ಭಾರತದ G-20 ಅಧ್ಯಕ್ಷತೆ ಮತ್ತು ಹೊಸ ಬಹುಪಕ್ಷೀಯತೆ ಉದಯ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಲೇಖನ
Team Udayavani, Nov 30, 2023, 12:41 AM IST
ಭಾರತ ಜಿ20 ಅಧ್ಯಕ್ಷತೆ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಭಾರತವು ಯಥಾಸ್ಥಿತಿಗೆ ಪರ್ಯಾಯವಾಗಿ ಹೊಸ ಜಗತ್ತನ್ನು ಆವಿಷ್ಕರಿಸಿತು ಎಂದರೆ ಅದು ಉತ್ಪ್ರೇಕ್ಷೆಯಾಗದು. ಜಿಡಿಪಿ ಕೇಂದ್ರಿತ ಪ್ರಗತಿಯಿಂದ ಮಾನವ ಕೇಂದ್ರಿತ ಪ್ರಗತಿಯತ್ತ ಬದಲಾಗುವ ಪ್ರಕ್ರಿಯೆಗೆ ಭಾರತ ಚಾಲನೆ ನೀಡಿತು.
ಭಾರತ ಜಿ20 ಅಧ್ಯಕ್ಷತೆ ವಹಿಸಿಕೊಂಡು ಗುರುವಾರಕ್ಕೆ 365 ದಿನಗಳಾಗಿವೆ. ಇದು “ವಸುದೈವ ಕುಟುಂಬಕಂ”, ಅಂದರೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಚೈತನ್ಯವನ್ನು ಪ್ರತಿಬಿಂಬಿಸುವ, ಪುನಃ ಬದ್ಧತೆ ತೋರುವ ಮತ್ತು ಪುನರುಜ್ಜೀವನಗೊಳಿಸುವ ಕ್ಷಣವಾಗಿದೆ.
ಕಳೆದ ವರ್ಷ ನಾವು ಜವಾಬ್ದಾರಿಯನ್ನು ವಹಿಸಿಕೊಂಡಾಗ, ಇಡೀ ಜಗತ್ತು ಬಹುಮುಖೀ ಸವಾಲುಗಳನ್ನು ಎದುರಿಸುತ್ತಿದ್ದವು. ಅವುಗಳೆಂದರೆ, ಕೋವಿಡ್ -19 ಸಾಂಕ್ರಾಮಿಕದಿಂದ ಚೇತರಿಕೆ, ಹೆಚ್ಚುತ್ತಿರುವ ಹವಾಮಾನ ಅಪಾಯಗಳು, ಹಣಕಾಸು ಅಸ್ಥಿರತೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಸಾಲ ಬಿಕ್ಕಟ್ಟು, ಬಹುಪಕ್ಷೀಯತೆ ಕುಸಿತ ಸೇರಿ ಹಲವು ಸವಾಲುಗಳಿದ್ದವು. ಸಂಘರ್ಷಗಳು ಮತ್ತು ಸ್ಪರ್ಧೆಗಳ ನಡುವೆಯೇ, ಅಭಿವೃದ್ಧಿ ಸಹಕಾರಕ್ಕೆ ತೊಂದರೆಯಾಯಿತು, ಪ್ರಗತಿಗೆ ಹಿನ್ನಡೆಯಾಯಿತು.
ಜಿ20 ಅಧ್ಯಕ್ಷತೆ ವಹಿಸಿಕೊಂಡ ಅನಂತರ ಭಾರತವು ಯಥಾಸ್ಥಿತಿಗೆ ಪರ್ಯಾಯವಾಗಿ ಹೊಸ ಜಗತ್ತನ್ನು ನೀಡಲು ಪ್ರಯತ್ನಿಸಿತು, ಅದು ಜಿಡಿಪಿ ಕೇಂದ್ರಿತ ಪ್ರಗತಿಯಿಂದ ಮಾನವ ಕೇಂದ್ರಿತ ಪ್ರಗತಿಯತ್ತ ಬದಲಾಗುವುದು. ಭಾರತವು ನಮ್ಮನ್ನು ವಿಭಜಿಸುವ ಬದಲು ನಮ್ಮನ್ನು ಒಗ್ಗೂಡಿಸುವುದನ್ನು ಜಗತ್ತಿಗೆ ನೆನಪು ಮಾಡಿಕೊಡುವ ಗುರಿಯನ್ನು ಹೊಂದಿದೆ. ಅಂತಿಮವಾಗಿ ಸಮಾಲೋಚನೆಗಳು ವಿಕಸನಗೊಳ್ಳಬೇಕಾಗಿತ್ತು. ಕೆಲವರ ಹಿತಾಸಕ್ತಿಗಳು ಹಲವರ ಆಕಾಂಕ್ಷೆಗಳಿಗೆ ದಾರಿ ಮಾಡಿಕೊಡಬೇಕಾಗಿತ್ತು. ಅದಕ್ಕಾಗಿ ನಮಗೆ ತಿಳಿದಿರುವಂತೆ ಬಹುಪಕ್ಷೀಯತೆಯ ಮೂಲಭೂತ ಸುಧಾರಣೆ ಅತ್ಯಗತ್ಯವಾಗಿತ್ತು.
ಒಗ್ಗೂಡಿದ (ಎಲ್ಲವನ್ನೂ ಒಳಗೊಂಡ), ಮಹತ್ವಾಕಾಂಕ್ಷೆಯ, ಕ್ರಿಯೆ ಆಧರಿತ ಮತ್ತು ನಿರ್ಣಾಯಕ – ಈ ನಾಲ್ಕು ಪದಗಳು ಜಿ20 ಅಧ್ಯಕ್ಷರಾಗಿ ನಮ್ಮ ಕಾರ್ಯವಿಧಾನವನ್ನು ವ್ಯಾಖ್ಯಾನಿಸುತ್ತವೆ ಮತ್ತು ಎಲ್ಲಾ ಜಿ20 ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ ಹೊಸದೆಹಲಿ ನಾಯಕ ಘೋಷಣೆ (ಎನ್‌ಡಿಎಲ್‌ಡಿ), ಈ ತತ್ತÌಗಳನ್ನು ಪಾಲಿಸುವ ನಮ್ಮ ಬದ್ಧತೆಯ ಸಂಕೇತವಾಗಿದೆ.
ಒಗ್ಗೂಡಿದ, ಅಂದರೆ ಎಲ್ಲರನ್ನೂ ಒಳಗೊಳ್ಳುವುದು ನಮ್ಮ ಅಧ್ಯಕ್ಷತೆಯ ಹೃದಯಭಾಗವಾಗಿದೆ. ಆಫ್ರಿಕಾ ಒಕ್ಕೂಟ (ಎಯು) ಅನ್ನು ಜಿ20ಯ ಖಾಯಂ ಸದಸ್ಯರನ್ನಾಗಿ ಸೇರ್ಪಡೆ ಮಾಡಿದ್ದರಿಂದ ಆಫ್ರಿಕಾದ 55 ರಾಷ್ಟ್ರಗಳನ್ನು ವೇದಿಕೆಗೆ ಸಂಯೋಜಿಸಿತು. ಇದು ಜಾಗತಿಕ ಜನಸಂಖ್ಯೆಯ ಶೇ. 80ರಷ್ಟು ಒಳಗೊಳ್ಳುವಂತೆ ವಿಸ್ತರಣೆ ಮಾಡಿತು. ಈ ಸಕ್ರಿಯ ನಿಲುವು ಜಾಗತಿಕ ಸವಾಲುಗಳು ಮತ್ತು ಅವಕಾಶಗಳ ಕುರಿತು ಹೆಚ್ಚು ಸಮಗ್ರ ಸಂವಾದಕ್ಕೆ ಎಡೆಮಾಡಿಕೊಟ್ಟಿದೆ.
ಭಾರತವು ಎರಡು ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ “ವಾಯ್ಸ… ಆಫ್ ದಿ ಗ್ಲೋಬಲ್ ಸೌತ್ ಸಮ್ಮಿಟ್’ – ಜಾಗತಿಕ ದಕ್ಷಿಣದ ಧ್ವನಿಯಾಗುವ ಮೂಲಕ ಬಹುಪಕ್ಷೀಯತೆಯ ಹೊಸ ಉದಯಕ್ಕೆ ಕಾರಣವಾಯಿತು. ಭಾರತವು ಅಂತಾರಾಷ್ಟ್ರೀಯ ಚರ್ಚೆಯಲ್ಲಿ ಜಾಗತಿಕ ದಕ್ಷಿಣದ ಕಾಳಜಿಯನ್ನು ಮುಖ್ಯವಾಹಿನಿಗೆ ತಂದಿತು ಮತ್ತು ಜಾಗತಿಕ ನಿರೂಪಣೆಯನ್ನು ರೂಪಿಸುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಸೂಕ್ತ ಸ್ಥಾನವನ್ನು ಪಡೆದುಕೊಳ್ಳುವ ಯುಗಕ್ಕೆ ನಾಂದಿ ಹಾಡಿತು.
ಎಲ್ಲರನ್ನೂ ಒಳಗೊಳ್ಳುವಿಕೆ ಜಿ20ಕ್ಕೆ ಭಾರತದ ದೇಶೀಯ ವಿಧಾನವನ್ನು ಸಹ ಪರಿಚಯಿಸಿತು, ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಸೂಕ್ತವಾದ ಪೀಪಲ್ಸ… ಪ್ರಸಿಡೆನ್ಸಿ ಎನಿಸಿತು. “ಜನ ಭಾಗಿದಾರಿ’ (ಜನರ ಪಾಲ್ಗೊಳ್ಳುವಿಕೆ) ಕಾರ್ಯಕ್ರಮಗಳ ಮೂಲಕ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು (ಯೂನಿಯನ್ ಟೆರಿಟರೀಸ್) ಪಾಲುದಾರರಾಗಿ ಒಳಗೊಂಡಿರುವ ಜಿ20 1.4 ಶತಕೋಟಿ ನಾಗರಿಕರನ್ನು ತಲುಪಿದೆ ಮತ್ತು ಹಲವು ಅಂಶಗಳ ಮೇಲೆ, ಭಾರತವು ಜಿ20ರಲ್ಲಿ ಸಾಧಿಸಲೇಬೇಕಾದ ಗುರಿಗಳಿಗೆ ಹೊಂದಿಕೆಯಾಗುವ ವಿಶಾಲವಾದ ಅಭಿವೃದ್ಧಿ ಗುರಿಗಳತ್ತ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ.
2030ರ ಕಾರ್ಯಸೂಚಿಯ ನಿರ್ಣಾಯಕ ಮಧ್ಯ ಭಾಗದಲ್ಲಿ, ಭಾರತ ಜಿ20 2023 ಕ್ರಿಯಾ ಯೋಜನೆಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ ಗಳ) ಸಾಧಿಸುವ ನಿಟ್ಟಿನಲ್ಲಿ ಪ್ರಗತಿಯನ್ನು ವೇಗಗೊಳಿಸಲು, ಆರೋಗ್ಯ, ಶಿಕ್ಷಣ, ಲಿಂಗ ಸಮಾನತೆ ಮತ್ತು ಸುಸ್ಥಿರ ಪರಿಸರ ಮತ್ತಿತರ ಅಂತರ ಸಂಪರ್ಕಿತ ಸಮಸ್ಯೆಗಳನ್ನು ದೂರಮಾಡುವ ಕ್ರಮ-ಆಧಾರಿತ ವಿಧಾನವನ್ನು ಕೈಗೊಂಡಿದೆ.
ಈ ಪ್ರಗತಿಯನ್ನು ಮುನ್ನಡೆಸುವ ಪ್ರಮುಖ ವಲಯವೆಂದರೆ ಸದೃಢ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ). ಇಲ್ಲಿ ಮೊದಲಿಗೆ ಆಧಾರ್, ಯುಪಿಐ ಮತ್ತು ಡಿಜಿಲಾಕರ್‌ನಂತಹ ಡಿಜಿಟಲ್ ಆವಿಷ್ಕಾರಗಳ ಕ್ರಾಂತಿಕಾರಿ ಪರಿಣಾಮವನ್ನು ನೇರವಾಗಿ ಕಂಡ ಭಾರತವು ನಿರ್ಣಾಯಕ ಶಿಫಾರಸು ಗಳನ್ನು ಮಾಡಿದೆ. ಜಿ20ರ ಮೂಲಕ ನಾವು ಡಿಜಿಟಲ್ ಪಬ್ಲಿಕ್ ಇನಾ#†ಸ್ಟ್ರಕ್ಚರ್ ರೆಪೊಸಿಟರಿ (ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಂಡಾರ)ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ, ಇದು ಜಾಗತಿಕ ತಾಂತ್ರಿಕ ಸಹಯೋಗದಲ್ಲಿ ಗಮನಾರ್ಹ ದಾಪುಗಾಲಾಗಿದೆ. 16 ದೇಶಗಳಿಂದ 50ಕ್ಕೂ ಅಧಿಕ ಡಿಪಿಐಗಳನ್ನು ಒಳಗೊಂಡಿರುವ ಈ ಭಂಡಾರವು ಅಂತರ್ಗತ ಬೆಳವಣಿಗೆಯ ಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡಲು, ಗ್ಲೋಬಲ್ ಸೌತ್ ಅನ್ನು ನಿರ್ಮಿಸಲು ಹಾಗೂ ಪಾಲನೆ ಮಾಡಲು ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿ ಸಾಧಿಸಲು ಡಿಪಿಐಯ ಶಕ್ತಿಯನ್ನು ಬಳಸಿಕೊಳ್ಳುವುದಾಗಿದೆ.
ನಮ್ಮ ಒಂದು ಭೂಮಿ ಪರಿಕಲ್ಪನೆಗೆ, ನಾವು ತುರ್ತು, ಶಾಶ್ವತ ಮತ್ತು ಸಮಾನವಾದ ಬದಲಾವಣೆಗಳನ್ನು ತರಲು ನಾವು ಮಹತ್ವಾಕಾಂಕ್ಷೆಯ ಮತ್ತು ಎಲ್ಲರನ್ನೂ ಒಳಗೊಂಡ (ಅಂತರ್ಗತ) ಗುರಿಗಳನ್ನು ಪರಿಚಯಿಸಿದ್ದೇವೆ. “ಹಸುರು ಅಭಿವೃದ್ಧಿ ಒಪ್ಪಂದ’ ಘೋಷಣೆಯಂತೆ ಹಸಿವನ್ನು ಎದುರಿಸುವ ಮತ್ತು ಭೂಮಿಯನ್ನು ಸಂರಕ್ಷಿಸುವ ನಡುವಿನ ಆಯ್ಕೆಯ ಸವಾಲುಗಳನ್ನು ಪರಿಹರಿಸುತ್ತದೆ. ಉದ್ಯೋಗ ಮತ್ತು ಜೈವಿಕ ಪೂರಕ ವ್ಯವಸ್ಥೆಗೆ ಪೂಕರವಾಗಿ, ಹವಾಮಾನ ಬಳಕೆಯ ಪ್ರಜ್ಞೆ ಮತ್ತು ಉತ್ಪಾದನೆಯು ಭೂ ಸ್ನೇಹಿಯಾಗಿರುವ ಸಮಗ್ರ ನೀಲನಕ್ಷೆಯನ್ನು ವಿವರಿಸುತ್ತದೆ. ಜೊತೆಗೆ ಜಿ20 ಘೋಷಣೆಯು 2030ರ ವೇಳೆಗೆ ಜಾಗತಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮಹತ್ವಾಕಾಂಕ್ಷೆಯ ಮೂರು ಪಟ್ಟು ಹೆಚ್ಚಳಕ್ಕೆ ಕರೆ ನೀಡುತ್ತದೆ. ಜಾಗತಿಕ ಜೈವಿಕ ಇಂಧನ ಮೈತ್ರಿ ಸ್ಥಾಪನೆ ಮತ್ತು ಹಸುರು ಹೈಡ್ರೋಜನ್‌ಗಾಗಿ ಒಂದು ಸಂಘಟಿತ ಉತ್ತೇಜನದೊಂದಿಗೆ, ಸ್ವತ್ಛವಾದ, ಹಸುರು ಜಗತ್ತನ್ನು ನಿರ್ಮಿಸುವ ಜಿ20ಯ ಮಹತ್ವಾಕಾಂಕ್ಷೆಗಳು ನಿರಾಕರಿಸಲಾಗದು. ಇದು ಸದಾ ಭಾರತದ ನೀತಿಯಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿ (ಲೈಫ್) ಮೂಲಕ ಜಗತ್ತು ನಮ್ಮ ಅತ್ಯಂತ ಹಳೆಯ ಪ್ರಾಚೀನ ಸುಸ್ಥಿರ ಸಂಪ್ರದಾಯಗಳಿಂದ ಪ್ರಯೋಜನ ಪಡೆಯಬಹುದು.
ಅಲ್ಲದೆ, ಈ ಘೋಷಣೆಯು ನಮ್ಮ ಹವಾಮಾನ ನ್ಯಾಯ ಮತ್ತು ಸಮಾನತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಜಾಗತಿಕ ಉತ್ತರದಿಂದ ಗಣನೀಯ ಆರ್ಥಿಕ ಮತ್ತು ತಾಂತ್ರಿಕ ನೆರವಿಗೆ ಒತ್ತಾಯಿಸುತ್ತದೆ. ಇದೇ ಮೊದಲ ಬಾರಿಗೆ, ಅಭಿವೃದ್ಧಿಯ ಹಣಕಾಸಿನ ಪ್ರಮಾಣದಲ್ಲಿ ಅಗತ್ಯವಿರುವ ಭಾರಿ ಏರಿಕೆಯನ್ನು ಗುರುತಿಸಲಾಗಿದ್ದು, ಇದು ಬಿಲಿಯನ್‌ಗಳಿಂದ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳಿಗೇರಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳು 2030ರ ವೇಳೆಗೆ ತಮ್ಮ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು (ಎನ್‌ಡಿಸಿಎಸ್) ಈಡೇರಿಸಲು 5.9 ಟ್ರಿಲಿಯನ್ ಡಾಲರ್ ಅಗತ್ಯವಿದೆ ಎಂದು ಜಿ20 ಒಪ್ಪಿಕೊಂಡಿದೆ.
ಅಗತ್ಯವಿರುವ ಮಹತ್ವದ ಸಂಪನ್ಮೂಲ ಒದಗಿಸುವ ಜತಗೆ ಜಿ20 ಉತ್ತಮ, ಭಾರಿ ಮತ್ತು ಹೆಚ್ಚು ಪರಿಣಾಮಕಾರಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿತು. ಏಕಕಾಲದಲ್ಲಿ, ಭಾರತವು ವಿಶ್ವಸಂಸ್ಥೆಯ ಸುಧಾರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ, ವಿಶೇಷವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಂತಹ ಪ್ರಮುಖ ಅಂಗಗಳ ಪುನರ್ ರಚನೆಯಲ್ಲಿ, ಅದು ಹೆಚ್ಚು ಸಮಾನವಾದ ಜಾಗತಿಕ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ.
ಲಿಂಗ ಸಮಾನತೆಯು ಘೋಷಣೆಯಲ್ಲಿ ಕೇಂದ್ರಸ್ಥಾನವನ್ನು ಪಡೆದುಕೊಂಡಿತ್ತು, ಮುಂದಿನ ವರ್ಷ ಮಹಿಳಾ ಸಬಲೀಕರಣಕ್ಕೆ ಮೀಸಲಾದ ಕಾರ್ಯಕಾರಿ ಗುಂಪು (ವರ್ಕಿಂಗ್ ಗ್ರೂಪ್) ರಚನೆಯೊಂದಿಗೆ ಸಮಾಪನಗೊಂಡಿತು. ಭಾರತದ ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸಕಾಂಗ ಸಭೆಯ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲಿಡುವ ಭಾರತದ ಮಹಿಳಾ ಮೀಸಲಾತಿ ಮಸೂದೆ 2023 ಮಹಿಳಾ ನೇತೃತ್ವದ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಸಾರುತ್ತದೆ.
ಹೊಸದಿಲ್ಲಿ ಘೋಷಣೆಯು ನೀತಿ ಸುಸಂಬದ್ಧತೆ, ವಿಶ್ವಾಸಾರ್ಹ ವ್ಯಾಪಾರ ಮತ್ತು ಮಹತ್ವಾಕಾಂಕ್ಷೆಯ ಹವಾಮಾನ ಕ್ರಿಯೆಯ ಮೇಲೆ ಕೇಂದ್ರೀಕರಿಸುವ ಪ್ರಮುಖ ಆದ್ಯತೆಗಳಲ್ಲಿ ಸಹಯೋಗದ ನವೀಕೃತ ಮನೋಭಾವವನ್ನು ಒಳಗೊಂಡಿದೆ. ನಮ್ಮ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ 87 ಫಲಿತಾಂಶಗಳನ್ನು ಮತ್ತು 118 ದಾಖಲೆಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ನಮ್ಮ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತ ಭೌಗೋಳಿಕ ರಾಜಕೀಯ ವಿಷಯಗಳು ಮತ್ತು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಅವುಗಳ ಪರಿಣಾಮಗಳ ಕುರಿತು ಚರ್ಚೆಗಳನ್ನು ನಡೆಸಿತು. ಭಯೋತ್ಪಾದನೆ ಮತ್ತು ನಾಗರಿಕರ ಪ್ರಜ್ಞಾಶೂನ್ಯ ಹತ್ಯೆ ಸ್ವೀಕಾರಾರ್ಹವಲ್ಲ ಮತ್ತು ನಾವು ಅದನ್ನು ಶೂನ್ಯ-ಸಹಿಷ್ಣುತೆಯ ನೀತಿಯೊಂದಿಗೆ ಪರಿಹರಿಸಬೇಕು. ನಾವು ಹಗೆತನದ ಮೇಲೆ ಮಾನವೀಯತೆಯನ್ನು ಸಾಕಾರಗೊಳಿಸಬೇಕು ಮತ್ತು ಇದು ಯುದ್ಧದ ಯುಗವಲ್ಲ ಎಂದು ಪುನರುಚ್ಚರಿಸಬೇಕು.
ನಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಭಾರತವು ಅಸಾಧಾರಣ ವಾದುದನ್ನು ಸಾಧಿಸಿದೆ ಎಂದು ನಾನು ಸಂತೋಷಪಡುತ್ತೇನೆ: ಇದು ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸಿತು, ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸಿತು, ಅಭಿವೃದ್ಧಿಯನ್ನು ಉತ್ತೇಜಿಸಿ ವೇಗ ನೀಡಿತು ಮತ್ತು ಎಲ್ಲೆಡೆ ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಡಿತು.
ಮುಂಬರುವ ವರ್ಷಗಳಲ್ಲಿ ಜನರು, ಭೂಮಿ, ಶಾಂತಿ ಮತ್ತು ಸಮೃದ್ಧಿಗಾಗಿ ನಮ್ಮ ಸಾಮೂಹಿಕ ಹೆಜ್ಜೆಗಳ ಬದ್ಧತೆ ಪ್ರತಿಧ್ವನಿಸುತ್ತವೆ ಎಂಬ ವಿಶ್ವಾಸದಿಂದ ನಾವು ಜಿ20 ಅಧ್ಯಕ್ಷತೆಯನ್ನು ಬ್ರೆಜಿಲ್‌ಗೆ ಹಸ್ತಾಂತರ ಮಾಡುತ್ತಿದ್ದೇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.