ಉತ್ಪಾದನಾ ಪ್ರಶಸ್ತ ರಾಷ್ಟ್ರಗಳ ಪೈಕಿ ಭಾರತಕ್ಕೆ 3ನೇ ಸ್ಥಾನ
Team Udayavani, Jul 19, 2020, 1:46 PM IST
ಹೊಸದಿಲ್ಲಿ: ಕೋವಿಡ್ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಜಾಗತಿಕ ಉತ್ಪಾದನಾ ವಲಯಗಳಿಗೆ ಪ್ರಶಸ್ತವಾಗಿರುವ 48 ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನ ಪಡೆದಿದೆ. ಚೀನ ಮೊದಲ ಸ್ಥಾನದಲ್ಲಿದ್ದು, 2ನೇ ಸ್ಥಾನ ಅಮೆರಿಕದ ಪಾಲಾಗಿದೆ ಎಂದು ಜಾಗತಿಕ ಉತ್ಪಾದನಾ ಅಪಾಯ ಸೂಚ್ಯಂಕ (ಎಂಆರ್‌ಐ) ವರದಿ ಹೇಳಿದೆ.
4ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ ಒಂದು ಸ್ಥಾನ ಏರಿಕೆ ಕಂಡಿದೆ. ಉತ್ಪಾದನಾ ವೆಚ್ಚ ಮತ್ತು ಕಾರ್ಯಾಚರಣೆ ವ್ಯವಸ್ಥೆಯ ಮಾನದಂಡಗಳನ್ನು ಆಧರಿಸಿ ರ್‍ಯಾಂಕ್ ಪಟ್ಟಿ ಸಿದ್ಧಪಡಿಸಲಾಗಿದೆ. ಯುರೋಪ್, ಅಮೆರಿಕ, ಏಷ್ಯಾ- ಪೆಸಿಫಿಕ್ ರಾಷ್ಟ್ರಗಳ ಪೈಕಿ ಭಾರತ ಅಗ್ರಪಂಕ್ತಿಯಲ್ಲಿ ನಿಂತಿರುವುದು ಕೊರೊನೋತ್ತರ ಆರ್ಥಿಕತೆಗೆ ಬಲ ಸಿಕ್ಕಂತಾಗಿದೆ. ಕೋವಿಡ್ ಬಿಕ್ಕಟ್ಟಿನ ಈ ಸನ್ನಿವೇಶದಲ್ಲಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ.
“ಜಾಗತಿಕ ಉತ್ಪಾದನೆಗೆ ಹೆಚ್ಚು ಸೂಕ್ತವಾದ ಸ್ಥಳಗಳಲ್ಲಿ ಭಾರತ ಅಗ್ರಪಂಕ್ತಿಯಲ್ಲಿ ನಿಂತಿರುವುದು ಆಶಾದಾಯಕ ಬೆಳವಣಿಗೆ’ ಎಂದು ಕುಶ್ಮನ್ ಆ್ಯಂಡ್ ವೇಕ್‌ಫೀಲ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಅನ್ಸುಲ್ ಜೈನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೆಚ್ಚ ವಿಭಾಗದಲ್ಲೂ ಭಾರತ 3ನೇ ಸ್ಥಾನ ಪಡೆದಿದ್ದು, ಚೀನ ಮತ್ತು ವಿಯೆಟ್ನಾಂ ಮುಂಚೂಣಿಯಲ್ಲಿವೆ. ಕಾರ್ಮಿಕ ವೆಚ್ಚ, ನಿರ್ವಹಣ ವೆಚ್ಚಗಳು ಕಡಿಮೆ ಇರುವ ದೇಶಗಳನ್ನು ಮುಖ್ಯವಾಗಿ ಪರಿಗಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.