಯಾಂಡ್ ಮೂಲದ ವೊಂಟೊಬೆಲ್ ಹೋಲ್ಡಿಂಗ್ ಎಜಿ ಮತ್ತು ಜಾನಸ್ ಹೆಂಡರ್ಸನ್ ಗ್ರೂಪ್ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಅಲ್ಲದೇ ಜಪಾನ್‌ನ ಚಿಲ್ಲರೆ ಮಾರುಕಟ್ಟೆಯ ಕಂಪನಿಗಳು ಚೀನಾ ಬದಲಿಗೆ ಭಾರತದತ್ತ ಮುಖ ಮಾಡುತ್ತಿವೆ.
“ಭಾರತದತ್ತ ಜಾಗತಿಕ ಕಂಪನಿಗಳು ಆಕರ್ಷಣೆಯಾಗಲು ಅನೇಕ ಕಾರಣಗಳಿವೆ. ಆ ಪೈಕಿ ಒಂದು, ಇದು ಚೀನಾದಂತೆ ಅಲ್ಲ. ಅಲ್ಲದೇ ಭಾರತದಲ್ಲಿ ನಿಜವಾದ ದೀರ್ಘಕಾಲಿನ ಬೆಳವಣಿಗೆಗೆ ವ್ಯಾಪಕ ಅವಕಾಶವಿದೆ’ ಎಂದು ಸಿಂಗಾಪುರದ ಎಂ ಆ್ಯಂಡ್ ಜಿ ಇನ್ವೆಸ್ಟ್‌ಮೆಂಟ್‌ನ ಏಷ್ಯನ್ ಇಕ್ವಿಟೀಸ್ ಪೋರ್ಟ್‌ಫೋಲಿಯೋ ಮ್ಯಾನೇಜರ್ ವಿಕಾಸ್ ಪರ್ಶದ್ ಅಭಿಪ್ರಾಯಪಟ್ಟಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.