ಚೇತೇಶ್ವರ್ ಪೂಜಾರ ಸೆಂಚುರಿ ಬಾರಿಸಲಿ: ಗಾವಸ್ಕರ್ ಹಾರೈಕೆ
Team Udayavani, Feb 18, 2023, 7:42 AM IST
ಚೇತೇಶ್ವರ್ ಪೂಜಾರ 100ನೇ ಟೆಸ್ಟ್ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯ ಆಟಗಾರನಾಗಿ ಮೂಡಿಬರಲಿ ಎಂಬುದಾಗಿ ಲೆಜೆಂಡ್ರಿ ಓಪನರ್ ಸುನೀಲ್ ಗಾವಸ್ಕರ್ ಹೇಳಿದರು. ಅವರು 100ನೇ ಟೆಸ್ಟ್ ಆಡಲಿಳಿದ ಪೂಜಾರ ಅವರಿಗೆ ಕ್ಯಾಪ್ ನೀಡಿ ಗೌರವಿಸುವ ಸಂದರ್ಭದಲ್ಲಿ ಹಾರೈಸಿದರು.
“ನೂರನೇ ಟೆಸ್ಟ್ ಕ್ಲಬ್‌ಗ ಸ್ವಾಗತ. ನೀವು ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗನಾಗಬೇಕೆಂಬುದು ನನ್ನ ಹಾರೈಕೆ. ಇದರಿಂದ ಹೊಸದಿಲ್ಲಿ ಟೆಸ್ಟ್‌ನಲ್ಲಿ ಮತ್ತೂಂದು ಗೆಲುವಿಗೆ ನಿಮ್ಮಿಂದ ಬುನಾದಿ ನಿರ್ಮಾಣಗೊಳ್ಳಲಿ. ಕಠಿನ ದುಡಿಮೆ ಮತ್ತು ಅಪಾರ ಆತ್ಮವಿಶ್ವಾಸಕ್ಕೆ ನೀವೊಂದು ರೋಲ್ ಮಾಡೆಲ್…’ ಎಂದು ಗಾವಸ್ಕರ್ ಗುಣಗಾನಗೈದರು. ಕ್ಯಾಪ್ ಜತೆಗೆ “100 ಟೆಸ್ಟ್ ಮ್ಯಾಚಸ್’ ಎಂದು ಬಂಗಾರ ವರ್ಣದಲ್ಲಿ ಕೆತ್ತಿದ ಸ್ಮರಣಿಕೆಯೊಂದನ್ನು ಪೂಜಾರ ಅವರಿಗೆ ನೀಡಲಾಯಿತು.
“ನಿಮ್ಮಂಥ ಲೆಜೆಂಡ್ರಿ ಕ್ರಿಕೆಟಿಗರೇ ನನಗೆ ಸ್ಫೂರ್ತಿ. ಬಾಲ್ಯದಲ್ಲೇ ನಾನು ಭಾರತ ಪರ ಆಡುವ ಕನಸು ಕಾಣುತ್ತಿದ್ದೆ. ಆದರೆ 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆಂದು ಭಾವಿಸಿದವನೇ ಅಲ್ಲ. ಟೆಸ್ಟ್ ಕ್ರಿಕೆಟೇ ನಿಜವಾದ ಕ್ರಿಕೆಟ್ ಎಂದು ನಂಬಿದವನು ನಾನು. ಬದುಕು ಮತ್ತು ಟೆಸ್ಟ್ ಪಂದ್ಯಗಳ ನಡುವೆ ಬಹಳಷ್ಟು ಸಾಮ್ಯಗಳಿವೆ. ಕಠಿನ ಸಂದರ್ಭದಲ್ಲಿ ಹೋರಾಡಿದರೆ ಖಂಡಿತವಾಗಿಯೂ ಬಹಳ ಎತ್ತರಕ್ಕೇರಬಹುದು ಎಂಬುದು ಇಲ್ಲಿನ ಪಾಠ’ ಎಂದು ಪೂಜಾರ ಪ್ರತಿಕ್ರಿಯಿಸಿದರು.
ತನ್ನನ್ನು ಬೆಂಬಲಿಸಿದ ಕುಟುಂಬ, ಮಿತ್ರರು, ಬಿಸಿಸಿಐ, ಮಾಧ್ಯಮ, ಸಹ ಆಟಗಾರರು ಹಾಗೂ ಸಹಾಯಕ ಸಿಬಂದಿಗೆಲ್ಲ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಪೂಜಾರ ಅವರ ಪತ್ನಿ, ಪುತ್ರಿ, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.