India: ಹೆಚ್ಚುತ್ತಿದೆ ಭಾರತದ ಸಮೃದ್ಧಿ
Team Udayavani, Aug 19, 2023, 6:00 AM IST
ಭಾರತ ಅಭಿವೃದ್ಧಿ ಹೊಂದುತ್ತಿದೆ. ಇದೇ ದಿಕ್ಕಿನಲ್ಲಿ ನಡೆದು 2047ರ ವೇಳೆಗೆ ಭಾರತ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಎಸ್‌ಬಿಐ ಮತ್ತು ಪತ್ರಕರ್ತರೊಬ್ಬರ ಸಂಶೋಧನಾ ವರದಿಯನ್ನು ಆಧಾರವಾಗಿಟ್ಟುಕೊಂಡು, ದೇಶದಲ್ಲಿ ಈಗ ತೆರಿಗೆ ರಿಟರ್ನ್Õ ಫೈಲ್ ಮಾಡುತ್ತಿರುವವರ ಲೆಕ್ಕಾಚಾರದ ಮೇಲೆ ಅಭಿವೃದ್ಧಿಯ ಲೆಕ್ಕಾಚಾರ ಹಾಕಲಾಗಿದೆ. ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್‌ನಲ್ಲಿ ಮೋದಿಯವರೇ ಈ ಕುರಿತು ಬರೆದುಕೊಂಡಿದ್ದಾರೆ.
ಮಧ್ಯಮ ವರ್ಗದ ಆದಾಯ ಹೆಚ್ಚಳ
ಕಳೆದ 9 ವರ್ಷ ಅಂದರೆ, 2014ರಿಂದ 2023ರವರೆಗಿನ ಆದಾಯ ತೆರಿಗೆ ರಿಟರ್ನ್Õ ಸಲ್ಲಿಕೆಯನ್ನು ಆಧಾರವಾಗಿಟ್ಟು ಎಸ್‌ಬಿಐ ವರದಿ ರೂಪಿಸಿದೆ. ಇದರ ಪ್ರಕಾರ, 2014ರ ಆರ್ಥಿಕ ವರ್ಷದಲ್ಲಿ ವ್ಯಕ್ತಿಯೊಬ್ಬ 4.4 ಲಕ್ಷ ರೂ. ಆದಾಯ ತೆರಿಗೆ ರಿಟರ್ನ್Õ ಫೈಲ್ ಮಾಡಿದ್ದರೆ, ಪ್ರಸಕ್ತ ವರ್ಷ ಆತ 13 ಲಕ್ಷ ರೂ. ಫೈಲ್ ಮಾಡಿದ್ದಾನೆ. ಹೀಗಾಗಿ, ದೇಶದ ಮಧ್ಯಮ ವರ್ಗದವರ ಆದಾಯ ಭರಪೂರ ಹೆಚ್ಚಾಗಿದೆ ಎಂದು ಎಸ್‌ಬಿಐ ಹೇಳಿದೆ. ಇನ್ನು ಪತ್ರಕರ್ತ ಪದ್ಮನಾಭನ್ ಅವರು ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂದಿದ್ದಾರೆ.
ಪ್ರತಿ ವರ್ಗದಲ್ಲಿಯೂ ಏರಿಕೆ
ಈ ಕೆಳಗಿನ ಆದಾಯದ ವರ್ಗಗಳನ್ನು ನೋಡಿದರೆ, ಕಳೆದ 9 ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಆದಾಯ ಹೆಚ್ಚಳವಾಗಿರುವುದನ್ನು ಗಮನಿಸಬಹುದು. ಅಂದರೆ, ಸುಮಾರು 4 ಪಟ್ಟು ಹೆಚ್ಚಾಗಿದೆ.
ವ್ಯಕ್ತಿಗತ ಆದಾಯ ತೆರಿಗೆ ಸಲ್ಲಿಕೆ
5ರಿಂದ 10 ಲಕ್ಷ ರೂ. ಆದಾಯ
2013-14 – 37,02,295
2022-23 – 1,10,91,674
10ರಿಂದ 20 ಲಕ್ಷ ರೂ. ಆದಾಯ
2013-14 – 12,04,137
2022-23 – 45,54,670
20ರಿಂದ 50 ಲಕ್ಷ ರೂ. ಆದಾಯ
2013-14 – 4,10,079
2022-23 – 19,20,276
50 ಲಕ್ಷದಿಂದ 1 ಕೋಟಿ ರೂ. ಆದಾಯ
2013-14 – 80,454
2022-23 – 3,32,065
1 ಕೋಟಿ ರೂ.ಗಿಂತ ಹೆಚ್ಚು ಆದಾಯ
2013-14 – 46,384
2022-23 – 1,69,890
ತೆರಿಗೆ ಪಾವತಿಸುವವರ ಸಂಖ್ಯೆಯೂ ಹೆಚ್ಚು
2014ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಈಗ ಎಲ್ಲ ರಾಜ್ಯಗಳಲ್ಲೂ ತೆರಿಗೆ ಪಾವತಿದಾರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಹಲವಾರು ಪಟ್ಟು ಹೆಚ್ಚಳವಾಗಿದೆ. ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಳವಾಗಿದೆ ಎಂದರೆ, ಕೇವಲ ಅಭಿವೃದ್ದಿಯಷ್ಟೇ ಅಲ್ಲ, ಅವರ ಜೀವನ ಮಟ್ಟವೂ ಸುಧಾರಣೆಯಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರ
2014 – 5,15,838
2023 – 18,52,754
ಗುಜರಾತ್
2014 – 3,60,148
2023 – 14,02,636
ಉತ್ತರ ಪ್ರದೇಶ
2014 – 1,65,903
2023 – 11,92,012
ಕರ್ನಾಟಕ
2014 – 2,10,997
2023 – 7,41,902
ಉತ್ತರ ಪ್ರದೇಶ ಉತ್ತಮ
ಮೋದಿಯವರೇ ಬರೆದುಕೊಂಡಿರುವಂತೆ, ಉತ್ತರ ಪ್ರದೇಶದಲ್ಲಿ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ. 2014ರಲ್ಲಿ ಕೇವಲ 1.65 ಲಕ್ಷ ಮಂದಿ ತೆರಿಗೆ ಕಟ್ಟುತ್ತಿದ್ದರೆ, ಈಗ 11.92 ಲಕ್ಷ ಮಂದಿ ಪಾವತಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್‌ನಲ್ಲೂ ತೆರಿಗೆ ಪಾವತಿದಾರರು ಹೆಚ್ಚಾಗಿದ್ದಾರೆ. ಇದೇ ಹಾದಿಯಲ್ಲಿ ಮುನ್ನಡೆದರೆ, 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬ ಕನಸನ್ನು ನನಸು ಮಾಡಬಹುದು ಎಂದು ಮೋದಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.