![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Oct 27, 2020, 11:33 AM IST
ಹುಬ್ಬಳ್ಳಿ: ತಾಲೂಕಿನ ಶೆರೇವಾಡ ಕ್ರಾಸ್ ಬಳಿಯ ವಿಭವ ಇಂಡಸ್ಟ್ರೀಸ್‌ನಲ್ಲಿ ಸೋಮವಾರ ಸಂಜೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರೂ. ಮೌಲ್ಯದ ಪಿನಾಯಿಲ್ ತಯಾರಿಕೆ ರಾಸಾಯನಿಕ ಹಾಗೂ ಕಸಬರಿಗೆ ತಯಾರಿಸುವ ಕಚ್ಚಾ ಸಾಮಗ್ರಿ ಸುಟ್ಟು ಕರಕಲಾಗಿದೆ.
ಹಳೆಯ ಫ್ಯಾಕ್ಟರಿ ಕಟ್ಟಡದ ಗೋದಾಮಿನಲ್ಲಿ ಅಕಸ್ಮಾತ್ ಕಾಣಿಸಿಕೊಂಡ ಬೆಂಕಿಯು ನಂತರ ಸಂಪೂರ್ಣ ಗೋದಾಮಿಗೆ ವ್ಯಾಪಿಸಿಕೊಂಡಿದೆ. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಹತೋಟಿಗೆ ತರಲು ಪ್ರಯತ್ನಿಸಿದರು. ಒಟ್ಟು ಮೂರು ಜಲ ಫಿರಂಗಿ ವಾಹನಗಳ ಮೂಲಕ ಸುಮಾರು ಎರಡು ತಾಸು ಹರಸಾಹಸಪಟ್ಟು ಬೆಂಕಿ ನಿಯಂತ್ರಿಸಿ ಹತೋಟಿಗೆ ತಂದರು. ಗೋದಾಮು ಪಕ್ಕದಲ್ಲಿಯೇ ಪಿನಾಯಿಲ್ ತಯಾರಿಸಲು ಬೇಕಾದ ಕಚ್ಚಾ ರಾಸಾಯನಿಕದ ಬ್ಯಾರೇಲ್‌ಗಳನ್ನು ಇಡಲಾಗಿತ್ತು. ಅದೃಷ್ಟವಶಾತ್ ಬೆಂಕಿ ಅವುಗಳತ್ತ ವ್ಯಾಪಿಸಿರಲಿಲ್ಲ.
ಇದನ್ನೂ ಓದಿ;“ಯಾರೂ ಅಲ್ಲಾ, ಯಡಿಯೂರಪ್ಪಾನೇ ವಿಲನ್”: ಸಚಿವ ಸೋಮಶೇಖರ್ ಹೇಳಿಕೆ
ಆಕಾಶದ ತುಂಬೆಲ್ಲ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿತ್ತು. ಅವಘಡದಿಂದ ಸುತ್ತಮುತ್ತಲಿನ ಗ್ರಾಮದ ಜನರು ಆತಂಕಗೊಂಡಿದ್ದರು.
ಇಂಡಸ್ಟ್ರೀಸ್‌ನಲ್ಲಿ ಶೌಚಾಲಯ ಮತ್ತು ನೆಲ ಸ್ವತ್ಛಗೊಳಿಸುವ ಪಿನಾಯಿಲ್ ರಾಸಾಯನಿಕ ಹಾಗೂ ಹೆಸರಾಂತ ಮಂಕಿ 555 ಬ್ರ್ಯಾಂಡ್ ಕಸಬರಿಗೆ ತಯಾರಿಸಲಾಗುತ್ತಿತ್ತು. ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ನೂಟ್‌ದಿಂದ ಅವಘಡ
ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.