ದೇಶದ ರಫ್ತು ಪ್ರಮಾಣ ಶೇ.24.22ಕ್ಕೆ ಏರಿಕೆ
Team Udayavani, May 4, 2022, 6:35 AM IST
ಹೊಸದಿಲ್ಲಿ: ದೇಶದ ರಫ್ತು ಕ್ಷೇತ್ರದಲ್ಲಿ ಶೇ.24.22ರಷ್ಟು ಸಾಧನೆ ಮಾಡಲಾಗಿದೆ. ಎಪ್ರಿಲ್ಗೆ ಸಂಬಂಧಿಸಿದಂತೆ ಇರುವ ಮಾಹಿತಿ ಇದಾಗಿದ್ದು, ಅಮೆರಿಕದ ಡಾಲರ್ ಮೌಲ್ಯದಲ್ಲಿ ಲೆಕ್ಕಾಚಾರ ಹಾಕುವುದಿದ್ದರೆ 38.19 ಬಿಲಿಯನ್ ಡಾಲರ್ ಮೊತ್ತವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ಅವಧಿಯಲ್ಲಿ ಕಚ್ಚಾ ತೈಲದ ಉತ್ಪಾದನೆ ಶೇ.81.21ರಷ್ಟು ಏರಿಕೆಯಾಗಿದೆ. ಗಮನಾರ್ಹ ಅಂಶವೆಂದರೆ, ಚಿನ್ನದ ಆಮದು ಪ್ರಮಾಣ 1.68 ಅಮೆರಿಕನ್ ಡಾಲರ್ಗೆ ಇಳಿಕೆಯಾಗಿದೆ. 2021ರ ಎಪ್ರಿಲ್ನಲ್ಲಿ ಅದರ ಪ್ರಮಾಣ 6.23 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು.
ಡಾಲರ್ಗೆ 94 ರೂ .- ಐಎಂಎಫ್: 2028-29ನೇ ಸಾಲಿನಲ್ಲಿ ದೇಶದ ಅರ್ಥ ವ್ಯವಸ್ಥೆ 5 ಶತಕೋಟಿ ಡಾಲರ್ ತಲುಪಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮುನ್ಸೂಚನೆ ನೀಡಿದೆ. ಫೆಬ್ರವರಿಯಲ್ಲಿ ಮಾತನಾಡಿದ್ದ ಐಎಂಎಂಫ್ನ ಮುಖ್ಯ ಆರ್ಥಿಕ ಸಲಹೆಗಾರ 2025-26ನೇ ಸಾಲಿನಲ್ಲಿ ದೇಶದ ಅರ್ಥ ವ್ಯವಸ್ಥೆ 5 ಶತಕೋಟಿ ಡಾಲರ್ಗೆ ತಲುಪಲಿದೆ ಎಂದು ಹೇಳಿದ್ದರು. ಇದರ ಜತೆಗೆ ಅಮೆರಿಕದ ಡಾಲರ್ ಎದುರು 94 ರೂ. ಆಗಲಿದೆ ಎಂದೂ ಮುನ್ಸೂಚನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐಎಂಎಫ್ ನಿರೀಕ್ಷಿಸಿದ್ದಂತೆ 2022-23ನೇ ಸಾಲಿನಲ್ಲಿ ದೇಶದ ಜಿಡಿಪಿ ಶೇ.13.4ರಂತೆ ಅಭಿವೃದ್ಧಿ ಸಾಧಿಸಲಿದೆ ಎಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.