ಯುದ್ಧದ ನಡುವೆಯೇ ಮಗುವಿಗೆ ಜನ್ಮವಿತ್ತಳು
Team Udayavani, Feb 27, 2022, 8:25 AM IST
ಕೀವ್: ಒಂದು ಕಡೆ ಯುದ್ಧ, ತಾನು ಬದುಕುತ್ತೇನೆನ್ನುವುದೇ ಖಾತ್ರಿಯಿಲ್ಲದ ಸ್ಥಿತಿ. ಇನ್ನೊಂದು ಮಗುವೊಂದಕ್ಕೆ ಜನ್ಮ ನೀಡುವ ಹೊತ್ತಿನಲ್ಲಿ ಎದುರಾಗಿರುವ ಹೆರಿಗೆ ಬೇನೆ! ತಾಯಿಯೊಬ್ಬಳ ಸ್ಥಿತಿ ಹೇಗಿರಬಹುದು? ಕೀವ್‌ನಲ್ಲಿ ಅಂತಹ ಅಚ್ಚರಿಯೊಂದು, ಅದನ್ನು ಯುದ್ಧದ ಹೊತ್ತಿನಲ್ಲಿ ಭರವಸೆಯ ಕಿರಣವೆಂದು ಬಣ್ಣಿಸಲಾಗಿದೆ.
ಕೀವ್ ನಗರದ ರಹಸ್ಯ ಆಶ್ರಯ ಕೇಂದ್ರವೊಂದರಲ್ಲಿ ಹಲವು ಉಳಿದುಕೊಂಡಿದ್ದರು. ಅಲ್ಲಿ 23 ವರ್ಷದ ಗರ್ಭಿಣಿಯೂ ಇದ್ದರು. ಹೊರಗಡೆ ಬಾಂಬ್ ಸದ್ದು ಕೇಳುತ್ತಿರುವಾಗಲೇ ಇಲ್ಲಿ ಈಕೆಗೆ ಹೆರಿಗೆ ನೋವು ಆರಂಭವಾಗಿದೆ. ಅಲ್ಲೇ ಇದ್ದ ಸಣ್ಣ ವಾರ್ಡ್‌ನಲ್ಲಿ ಹೆರಿಗೆಗೆ ವ್ಯವಸ್ಥೆಯಾಗಿದೆ. ಈಕೆಯ ಚೀರಾಟ ಕೇಳಿಸಿಕೊಂಡ ಪೊಲೀಸರು ಸಹಾಯಕ್ಕೆ ಧಾವಿಸಿದ್ದಾರೆ.
ಅಂತಹ ಹೊತ್ತಿನಲ್ಲಿ ಮಗುವೊಂದು ಹುಟ್ಟಿದೆ. ಅದಕ್ಕೆ ಮಿಯಾ ಎಂದು ಹೆಸರಿಡಲಾಗಿದೆ. ಕೂಡಲೇ ಮಗು ಮತ್ತು ತಾಯಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇಬ್ಬರೂ ಸುರಕ್ಷಿತವಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪುಟ್ಟ ಮಗು ತಾಯಿಯ ಕೈಬೆರಳು ಹಿಡಿದುಕೊಂಡಿರುವ ಚಿತ್ರ ಎಲ್ಲ ಕಡೆ ಹರಿದಾಡುತ್ತಿದೆ. ರಷ್ಯಾದ ಕ್ರೌರ್ಯದ ವಿರುದ್ಧ ಉಕ್ರೇನಿನ ತಾಯಂದಿರು ಎದ್ದು ನಿಲ್ಲಬೇಕೆಂದು ಅಲ್ಲೊಂದು ಮೌನ ಆಂದೋಲನವೇ ಶುರುವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.