Cars: ವಿದೇಶಗಳಲ್ಲಿ ಭಾರತೀಯ ನಿರ್ಮಿತ “ಕಾರು”ಬಾರು- ಭಾರತದ ವಾಹನಗಳಿಗೆ ಹೆಚ್ಚಿದ ಬೇಡಿಕೆ
- ಕಳೆದ ವರ್ಷ 2.61 ಲಕ್ಷ ಕಾರುಗಳು ರಫ್ತು
Team Udayavani, Jan 7, 2024, 9:45 PM IST
ಮುಂಬಯಿ: ಭಾರತದ ಕಾರು ಮಾರುಕಟ್ಟೆಯು ವಿದೇಶಗಳಲ್ಲೂ ಹವಾ ಎಬ್ಬಿಸುತ್ತಿದ್ದು, ಮೇಡ್ ಇನ್ ಇಂಡಿಯಾ ಕಾರುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗುತ್ತಿದೆ.
ಟೊಯೊಟಾ, ವೊಕ್ಸ್‌ವ್ಯಾಗನ್, ಹ್ಯುಂಡೈ, ಮಹೀಂದ್ರಾ, ಟಾಟಾ ಮೋಟಾರ್ಸ್, ಹೋಂಡಾ ಮತ್ತು ಸ್ಕೋಡಾ ಕಂಪೆನಿಯ ಕಾರುಗಳ ರಫ್ತು 2023ರಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಕಾರು ಮಾರುಕಟ್ಟೆಯ ದಿಗ್ಗಜ ಮಾರುತಿ ಸುಜುಕಿ ಕಳೆದ ವರ್ಷ ಬರೋಬ್ಬರಿ 2,61,700 ಪ್ರಯಾಣಿಕ ವಾಹನಗಳನ್ನು ರಫ್ತು ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
2023ರಲ್ಲಿ ಭಾರತದಿಂದ ಒಟ್ಟು 6,71,384 ಕಾರುಗಳು ರಫ್ತಾಗಿದ್ದು, 2022ಕ್ಕೆ ಹೋಲಿಸಿದರೆ ಇದು ಶೇ. 4ರಷ್ಟು ಏರಿಕೆ ಕಂಡಿದೆ ಎಂದು ಜಾಟೋ ಡೈನಾಮಿಕ್ಸ್‌ನ ದತ್ತಾಂಶ ತಿಳಿಸಿದೆ. ಭಾರತದಿಂದ ರಫ್ತಾದ ಒಟ್ಟು ಕಾರುಗಳ ಪೈಕಿ ಶೇ. 40ರಷ್ಟು ಮಾರುತಿ ಸುಜುಕಿಯದ್ದು ಎಂದಿದೆ.
ಆಟೋಮೊಬೈಲ್ ಮತ್ತು ಬಿಡಿಭಾಗಗಳ ಉದ್ದಿಮೆಗಳಿಗೆ ಭಾರತ ಸರಕಾರ ಘೋಷಿಸಿದ ಉತ್ಪಾದನೆ ಆಧರಿತ ಪ್ರೋತ್ಸಾಹ ಧನ (ಪಿಎಲ್‌ಐ) ಯೋಜನೆಯಿಂದಾಗಿ ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆಗೆ ಉತ್ತೇಜನ ಸಿಕ್ಕಿದ್ದು ಕೂಡ ರಫ್ತು ಹೆಚ್ಚಳವಾಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಇದೇ ವೇಳೆ 2023ರ ಒಳಗಾಗಿ ದೇಶದಲ್ಲಿ ತಯಾರಾಗುವ ಪ್ರಯಾಣಿಕ ವಾಹನಗಳ ಪೈಕಿ ಶೇ. 50ರಷ್ಟು ರಫ್ತಾಗುವಂತೆ ಗುರಿ ಹಾಕಿಕೊಳ್ಳಿ ಎಂದು ಆಟೋಮೊಬೈಲ್ ಸಂಸ್ಥೆಗಳಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಕರೆ ನೀಡಿದ್ದಾರೆ.
ಬೇಡಿಕೆ ಹೆಚ್ಚಲು ಕಾರಣ?
– ಭಾರತದಲ್ಲಿ ಉತ್ಪಾದನೆ ವೆಚ್ಚ ಕಡಿಮೆ
– ಕೌಶಲಯುತ ಮಾನವ ಸಂಪನ್ಮೂಲ
– ಕಾರ್ಮಿಕ ವೆಚ್ಚವೂ ಕಡಿಮೆ
– ವಿಶ್ವ ದರ್ಜೆಯ ಪೂರೈಕೆದಾರರ ಲಭ್ಯತೆ
2023ರಲ್ಲಿ ರಫ್ತಾದ ಕಾರುಗಳ ಸಂಖ್ಯೆ ಕಂಪೆನಿ ಕಾರುಗಳು ಶೇಕಡಾವಾರು ಹೆಚ್ಚಳ
ಮಾರುತಿ ಸುಜುಕಿ 2,61,700 1
ಹ್ಯುಂಡೈ 1,64,950 11
ವೋಕ್ಸ್‌ವ್ಯಾಗನ್ 40,920 29
ಹೋಂಡಾ 25,527 9
ಟೊಯೊಟಾ 16,000 5.9
ಮಹೀಂದ್ರಾ 12,555 28
ಟಾಟಾ ಮೋಟಾರ್ಸ್ 2,194 57
ಸ್ಕೋಡಾ 1,530 431
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.