“ಮಿಸೆಸ್ ವರ್ಲ್ಡ್’ನಲ್ಲಿ ಭಾರತದ್ದೇ ಬೆಸ್ಟ್ ಉಡುಗೆ
Team Udayavani, Jan 17, 2022, 7:30 AM IST
ಲಾಸ್‌ವೇಗಸ್: ಅಮೆರಿಕದ ಲಾಸ್‌ವೇಗಸ್‌ನಲ್ಲಿ ನಡೆದ “ಮಿಸೆಸ್ ವರ್ಲ್ಡ್ 2022′ ಸೌಂದರ್ಯ ಸ್ಪರ್ಧೆಯ ಉಡುಗೆಯ ಸುತ್ತಿ ನಲ್ಲಿ ಭಾರತದ ನವದೀಪ್ ಕೌರ್ ಜಯಗಳಿಸಿ ದ್ದಾರೆ. ಕುಂಡಲಿನಿ ಚಕ್ರವನ್ನು ಆಧರಿಸಿ ನಿರ್ಮಿಸಲಾಗಿದ್ದ ಉಡುಗೆಯನ್ನು ತೊಟ್ಟಿದ್ದರು.
ಈ ವಿಶೇಷ ಉಡುಗೆಯನ್ನು ಫ್ಯಾಶನ್ ಡಿಸೈನರ್ ಎಗ್ಗೀ ಜಾಸ್ಮಿನ್ ಅವರು ವಿನ್ಯಾಸ ಗೊಳಿಸಿದ್ದಾರೆ. ಬಂಗಾರದ ಬಣ್ಣದಲ್ಲಿದ್ದ ಉಡುಗೆಯಲ್ಲಿ ಹಾವು, ದಂತದಂತಹ ವಿಶೇಷ ವಿನ್ಯಾಸ ಮಾಡಲಾಗಿತ್ತು.ಒಡಿಶಾದ ಸುಂದರಗಢ ಜಿಲ್ಲೆಯವರಾಗಿರುವ ನವದೀಪ್, ಎಂಜಿನಿಯರಿಂಗ್ ಮತ್ತು ಎಂಬಿಎ ಪದವೀಧರೆ ಯಾಗಿದ್ದು, ಬ್ಯಾಂಕ್‌ನಲ್ಲಿ ಸಹಾಯಕ ಮ್ಯಾನೇಜರ್ ಆಗಿ ಹಾಗೂ ಕಾಲೇಜಿನದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಏಳು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅವರಿಗೆ 6 ವರ್ಷದ ಮಗನಿದ್ದಾನೆ. ಅವರು ಕಳೆದ ವರ್ಷ ಮಿಸೆಸ್ ಇಂಡಿಯಾ ವರ್ಲ್ಡ್ 2021 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.
ಇದನ್ನೂ ಓದಿ:ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ
ಅಮೆರಿಕದ ಸುಂದರಿಗೆ ಕಿರೀಟ : ಮಿಸೆಸ್
ವರ್ಲ್ಡ್ ನ ಅಂತಿಮ ಸುತ್ತಿನಲ್ಲಿ ಅಮೆರಿಕದ ಶೈಲಿನ್ ಫೋರ್ಡ್ ಜಯ ಸಾಧಿಸಿದ್ದು, ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 58 ರಾಷ್ಟ್ರಗಳ ಸ್ಪರ್ಧಾಳುಗಳಿದ್ದ ಸ್ಪರ್ಧೆಯಲ್ಲಿ ಗೆದ್ದ ಶೈಲಿನ್‌ಗೆ, ಮಿಸೆಸ್ ವರ್ಲ್ಡ್ 2021 ಆಗಿರುವ ಕೇಟ್ ಶ್ನೆàಯರ್ಡ್ ಕಿರೀಟ ತೊಡಿಸಿದ್ದಾರೆ. ಭಾರತ ಮೂಲದವರು ಹಾಗೂ ಅರಬ್ ಸಂಯುಕ್ತ ಸಂಸ್ಥಾನದ ನಿವಾಸಿಯಾಗಿರುವ ದೇಬಾಂಜಲಿ ಕಮಸ್ತ್ರ ಎರಡನೇ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದ ಅವರು 14 ವರ್ಷಗಳ ಹಿಂದೆ ದುಬಾೖಗೆ ಸ್ಥಳಾಂತರಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.