ರಾಜಧಾನಿಯಲ್ಲಿ ಸೋಂಕಿತ ಪ್ರಕರಣ ಇಳಿಕೆ


Team Udayavani, Jun 10, 2020, 6:07 AM IST

capital ilike

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಎರಡು, ಮೂರು ಹಾಗೂ ಐದನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದೆ. ಅನ್‌ಲಾಕ್‌ ಪ್ರಾರಂಭವಾದ ಮೇಲೆ ಉಳಿದ  ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲೇ ಸೋಂಕು ಪ್ರಕರಣಗಳು ಹೆಚ್ಚಾಗಲಿವೆ ಎಂದು ಅಂದಾಜಿಸಲಾಗಿತ್ತು. ಆದರೆ, ಈ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ನಗರದಲ್ಲಿ ಸೋಂಕು ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕುಸಿದಿವೆ.

ನಗರದಲ್ಲಿ  ಕೋವಿಡ್‌ 19 ಪ್ರಕರಣಗಳು ಕಡಿಮೆ ವರದಿಯಾಗುತ್ತಿರುವ ಹಿಂದೆ ನಗರದ ಕ್ವಾರಂಟೈನ್‌ ವ್ಯವಸ್ಥೆಯೂ ಕಾರಣವಾಗಿದೆ. ಉಳಿದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ಹೋಟೆಲ್‌ ಹಾಗೂ ಸಾಮುದಾಯಿಕ ಭವನ, ಹಾಸ್ಟೆಲ್‌  ಕ್ವಾರಂಟೈನ್‌ ವ್ಯವಸ್ಥೆ ತಕ್ಕಮಟ್ಟಿಗೆ ಉತ್ತಮವಾಗಿದ್ದು, ಒಬ್ಬರಿಂದ ಮತ್ತೂ ಬ್ಬರಿಗೆ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ.

ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ  ಕ್ವಾರಂಟೈನ್‌ ಪ್ರಕ್ರಿಯೆಪೂರ್ಣಗೊಳಿಸುತ್ತಿರುವುದು, ಜನರಲ್ಲಿ ಜಾಗೃತಿ ಮೂಡಿರುವುದು ಸೋಂಕಿನ ಪಟ್ಟಿಯಲ್ಲಿನ ಮೊದಲನೇ ಸ್ಥಾನದಿಂದ ಕುಸಿಯಲು ಕಾರಣವಾಗುತ್ತಿದೆ. ಇನ್ನು ಸರ್ಕಾರ ಕ್ವಾರಂಟೈನ್‌ ನಿಯಮ ಸಡಿಲಿಕೆ  ಮಾಡಿರುವುದರಿಂದ ನಗರದಲ್ಲಿ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗುವುದಕ್ಕೂ ಕಾರಣವಾಗಿದೆ.

ಕೆಲವೇ ದಿನಗಳ ಹಿಂದೆ 20- 30ರ ಅಸುಪಾಸಿನಲ್ಲಿದ್ದ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ ಸದ್ಯ 54ಕ್ಕೆ ಏರಿಕೆ  ಯಾಗಿದೆ.  ಕ್ವಾರಂಟೈನ್‌ ನಿಯಮ ಸಡಿಲಿಕೆ ಮಾಡಿರುವ ಮಧ್ಯೆ ಹೋಂ ಕ್ವಾರಂಟೈನ್‌ ನಿಯಮ ಮತ್ತಷ್ಟು ಕಠಿಣಗೊಳಿಸಲಾಗಿದೆ. ಇದಕ್ಕೆಂದೇ ಬಿಬಿಎಂಪಿ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಒಳಗೊಂಡ 460 ತಂಡಗಳನ್ನು ರಚನೆ  ಮಾಡಿಕೊಳ್ಳಲಾಗಿದೆ. ಅಕ್ಕಪಕ್ಕದ ಮನೆಯವರಿಗೂ ಕ್ವಾರಂಟೈನ್‌ನಲ್ಲಿರು ವವರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಲ್ಲದೆ, ಕ್ವಾರಂಟೈನ್‌ ನಲ್ಲಿರುವವರು ಹೊರಗೆ ಓಡಾಡಿದರೆ ದೂರು ನೀಡಲು ಸೂಚನೆ ನೀಡಲಾಗಿದೆ. ಈ ಕಾರಣದಿಂದ  ಸೋಂಕು ಪ್ರಮಾಣ ಕಡಿಮೆಯಾಗಿರುವ ಸಾಧ್ಯತೆ ಇದೆ.

ವರದಿ ತಡವೂ ಕಾರಣ?: ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಕೋವಿಡ್‌ 19 ಶಂಕಿತರ ಗಂಟಲು ದ್ರವ ವರದಿಯನ್ನೂ ನಗರದಲ್ಲೇ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ, ಮೊದಲು ಒಂದು ಅಥವಾ ಎರಡು ದಿನಗಳಲ್ಲಿ  ಬರುತ್ತಿದ್ದ ವರದಿ ಈಗ ಮೂರರಿಂದ ನಾಲ್ಕುದಿನಗಳಿಗೆ ಒಮ್ಮೆ ಬರುತ್ತಿದೆ. ಇದು ಹೆಚ್ಚು ಸೋಂಕು ಪ್ರಕರಣಗಳು ದೃಢಪಡದೆ ಇರುವುದಕ್ಕೆ ಕಾರಣ ಎನ್ನಲಾಗಿದೆ.

ಹಾಸ್ಟೆಲ್‌ ವ್ಯವಸ್ಥೆ ಉತ್ತಮವಾಗಿಲ್ಲ: ನಗರದಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಉಳಿದ ಜಿಲ್ಲೆಗಳಿಗಿಂತ ಉತ್ತಮವಾಗಿ ದೆ. ಆದರೆ, ಅತ್ಯುತ್ತಮವಾಗಿಲ್ಲ. ನಗರದಕ್ಕೆ ಹೊರ ರಾಜ್ಯಗಳಿಂದ ಬಂದು (ಮಹಾರಾಷ್ಟ್ರದಿಂದ) ಹೋಟೆಲ್‌ ಕ್ವಾರಂಟೈನ್‌  ಆಗಲು ಆರ್ಥಿಕವಾಗಿ ಸದೃಢರಲ್ಲ ದವರನ್ನು ಹಾಸ್ಟೆಲ್‌ ಅಥವಾ ಸಮುದಾಯ ಭವನ  ದಲ್ಲಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ಆದರೆ, ಇಲ್ಲಿ ವ್ಯವಸ್ಥೆ ಉತ್ತಮವಾಗಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕ್ವಾರಂಟೈನ್‌ ವ್ಯವಸ್ಥೆಯಿದ್ದು ಸೋಂಕು ದೃಢಪಡುತ್ತಿರುವವರಲ್ಲಿ ಹೋಟೆಲ್‌ಗ‌ಳಿ  ಗಿಂತ ಈ ರೀತಿ ಸರ್ಕಾರಿ ವ್ಯವಸ್ಥೆಯಲ್ಲಿ ಇರುವವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಈ ರೀತಿ ಕ್ವಾರಂಟೈನ್‌ಗೆ ಒಳಗಾಗುವವರು ಒಂದೇ ಶೌಚಾಲಯ ಹಾಗೂ ಊಟದ ಸ್ಥಳಗಳನ್ನು ಬಳಸುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದರು.

ಬೆಂಗಳೂರಿನಲ್ಲಿ ಪ್ರಕರಣಗಳು ಕುಸಿತದ ವಿವರ: ಜೂನ್‌.1ರ ವರೆಗೆ ಬೆಂಗಳೂರು ಕೋವಿಡ್‌ 19 ಪ್ರಕರಣಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿತ್ತು. ಜೂನ್‌.1ರ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಒಟ್ಟು  ಸೋಂಕಿತರು 385 ಹಾಗೂ ಒಟ್ಟು ಸಕ್ರಿಯ ಪ್ರಕರಣಗಳು 136 ಇದ್ದವು. ಬೆಂಗಳೂರಿನ ನಂತರದ ಸ್ಥಾನದಲ್ಲಿ ಕಲಬುರಗಿ, ಯಾದಗಿರಿ, ಮಂಡ್ಯ ಹಾಗೂ ಉಡುಪಿ ಇತ್ತು.

ಈ ಜಿಲ್ಲೆಗಳಲ್ಲಿ ಅನುಕ್ರಮವಾಗಿ 305,285,285 ಹಾಗೂ 260ಜನ ಸೋಂಕಿತರಿದ್ದರು. ಜೂನ್‌.2ಕ್ಕೆ ಉಡುಪಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಬೆಂಗಳೂರಿಗಿಂತ ಹೆಚ್ಚು ಸೋಂಕು ಪ್ರಕರಣಗಳು ದೃಢವಾದವು. ಬೆಂಗಳೂರು ಮೂರನೇ ಸ್ಥಾನಕ್ಕೆ ಕುಸಿಯಿತು. ಇನ್ನು ಜೂನ್‌ 3ಕ್ಕೆ ಕಲಬುರಗಿ ಪ್ರಥಮ ಸ್ಥಾನ,  ಉಡುಪಿ ದ್ವಿತೀಯ ಸ್ಥಾನ ತಲುಪಿತು. ಜೂನ್‌ 4 ಮತ್ತು 5ಕ್ಕೆ ಮತ್ತೆ ಉಡುಪಿ ಮತ್ತು ಕಲಬುರಗಿ ಜಿಲ್ಲೆಗಳು ಪ್ರಥಮ ದ್ವಿತೀಯ ಸ್ಥಾನದಲ್ಲಿ ಮುಂದುವರಿದವು.

ಜೂನ್‌ 6ಕ್ಕೆ ಯಾದಗಿರಿ ಹಾಗೂ ಜೂನ್‌ 7ಕ್ಕೆ ಬೆಳಗಾವಿಯಲ್ಲಿ ಹೆಚ್ಚು ಪ್ರಕರಣ  ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಇನ್ನು ಜೂನ್‌ 8ಕ್ಕೆ ಈ ಜಿಲ್ಲೆಗಳಲ್ಲಿ ಸೋಂಕಿತರ ವಿವರ ಈ ರೀತಿ ಇದೆ. ಕಲಬುರಗಿಯಲ್ಲಿ 759, ಯಾದಗಿರಿ 581, ಬೀದರ್‌ 270, ಉಡುಪಿ 947 ಹಾಗೂ  ಬೆಂಗಳೂರಿನಲ್ಲಿ 493 ಜನರಲ್ಲಿ ಕೋವಿಡ್‌ 19 ದೃಢಪಟ್ಟಿದೆ. ಜೂನ್‌ 2ರ ನಂತರ ನಗರದಲ್ಲಿ ಹೆಚ್ಚು ಜನರಲ್ಲಿ ಪ್ರಕರಣಗಳು ದೃಢಪಡದ ಹಿನ್ನೆಲೆಯಲ್ಲಿ ಒಂದನೇ ಸ್ಥಾನದಿಂದ ಹಿಂದುಳಿಯುತ್ತಿದೆ.

* ಹಿತೇಶ್‌ ವೈ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.