Honey Bee: ಜೇನುನೊಣಗಳಿಂದ ಅಡಿಕೆ ಕೃಷಿಗೆ ಪರೋಕ್ಷ ಲಾಭ
Team Udayavani, Oct 5, 2023, 12:39 AM IST
ಎರೆಹುಳದಂತೆ ಜೇನುನೊಣಗಳೂ ಕೂಡ ರೈತಮಿತ್ರ. ಜೇನು ನೊಣಗಳಿಂದ ಜೇನುತುಪ್ಪ ಪ್ರತ್ಯಕ್ಷ ಲಾಭವಾದರೆ ಅದಕ್ಕಿಂತಲೂ ಹೆಚ್ಚಿನ ಲಾಭವನ್ನು ಪರಾಗಸ್ಪರ್ಶದ ಮೂಲಕ ನಮಗೆ ಅರಿವಿಲ್ಲದೆಯೇ ಪಡೆಯಬಹುದು. ಜೇನು ನೊಣಗಳಲ್ಲಿ ಹಲವು ವಿಧಗಳಿದ್ದರೂ ರೈತರಿಗೆ ಸಾಕಲು ಅನು ಕೂಲಕರ ಮೊಜಂಟಿ ಮತ್ತು ತುಡುವೆ ಜೇನು ಕುಟುಂಬ.
ತುಡುವೆ ಜೇನುನೊಣಗಳು ಆಹಾರಕ್ಕಾಗಿ ಸುಮಾರು ಒಂದೆರಡು ಕಿಲೋಮೀಟರ್ ದೂರದ ತನಕ ಹೋಗಿ ಬರುತ್ತವೆ. ವಿಜ್ಞಾನ ಎಷ್ಟೇ ಮುಂದುವರಿದರೂ ಜೇನುತುಪ್ಪವನ್ನು ತಯಾರಿಸಲು ಇಂದಿಗೂ ಸಾಧ್ಯವಾಗಿಲ್ಲ. ಜೇನುನೊಣಗಳು ಪುಷ್ಪರಸವನ್ನು ಹೀರಿ ಗೂಡಿಗೆ ಮರಳುವ ಸಂದರ್ಭದಲ್ಲಿ ಕೆಲವು ಕಿಣ್ವಗಳು ಸೇರಿ ಅದು ಜೇನುತುಪ್ಪವಾಗಿ ಪರಿವರ್ತನೆ ಹೊಂದುತ್ತದೆ. ಜೇನುನೊಣಗಳು ಅದನ್ನು ಗೂಡಿನೊಳಗೆ ಇರುವ ಎರಿಗಳ ಕೋಶಗಳೊಳಗೆ ಉಗುಳುತ್ತವೆ. ಆದ್ದರಿಂದ ಇದನ್ನು ಮಧೂಚ್ಛಿಷ್ಟ ಎನ್ನುತ್ತಾರೆ. ದೇವತಾಕಾರ್ಯಗಳಿಗೆ ಈ ಜೇನುತುಪ್ಪ ಅಗತ್ಯ. ಅಡಿಕೆ ಕೃಷಿಕರು ತುಡುವೆ ಜೇನು ಕುಟುಂಬಗಳನ್ನು ಸಾಕುವುದರಿಂದ ಹೆಚ್ಚಿನ ಪರಾಗಸ್ಪರ್ಶ ಆಗಿ ಇಪ್ಪತ್ತೆçದರಿಂದ ಮೂವತ್ತು ಶೇಕಡಾ ಇಳುವರಿ ಹೆಚ್ಚಾಗುತ್ತದೆ.
ಬೇರೆ ಜಾತಿಯ ಜೇನುನೊಣಗಳಿಗಿಂತ ತುಡುವೆ ಜೇನುನೊಣಗಳಲ್ಲಿ ಪರಾಗಸ್ಪರ್ಶದ ಸಾಧ್ಯತೆ ಹೆಚ್ಚು. ಈ ಜಾತಿಯ ಜೇನುನೊಣಗಳಿಗೆ ಹೂವುಗಳ ಮೇಲೆ ನಿಷ್ಠೆ ಅಧಿಕ. ಒಂದು ಜಾತಿಯ ಹೂವುಗಳಲ್ಲಿ ಪರಾಗ ಮತ್ತು ಪುಷ್ಪರಸ ಮುಗಿಯುವ ತನಕ ಅದೇ ಜಾತಿಯ ಹೂವುಗಳ ಬಳಿಗೇ ಹೋಗುತ್ತವೆ. ತಮ್ಮ ಹಿಂಗಾಲುಗಳೆರಡರಲ್ಲೂ ಇರುವ ಒಂದೊಂದು ಪರಾಗ ಕುಕ್ಕೆಯಲ್ಲೂ ಮುಂಗಾಲುಗಳ ಸಹಾಯದಿಂದ ಒತ್ತೂತ್ತಾಗಿ ಪರಾಗಗಳನ್ನು ತುಂಬಿಕೊಂಡು ಗೂಡಿಗೆ ತಂದು ಎರಿಗಳ ಕೋಶಗಳಲ್ಲಿ ಹಾಕುತ್ತವೆ. ಗೂಡಿನೊಳಗೆ ಇರುವ ಜೇನುನೊಣಗಳು ಜೇನುತುಪ್ಪದೊಂದಿಗೆ ಈ ಪರಾಗವನ್ನು ಮರಿನೊಣಗಳಿಗೆ ಉಣಿಸುತ್ತವೆ.
ಪರಾಗವನ್ನು ತರುವಾಗ ಕಾಲಿನ ಮೂಲಕ ಪರಾಗಸ್ಪರ್ಶ ಕ್ರಿಯೆಯಲ್ಲಿ ನೆರವಾಗುವುದಲ್ಲದೆ ಪರಾಗ ಮತ್ತು ಪುಷ್ಪರಸವನ್ನು ತರಲು ಹೂವಿನ ಮೇಲೆ ಜೇನ್ನೊಣಗಳು ಹೊರಳಾಡುವಾಗ ಮೈಯಲ್ಲಿ ಇರುವ ಚಿಕ್ಕ ಚಿಕ್ಕ ರೋಮಗಳಲ್ಲೂ ಪರಾಗರೇಣುಗಳು ಅಂಟಿಕೊಂಡು ಕಾಯಿ ಆಗುವ ಹೂವಿನಲ್ಲಿ ಕುಳಿತಾಗ ಪರಾಗಸ್ಪರ್ಶ ಕ್ರಿಯೆ ಸ್ವಾಭಾವಿಕವಾಗಿ ಆಗುವುದು. ಅಲ್ಲದೇ ಅಡಿಕೆ ಹೂವಿನ ಜೇನುತುಪ್ಪ ಅತ್ಯಂತ ರುಚಿಕರ,ಆರೋಗ್ಯವರ್ಧಕ.
ಅಡಿಕೆ ತೋಟದಲ್ಲಿ ಒಂದು ಎಕ್ರೆಗೆ ಸುಮಾರು ಹತ್ತು ಹದಿನೈದು ಜೇನು ಕುಟುಂಬಗಳನ್ನು ಇಟ್ಟು ಸಾಕಬಹುದು. ತೋಟದ ಬದಿಯಲ್ಲಿ ನೀರು ತಾಗದಂತೆ ನೆರಳಿನಲ್ಲಿ ಜೇನು ಕುಟುಂಬಗಳನ್ನು ಇಡಬೇಕು. ಹತ್ತು ಅಡಿ ದೂರಕ್ಕೊಂದು ಜೇನು ಕುಟುಂಬವನ್ನು ಇಡಬಹುದಾದರೂ ತೋಟದ ಸುತ್ತಲೂ ದೂರ ದೂರದಲ್ಲಿ ಜೇನುಪೆಟ್ಟಿಗೆಗಳನ್ನು ಇಟ್ಟರೆ ಎಲ್ಲ ಅಡಿಕೆ ಮರಗಳ ಹೂವುಗಳಿಗೂ ಜೇನುನೊಣಗಳು ಭೇಟಿ ಕೊಡಲು ಅನುಕೂಲ.
ಜೇನು ಕುಟುಂಬ ಸಾಕಲಾಗದ ಕೃಷಿಕರು ಜೇನುನೊಣಗಳಿಗೆ ವಾಸಿಸಲು ಅನುಕೂಲ ವಾಗುವಂತೆ ಸತ್ತ ಅಡಿಕೆ ಮರ, ಈಚಲು ಮರ ಅಥವಾ ಪೊಟರೆಗಳಿರುವ ಮರಗಳನ್ನು ಕಡಿಯದೆ ಇದ್ದರೆ ಅವುಗಳ ಪೊಟರೆಗಳಲ್ಲಿ ಜೇನು ಕುಟುಂಬಗಳು ತಾವಾಗಿಯೇ ಬಂದು ನೆಲೆಸುತ್ತವೆ. ಮಡಕೆಗಳಿಗೆ ಜೇನುಮಯಣ ಸವರಿ ನೆರಳು ಇರುವ ಸ್ಥಳದಲ್ಲಿ ಇಟ್ಟರೆ ಕೆಲವೊಮ್ಮೆ ಅವುಗಳಲ್ಲೂ ಜೇನುಕುಟುಂಬಗಳು ಬಂದು ಸೇರಿಕೊಳ್ಳುತ್ತವೆ. ಮರದ ಪೊಟರೆ, ಕಲ್ಲಿನ ಸಂದು, ಹುತ್ತ ಮೊದಲಾದವುಗಳಿಂದ ಜೇನುತುಪ್ಪವನ್ನು ತೆಗೆದು ಮೊದಲಿದ್ದಂತೆ ಮುಚ್ಚಿ ಇಟ್ಟರೆ ಮತ್ತೆ ಅದರಲ್ಲಿ ಜೇನುಕುಟುಂಬಗಳು ಬಂದು ಸೇರಿಕೊಳ್ಳುತ್ತವೆ. ಹೀಗೆ ಅಡಿಕೆ ಕೃಷಿಕರು ಜೇನುನೊಣಗಳಿಂದ ಜೇನುತುಪ್ಪವನ್ನು ಪಡೆಯುವುದಲ್ಲದೆ ಅಡಿಕೆ ಇಳುವರಿಯೂ ವೃದ್ಧಿಯಾಗಿ ಹೆಚ್ಚಿನ ಆದಾಯವನ್ನು ಪಡೆಯಬಹುದು.
ಶಿರಂಕಲ್ಲು ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.