ಟರ್ಕಿ ಸಂತ್ರಸ್ತರಿಗೆ ಭಾರತೀಯ ವೈದ್ಯರೇ ದಾರಿದೀಪ; ದಿನವೊಂದಕ್ಕೆ 400 ಮಂದಿಗೆ ಚಿಕಿತ್ಸೆ
ಸೇನೆಯಿಂದ 60 ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ
Team Udayavani, Feb 13, 2023, 6:55 AM IST
ಇಸ್ತಾಂಬುಲ್: ಭೂಕಂಪದಿಂದ ತತ್ತರಿಸಿಹೋಗಿರುವ ಟರ್ಕಿ ಜನರ ಪಾಲಿಗೆ ಭಾರತೀಯ ವೈದ್ಯರು ಅಕ್ಷರಶಃ ದಾರಿದೀಪದಂತಾಗಿದ್ದು, ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಹಗಲು ರಾತ್ರಿಯೆನ್ನದೆ ದಿನಕ್ಕೆ 400ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವಶೇಷಗಳಡಿ ಸಿಕ್ಕಿಬಿದ್ದ ಜನರು, ನರಳಾಟ, ಸಾವು, ನೋವುಗಳ ನಡುವೆಯೇ ಪ್ರಕೃತಿಯ ವೈಪರೀತ್ಯವನ್ನು ಭಾರತೀಯ ಯೋಧರು ಹಾಗೂ ವೈದ್ಯರು ಮೀರಿ ನಿಂತು ಸಹಾಯ ಹಸ್ತಚಾಚಿದ್ದಾರೆ.
ಕನಿಷ್ಠ ತಾಪಮಾನವು ಮೈನಸ್ಗೆ ತಲುಪಿರುವ ನಡುವೆಯೇ, 90 ಯೋಧರ ತಂಡ 60 ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಿದೆ. ಇದರಲ್ಲಿ 800ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಿದ್ದು,10 ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗಿದೆ. ಭಾರತೀಯ ವೈದ್ಯರ ಪರಿಶ್ರಮಕ್ಕೆ ಟರ್ಕಿ ಜನರು ಧನ್ಯವಾದ ಅರ್ಪಿಸಿ, ನೀವು ನಮ್ಮ ಭರವಸೆ ಎಂದು ಭಾವುಕರಾಗಿದ್ದಾರೆ.
7ನೇ ವಿಮಾನ:
ಭಾರತದಿಂದ ಪರಿಹಾರ ಸಾಮ್ರಾಗಿ ಹೊತ್ತ 7ನೇ ವಿಮಾನ ಭಾನುವಾರ ಟರ್ಕಿ ತಲುಪಿದೆ. ಇದರಲ್ಲಿ 13 ಟನ್ ವೈದ್ಯಕೀಯ ನೆರವು, ಹೊದಿಕೆಗಳು, ವೆಂಟಿಲೇಟರ್ಗಳು ಸೇರಿ 24 ಟನ್ ಇತರೆ ಅಗತ್ಯ ಸಾಮಗ್ರಿಗಳೂ ಸೇರಿವೆ.
ಜೀವ ಲೆಕ್ಕಿಸದೇ ಮಕ್ಕಳ ರಕ್ಷಣೆ
ಭೂಕಂಪ ಸಂಭವಿಸಿದ ವೇಳೆ ಜನರು ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಓಡುತ್ತಿದ್ದರೆ, ಟರ್ಕಿಯ ಗಾಂಜಿಯಾಟೆಪ್ನ ಆಸ್ಪತ್ರೆಯೊಂದರಲ್ಲಿ ನಿಜಾಮ್ ಹಾಗೂ ಗಜ್ವಲ್ ಕ್ಯಾಲಿಸ್ಕನ್ ಎನ್ನುವ ಇಬ್ಬರು ನರ್ಸ್ಗಳು ತಮ್ಮ ಜೀವವನ್ನೂ ಲೆಕ್ಕಿಸದೇ ನವಜಾತ ಶಿಶುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈಗ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
128 ಗಂಟೆ ಬಳಿಕ 2 ತಿಂಗಳ ಕಂದನ ರಕ್ಷಣೆ
ಇತ್ತೀಚೆಗೆ ಅವಶೇಷಗಳಡಿಯಲ್ಲಿ ಮಗುವೊಂದು ಜನಿಸಿದರೆ, ಇತ್ತ ಅದೇ ಅವಶೇಷಗಳಡಿಯಲ್ಲಿ 2 ತಿಂಗಳ ಹಸುಗೂಸೊಂದು ಜೀವ ಬಿಗಿಹಿಡಿದು ಜೀವಿಸಿದೆ. ಬರೋಬರಿ 128 ಗಂಟೆ ಬಳಿಕ ಆ ಕಂದನನ್ನು ರಕ್ಷಿಸಲಾಗಿದೆ. ರಕ್ಷಿಸಿದವರ ಬೆಚ್ಚಗಿನ ಕೈ ಸ್ಪರ್ಶದ ಬಳಿಕ ಹಾಲಿಗಾಗಿ ಹಾತೊರೆದು, ಬಾಯಿ ಚಪ್ಪರಿಸುವ ಮಗುವಿನ ಮುಗ್ಧಮುಖ ಟರ್ಕಿಯ ದುರಂತಕ್ಕೆ ವಿಧಿಯನ್ನು ಶಪಿಸುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.