ಭಾರತ-ನ್ಯೂಜಿಲ್ಯಾಂಡ್: ವಿಶ್ವಕಪ್ ಹಿನ್ನೆಲೆಯ ವನಿತಾ ಏಕದಿನ ಸರಣಿ
Team Udayavani, Feb 12, 2022, 6:30 AM IST
ಕ್ವೀನ್ಸ್‌ಟೌನ್ (ನ್ಯೂಜಿಲ್ಯಾಂಡ್): ತಮ್ಮ ನ್ಯೂಜಿಲ್ಯಾಂಡ್ ಪ್ರವಾಸವನ್ನು ಟಿ20 ಸೋಲಿನೊಂದಿಗೆ ಆರಂಭಿಸಿದ ಭಾರತದ ವನಿತೆಯರು, ಇದೀಗ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸುಧಾರಿತ ಪ್ರದರ್ಶನ ನೀಡುವ ಯೋಜನೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಸರಣಿಯ ಮೊದಲ ಪಂದ್ಯ ಶನಿವಾರ ಇಲ್ಲಿ ನಡೆಯಲಿದೆ. ಮುಂದಿನ ತಿಂಗಳ ಏಕದಿನ ವಿಶ್ವಕಪ್ ಕೂಟಕ್ಕೆ ಇದೊಂದು ಮಹತ್ವದ ಅಭ್ಯಾಸ.
ಸ್ಮತಿ ಮಂಧನಾ ಗೈರಲ್ಲಿ ಏಕೈಕ ಟಿ20 ಪಂದ್ಯವಾಡಿದ ಭಾರತ 18 ರನ್ನುಗಳ ಸೋಲಿಗೆ ತುತ್ತಾಗಿತ್ತು. ಇನ್ನೂ ಕ್ವಾರಂಟೈನ್‌ನಲ್ಲಿಯೇ ಇರುವ ಮಂಧನಾ ಮೊದಲ ಏಕದಿನಕ್ಕೂ ಲಭ್ಯರಾಗುವುದಿಲ್ಲ. ಈ ಕೊರತೆಯನ್ನು ತುಂಬುವುದು ಭಾರತಕ್ಕೆ ನಿಜಕ್ಕೂ ಒಂದು ಸವಾಲು. ಹಾಗೆಯೇ ಪೇಸ್ ಬೌಲರ್‌ಗಳಾದ ರೇಣುಕಾ ಸಿಂಗ್ ಮತ್ತು ಮೇಘನಾ ಸಿಂಗ್ ಅವರೂ ಕ್ವಾರಂಟೈನ್‌ನಲ್ಲಿದ್ದಾರೆ.
ಆದರೆ ಅನುಭವಿ ಮಿಥಾಲಿ ರಾಜ್ ಉಪಸ್ಥಿತಿಯಲ್ಲಿ ತಂಡ ಉತ್ತಮ ಹೋರಾಟ ಸಂಘಟಿಸುವ ವಿಶ್ವಾಸವಿದೆ. ಮಂಧನಾ ಗೈರಲ್ಲಿ ಯಾಸ್ತಿಕಾ ಭಾಟಿಯಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅನುಭವಿ ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಇದನ್ನೂ ಓದಿ:ಸಿಡ್ನಿ: ಶ್ರೀಲಂಕಾ ವಿರುದ್ಧ ಮೊದಲ ಟಿ-20 ಪಂದ್ಯ ಗೆದ್ದ ಆಸ್ಟ್ರೇಲಿಯಾ
ಉತ್ತಮ ವೇದಿಕೆ
“ನಮಗೆ ಪ್ರತಿಯೊಂದು ಸರಣಿಯೂ ಬಹಳ ಮುಖ್ಯ. ಅದರಲ್ಲೂ ಈ ಸರಣಿಯ ಮಹತ್ವ ಇನ್ನಷ್ಟು ಹೆಚ್ಚು. ಮುಂದಿನ ತಿಂಗಳು ಇಲ್ಲಿಯೇ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ತಂಡದ ಎಲ್ಲ ಸಮಸ್ಯೆಗಳನ್ನು ಬಗೆಹರಿ ಸಿಕೊಳ್ಳಲು ಇದೊಂದು ಉತ್ತಮ ವೇದಿಕೆ. ಇಲ್ಲಿ ಎಲ್ಲರೂ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಿದೆ. ನಾವು ಭರವಸೆಯ ದೊಡ್ಡ ಮೂಟೆಯನ್ನು ಹೊತ್ತು ಈ ಸರಣಿ ಆಡಲಿಳಿಯಲಿದ್ದೇವೆ’ ಎಂಬುದಾಗಿ ಮಿಥಾಲಿ ರಾಜ್ ಹೇಳಿದರು.
ಜನವರಿ 2019ರ ನಂತರದ ಇತ್ತಂಡಗಳ ಏಕದಿನ ಸಾಧನೆಯನ್ನು ಗಮನಿಸಿದರೆ ಇಲ್ಲಿ ಭಾರತವೇ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಭಾರತ 23 ಪಂದ್ಯಗಳನ್ನಾಡಿದ್ದು, 12ರಲ್ಲಿ ಜಯ ಸಾಧಿಸಿದೆ. 11ರಲ್ಲಿ ಸೋತಿದೆ. ನ್ಯೂಜಿಲ್ಯಾಂಡ್ ಕೂಡ 23 ಪಂದ್ಯಗಳನ್ನಾಡಿದ್ದು, ಕೇವಲ ಮೂರನ್ನು ಗೆದ್ದಿದೆ. 20 ಪಂದ್ಯಗಳಲ್ಲಿ ಎಡವಿದೆ.
ಭಾರತಕ್ಕೆ ಸವಾಲು
ನ್ಯೂಜಿಲ್ಯಾಂಡಿನ ಶೀತಗಾಳಿ ಮತ್ತು ಥಂಡಿ ವಾತಾ ವರಣಕ್ಕೆ ಭಾರತ ಒಗ್ಗಿಕೊಳ್ಳುವುದು ಮುಖ್ಯ. ಏಕದಿನ ಪಂದ್ಯಗಳು ಫೆ. 12, 15, 18, 22 ಮತ್ತು 24ರಂದು ಕ್ವೀನ್ಸ್ ಟೌನ್‌ನಲ್ಲಿ ನಡೆಯಲಿವೆ. ಇದೊಂದು ಸಣ್ಣ ಮೈದಾನ. ಇದು ಕೂಡ ಪ್ರವಾಸಿಗರಿಗೆ ಸವಾಲಾಗಿ ಕಾಡಲಿದೆ. ಭಾರತೀಯ ಕಾಲಮಾನದಂತೆ ಮುಂಜಾನೆ 3.30ಕ್ಕೆ ಪಂದ್ಯ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.