ಆಕ್ಸ್ಫರ್ಡ್ ನಿಘಂಟಿಗೆ “ದೇಶ್, ಬಿಂದಾಸ್’ ಸೇರ್ಪಡೆ
ಭಾರತೀಯ ಇಂಗ್ಲಿಷ್ನ 800ಕ್ಕೂ ಹೆಚ್ಚು ಪದಗಳ ಸೇರ್ಪಡೆ
Team Udayavani, Feb 1, 2023, 7:35 AM IST
ನವದೆಹಲಿ: “ದೇಶ್’ ಮತ್ತು “ಬಿಂದಾಸ್’ ಒಳಗೊಂಡಂತೆ ಭಾರತೀಯ ಇಂಗ್ಲಿಷ್ಗೆ ಸಂಬಂಧಿಸಿದ 800ಕ್ಕೂ ಹೆಚ್ಚು ಪದಗಳ ಉಚ್ಚಾರಣೆ ಮಾರ್ಗದರ್ಶಿ ಮತ್ತು ಆಡಿಯೋ ಈಗ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ ಲಭ್ಯವಿದೆ.
ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರಸ್ ಪ್ರಕಾರ, ಭಾರತೀಯ ಇಂಗ್ಲಿಷ್ ಪದಗಳ ಸೇರ್ಪಡೆಯಿಂದಾಗಿ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನ ಉಚ್ಚಾರಣೆಗಳಿಗೆ ಸೇರ್ಪಡೆಯಾಗಿರುವ ಜಗತ್ತಿನ ವಿವಿಧ ಭಾಷೆಗಳ ಪದಗಳ ಸಂಖ್ಯೆ 16ಕ್ಕೆ ತಲುಪಿದೆ.
“ಬ್ರಿಟಿಷ್ ಇಂಗ್ಲಿಷ್ ಮತ್ತು ಅಮೆರಿಕನ್ ಇಂಗ್ಲಿಷ್ ಹೊರತುಪಡಿಸಿ ಇಂಗ್ಲಿಷ್ನ ವಿವಿಧ ಉಚ್ಚಾರಣೆಗಳಲ್ಲಿ ಆಡಿಯೋವನ್ನು ಸೇರಿಸಲು ಮತ್ತು ವಿಸ್ತರಿಸಲು ನಾವು ಕೆಲಸವನ್ನು ಪ್ರಾರಂಭಿಸಿದಾಗಿನಿಂದ, ಭಾರತೀಯ ಇಂಗ್ಲಿಷ್ ನಮ್ಮ ಆದ್ಯತೆಗಳಲ್ಲಿ ಒಂದಾಗಿದೆ. ಜತೆಗೆ ನಮ್ಮ ದೊಡ್ಡ ಸವಾಲುಗಳಲ್ಲಿ ಕೂಡ ಇದು ಒಂದು,’ ಎಂದು ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನ ಉಚ್ಚಾರಣೆ ವಿಭಾಗದ ಸಂಪಾದಕಿ ಡಾ. ಕ್ಯಾಥರೀನ್ ಸಾಂಗ್ಸ್ಟರ್ ಹೇಳಿದರು.
ಹೊಸದಾಗಿ ನಿಘಂಟಿನಲ್ಲಿ ಉಚ್ಚಾರಣೆಯ ಲಿಖೀತರೂಪ ಮತ್ತು ಆಡಿಯೊದಲ್ಲಿ ಭಾರತೀಯ ಪದಗಳಾದ “ದಿಯಾ’, “ಬಚ್ಚಾ’, “ಅಲ್ಮೆರಾ’, ಸೇರಿದಂತೆ ಅನೇಕ ಭಾರತೀಯ ಇಂಗ್ಲಿಷ್ ಪದಗಳು ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.