iPhone: ಐಫೋನ್ ಉತ್ಪಾದನೆಯಲ್ಲಿ ಚೀನಾಕ್ಕೆ ಭಾರತ ಸೆಡ್ಡು?
- ತಮಿಳುನಾಡಿನಲ್ಲಿ ಐಫೋನ್ 15ರ ಉತ್ಪಾದನೆ ಆರಂಭ
Team Udayavani, Aug 18, 2023, 7:23 AM IST
ವಾಷಿಂಗ್ಟನ್: ಹಲವು ವಿನೂತನ ಅಪ್ಡೆàಟ್‌ಗಳನ್ನು ಹೊಂದಿರುವ, ನವೀನ ಐಫೋನ್-15ರ ಮೊಬೈಲ್ ಉತ್ಪಾದನೆ ಪ್ರಮಾಣ ಭಾರತದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಆ್ಯಪಲ್ ಕಂಪನಿ ಭಾರತದಲ್ಲೇ ಉತ್ಪಾದನೆಯನ್ನು ಹೆಚ್ಚಿಸಿ, ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಯೋಜಿಸಿದೆ. ಅಮೆರಿಕ ಮತ್ತು ಚೀನಾ ನಡುವೆ ಆಂತರಿಕ ಬಿಕ್ಕಟ್ಟು ಹೆಚ್ಚಿದೆ, ಚೀನಾದೊಂದಿಗೆ ವ್ಯಾಪಾರವನ್ನು ಕಡಿಮೆ ಅಮೆರಿಕ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೇ ತನ್ನ ಉತ್ಪನ್ನಗಳ ಉತ್ಪಾದನೆ ಪ್ರಮಾಣ ಹೆಚ್ಚಿಸುವುದು ಆ್ಯಪಲ್ ಉದ್ದೇಶ.
ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿರುವ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಹೊಸ ಆವೃತ್ತಿಯನ್ನು ಉತ್ಪಾದಿಸುತ್ತಿದೆ. ಚೀನಾದಿಂದ ನೂತನ ಆವೃತ್ತಿಯ ಮೊಬೈಲ್‌ಗಳು ಹಡಗನ್ನೇರಿದ ಕೆಲವೇ ವಾರಗಳಲ್ಲಿ, ಭಾರತದಲ್ಲೂ ಈ ಮೊಬೈಲ್‌ಗಳು ಲಭ್ಯವಾಗಲಿವೆ. ಇದಕ್ಕೆ ಆ್ಯಪಲ್ ಕಂಪನಿ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲು ಮಾಡಿರುವ ನಿರ್ಧಾರವೇ ಕಾರಣ.
ಐಫೋನ್ 14ಕ್ಕೆ ಮುನ್ನ ಭಾರತದಲ್ಲಿ ಜೋಡಿಸಲ್ಪಡುತ್ತಿದ್ದ ಆ್ಯಪಲ್ ಮೊಬೈಲ್‌ಗಳ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಚೀನಾದಿಂದ ಮೊಬೈಲ್‌ಗಳು ಬರುವುದೂ ತಡವಾಗುತ್ತಿತ್ತು. ಆ್ಯಪಲ್ ಕಳೆದ ವರ್ಷ ಶೇ.7ರಷ್ಟು ಮೊಬೈಲ್‌ಗಳನ್ನು ಭಾರತದಲ್ಲೇ ಉತ್ಪಾದಿಸಿತು. ಈ ಬಾರಿ ಚೀನಾಕ್ಕೆ ಸರಿಸಮನಾಗಿ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ಮೂಲಗಳು ಹೇಳಿವೆ. ಐಫೋನ್ 15 ಮಾರುಕಟ್ಟೆಗೆ ಲಭ್ಯವಾಗುವುದರ ಬಗ್ಗೆ ಸೆ.12ರಂದು ಪ್ರಕಟವಾಗುವ ಸಾಧ್ಯತೆಯಿದೆ.
3 ವರ್ಷಗಳಲ್ಲೇ ವಿನೂತನ ಅಪ್ಡೆಟ್: ಕಳೆದ ಮೂರು ವರ್ಷಗಳಲ್ಲೇ ಕಾಣಿಸದ ಅಪ್ಡೆಟ್‌ಗಳನ್ನು ಐಫೋನ್ ಹೊಸ ಆವೃತ್ತಿಯಲ್ಲಿ ಕಾಣಲು ಸಾಧ್ಯವಿದೆ. ಕ್ಯಾಮೆರಾ ಇನ್ನಷ್ಟು ಶಕ್ತಿಶಾಲಿಯಾಗಬಹುದು, ಪ್ರೊ ಮಾಡೆಲ್‌ಗೆ 3 ನ್ಯಾನೊಮೀಟರ್ ಪ್ರೊಸೆಸರ್ ಸೇರಿಕೊಳ್ಳಬಹುದು.
ಉತ್ಪಾದನೆ ತಗ್ಗಬಹುದು
ಆ್ಯಪಲ್ ಕಂಪನಿ ಐಫೋನ್ 15ರ ಉತ್ಪಾದನೆಯ ಪ್ರಮಾಣ ಕಡಿಮೆ ಮಾಡುವ ನಿರೀಕ್ಷೆಯಿದೆ. ಮೊಬೈಲ್‌ನ ಬಿಡಿಭಾಗಗಳ ಲಭ್ಯತೆ ಕಡಿಮೆಯಿರುವುದರಿಂದ ಹೀಗಾಗಬಹುದು. ಹಿಂದೆ 8.3 ಕೋಟಿ ಮೊಬೈಲ್ ಉತ್ಪಾದನೆಯಾಗಬಹುದೆಂದು ಅಂದಾಜಿಸಲಾಗಿತ್ತು, ಈಗದು 7.7 ಕೋಟಿಗಿಳಿಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.