2021 ರ ಆಗಸ್ಟ್ ತಿಂಗಳಲ್ಲಿ 15 ರಾಷ್ಟ್ರಗಳ ಅಂಗಸಂಸ್ಥೆಯ ನೇತೃತ್ವ ವಹಿಸಲಿರುವ ಭಾರತ
Team Udayavani, Jun 20, 2020, 7:44 PM IST
ನ್ಯೂಯಾರ್ಕ್ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ (ತಾತ್ಕಾಲಿಕ) ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುವ ಭಾರತ, 2021 ರ ಆಗಸ್ಟ್ ತಿಂಗಳಲ್ಲಿ 15 ರಾಷ್ಟ್ರಗಳ ಅಂಗಸಂಸ್ಥೆಯ ನೇತೃತ್ವ ವಹಿಸಲಿದೆ.
ಇಂಗ್ಲಿಷ್ ವರ್ಣಮಾಲೆಯ ಅನುಸಾರವಾಗಿ ಪ್ರತಿ ಸದಸ್ಯ ರಾಷ್ಟ್ರಗಳು ಒಂದು ತಿಂಗಳ ಕಾಲ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಪಡೆದು ಕಾರ್ಯ ನಿರ್ವಹಿಸುತ್ತವೆ. ವಿಶ್ವಸಂಸ್ಥೆ ವಕ್ತಾರರ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭಾರತದ ಸರದಿಯು ಮುಂದಿನ ವರ್ಷ ಆಗಸ್ಟ್ ತಿಂಗಳಿನಲ್ಲಿ ಬರಲಿದ್ದು, ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಅಲ್ಲದೇ 2022 ರಲ್ಲಿ ಕೂಡ ಮತ್ತೂಮ್ಮೆ ಒಂದು ತಿಂಗಳ ಕಾಲ ಈ ಅವಕಾಶ ದೊರೆಯಲಿದೆ.
ಭಾರತ, ನಾರ್ವೆ, ಐರ್ಲೆಂಡ್, ಮೆಕ್ಸಿಕೊ ಮತ್ತು ಕೀನ್ಯಾ ದೇಶಗಳು ಯುಎನ್ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರಗಳಾಗಿ ಬುಧವಾರ ಆಯ್ಕೆಯಾಗಿದ್ದು, ಚುನಾವಣೆಯಲ್ಲಿ 193 ಸದಸ್ಯ ರಾಷ್ಟ್ರಗಳು ಭಾಗಿಯಾಗಿದ್ದವು.
ಭಾರತವು 184 ಮತಗಳನ್ನು ಪಡೆದು, 2021-22ರ ಎರಡು ವರ್ಷಗಳ ಅವಧಿಗೆ ಸ್ಥಾನ ಪಡೆದುಕೊಂಡಿದ್ದು, ಈ ಮೂಲಕ ಭಾರತವು 7ನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವದ ಹುದ್ದೆಗೇರಿದ್ದು, 2021ರ ಜನವರಿಯಲ್ಲಿ ಟುನೀಶಿಯಾ ಅಧ್ಯಕ್ಷ ಸ್ಥಾನ ವಹಿಸಲಿದೆ. ಆ ಬಳಿಕ ಯುಕೆ (ರಷ್ಯಾ), ಯುಎಸ್ (ಅಮೆರಿಕಾ), ವಿಯೆಟ್ನಾಂ, ಚೀನ, ಎಸ್ಟೋನಿಯಾ, ಫ್ರಾನ್ಸ್, ಭಾರತ, ಐರ್ಲೆಂಡ್, ಕೀನ್ಯಾ, ಮೆಕ್ಸಿಕೊ ಮತ್ತು ನೈಜರ್ ದೇಶಗಳು ತಲಾ ಒಂದೊಂದು ತಿಂಗಳ ಕಾಲ ಭದ್ರತಾ ಮಂಡಳಿಯನ್ನು ನಡೆಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.