US: ಅಮೆರಿಕ ರಾಜಕೀಯದಲ್ಲಿ ಭಾರತೀಯರ ರಾಜ್ಯಭಾರ
Team Udayavani, Nov 9, 2023, 10:19 PM IST
ವಾಷಿಂಗ್ಟನ್: ಅಮೆರಿಕ ರಾಜಕೀಯ ರಂಗದಲ್ಲಿ ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳ ಛಾಪು ಹೆಚ್ಚುತ್ತಿರುವ ನಡುವೆಯೇ ಇತ್ತೀಚೆಗಷ್ಟೇ ದೇಶದ ಹಲವು ಭಾಗಗಳಲ್ಲಿ ನಡೆದ ಸ್ಥಳೀಯ ಮತ್ತು ಪ್ರಾಂತೀಯ ಮಟ್ಟದ ಚುನಾವಣೆಗಳಲ್ಲಿ ಸರಿಸುಮಾರು 10 ಮಂದಿ ಭಾರತೀಯ ಅಮೆರಿಕನ್ನರು ವಿಜಯಪತಾಕೆ ಹಾರಿಸಿದ್ದಾರೆ. ಈ ಪೈಕಿ ಬಹುತೇಕರು ಡೆಮಾಕ್ರಟಿಕ್ ಪಕ್ಷದವರೇ ಆಗಿದ್ದಾರೆ.
ವರ್ಜೀನಿಯಾದಿಂದ ಹೈದರಾಬಾದ್ ಮೂಲದ ಗಜಾಲಾ ಹಶ್ಮೀ, ಸುಹಾಸ್ ಸುಬ್ರಮಣ್ಯಂ, ಕಣ್ಣನ್ ಶ್ರೀನಿವಾಸನ್ ಆಯ್ಕೆಯಾಗಿ ಮೂವರು ಸೆನೆಟರ್‌ಗಳು ಭಾರತೀಯ ಮೂಲದವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದೇ ರೀತಿ ನ್ಯೂಜೆರ್ಸಿಯಿಂದ ವಿನ್‌ಗೋಪಾಲ್, ರಾಜ್ ಮುಖರ್ಜಿ ಹಾಗೂ ಬಲ್ವಿರ್ ಸಿಂಗ್ ಮರು ಆಯ್ಕೆಯಾಗಿದ್ದಾರೆ. ಇನ್ನು ಪೆನ್ಸಿಲ್ವೇನಿಯಾದಲ್ಲಿ ನೀಲ್ ಮಖೀಜಾ ಹಾಗೂ ಇಂಡಿಯಾನದ ಕಾರ್ಮೆಲ್ ಸಿಟಿ ಕೌನ್ಸಿಲ್‌ನಲ್ಲಿ ಡಾ. ಅನಿತಾ ಜೋಶಿ, ಗಹನ್ನಾ ಸಿಟಿಯಲ್ಲಿ ಪ್ರಿಯಾ ತಮಿಳರಸನ್ ಮತ್ತು ಹಾರ್ಟ್‌ಫೋರ್ಡ್‌ನಲ್ಲಿ ಅರುಣನ್ ಅರುಲಂಪಾಲಂ ಗೆಲುವು ಸಾಧಿಸಿದ್ದಾರೆ. ಈ ಬೆಳವಣಿಗೆ ಅಮೆರಿಕದಲ್ಲಿ ಭಾರತೀಯ ಸಮುದಾಯದ ಸಬಲೀಕರಣವನ್ನು ಪ್ರತಿಬಿಂಬಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.