Indian Army: ಜಗತ್ತಿನ ಪ್ರಬಲ ಸೇನೆ- ದೇಶಕ್ಕೆ 4ನೇ ರ್‍ಯಾಂಕ್
"ಗ್ಲೋಬಲ್ ಫೈರ್ ಪವರ್" ಅಧ್ಯಯನದ ಉಲ್ಲೇಖ- ಫಲಕೊಟ್ಟ ಮೋದಿ ಸರ್ಕಾರದ ಆತ್ಮನಿರ್ಭರ ಘೋಷಣೆ
Team Udayavani, Jan 31, 2024, 10:15 PM IST
ನವದೆಹಲಿ: ಏಷ್ಯಾದಲ್ಲಿ ಚೀನಾಕ್ಕಿಂತಲೂ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಭಾರತ ಮಹತ್ವದ ಸಾಧನೆ ಮಾಡಿದೆ. ಜಗತ್ತಿನ ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠವಾಗಿರುವ ಸೇನಾಪಡೆ ಹೊಂದಿರುವ ರಾಷ್ಟ್ರಗಳ ಪೈಕಿ ದೇಶಕ್ಕೆ 4ನೇ ಸ್ಥಾನವಿದೆ. ಈ ಬಗ್ಗೆ “ಗ್ಲೋಬಲ್ ಫೈರ್ ಪವರ್’ ಎಂಬ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ.
ಜಗತ್ತಿನ ಒಟ್ಟು 145 ರಾಷ್ಟ್ರಗಳು ಹೊಂದಿರುವ ವಿವಿಧ ತಾಂತ್ರಿಕ ಮತ್ತು ಶಸ್ತ್ರಾಸ್ತ್ರ ಸೇರಿದಂತೆ 60 ಅಂಶಗಳನ್ನು ಪರಿಗಣಿಸಿ ರ್‍ಯಾಂಕ್‌ಗಳನ್ನು ಬಿಡುಗಡೆ ಮಾಡಿದೆ. ಆಯಾ ಸರ್ಕಾರಗಳು ನೀಡುತ್ತಿರುವ ಮೊತ್ತ, ಭೌಗೋಳಿಕ ಪರಿಸರವೂ ಅದರಲ್ಲಿ ಒಳಗೊಂಡಿದೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದೇಶದಲ್ಲಿಯೇ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡುವುದರ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದರಿಂದಾಗಿ ಜಗತ್ತಿನ ಪ್ರಮುಖ ಕಂಪನಿಗಳು ಇಲ್ಲಿಯೇ ಉತ್ಪಾದನೆ ಮಾಡುವಂತಾಗಿದೆ.
ಈ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ. ರಷ್ಯಾ, ಚೀನಾ 2 ಮತ್ತು 3ನೇ ಸ್ಥಾನದಲ್ಲಿವೆ. ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ 9ನೇ ಸ್ಥಾನದಲ್ಲಿ ಇದೆ. ಇನ್ನು ಭಾರತ ಮತ್ತೂಂದು ಪುಟ್ಟ ನೆರೆಯ ರಾಷ್ಟ್ರ ಕೊನೆಯ ಹತ್ತು ರಾಷ್ಟ್ರಗಳ ಸಾಲಿನಲ್ಲಿದೆ.
ಪ್ರಬಲ ಸೇನೆ ಹೊಂದಿರುವ ರಾಷ್ಟ್ರಗಳು
ರಾಷ್ಟ್ರ ರ್‍ಯಾಂಕ್
ಅಮೆರಿಕ 1
ರಷ್ಯಾ 2
ಚೀನಾ 3
ದ.ಕೊರಿಯಾ 5
ಯು.ಕೆ. 6
ಜಪಾನ್ 7
ಟರ್ಕಿ 8
ಪಾಕಿಸ್ತಾನ 9
ಇಟೆಲಿ 10
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.