BJP ಕಡೆಗೆ ಪ್ರಭಾವಿ ಕೈ ಸಚಿವ- 50-60 ಶಾಸಕರ ಜತೆ ಪಕ್ಷಾಂತರ ಸಾಧ್ಯತೆ: HDK ಹೊಸ ಬಾಂಬ್
ಬಿಜೆಪಿ ಕೇಂದ್ರ ನಾಯಕರ ಜತೆ ಚರ್ಚೆ ಎಂದ ಮಾಜಿ ಮುಖ್ಯಮಂತ್ರಿ
Team Udayavani, Dec 11, 2023, 12:19 AM IST
ಹಾಸನ: “ರಾಜ್ಯ ಕಾಂಗ್ರೆಸ್ ಸರಕಾರದ ಪ್ರಭಾವಿ ಸಚಿವರೊಬ್ಬರು 50-60 ಶಾಸಕರ ಜತೆ ಬಿಜೆಪಿಗೆ ಹೋಗಲು ಸಜ್ಜಾಗಿರುವ ಮಾಹಿತಿ ನನಗೆ ಸಿಕ್ಕಿದೆ’.
-ಇದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಸಿಡಿಸಿರುವ ಹೊಸ ಬಾಂಬ್.
ರವಿವಾರ ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೇಲಿರುವ ಅಕ್ರಮದ ಆರೋಪಗಳಿಂದ ಪಾರಾಗಲು ಈ “ಪ್ರಭಾವಿ’ ಸಚಿವರು ಬಿಜೆಪಿ ಕೇಂದ್ರ ನಾಯಕರ ಜತೆ ಚೌಕಾಸಿ ಮಾಡುತ್ತಿದ್ದಾರೆ. ತಮ್ಮ ಮೇಲಿರುವ ಅಕ್ರಮಗಳ ಆರೋಪಗಳಿಂದ ಪಾರಾಗಲು ಅವರು ಬಿಜೆಪಿಯ ಕೇಂದ್ರ ನಾಯಕರ ಕೈಕಾಲು ಹಿಡಿಯುತ್ತಿದ್ದಾರೆ. ಸುಮಾರು 50 ಶಾಸಕರ ಜತೆ ಬೇಲಿ ಹಾರಲು ತಯಾರಿ ನಡೆಸುತ್ತಿದ್ದಾರೆ ಎಂದು ನನಗೆ ಒಬ್ಬರು ಮಾಹಿತಿ ನೀಡಿದ್ದಾರೆ ಎಂದರು.
ಒಂದೊಂದೇ ಧ್ವನಿ ಹೊರಬರಲಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿ.ಕೆ. ಹರಿ ಪ್ರಸಾದ್ ವಾಗ್ಧಾಳಿ ನಡೆಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿ ಸಿದ ಎಚ್‌ಡಿಕೆ, “ಬರೀ ಹರಿಪ್ರಸಾದ್ ಅಲ್ಲ. ಇನ್ನೂ ಸಾಕಷ್ಟು ಜನ ಇದ್ದಾರೆ. ಒಂದೊಂದೇ ಧ್ವನಿ ಹೊರಬರಲಿದೆ. ಹರಿ ಪ್ರಸಾದ್ ಅವರ ಹೆಸರನ್ನಷ್ಟೇ ಏಕೆ ಹೇಳುತ್ತೀರಿ? ಅಧಿಕಾರ ದಲ್ಲಿ ಉಳಿದುಕೊಳ್ಳಲು ವ್ಯಾಪಾರ ಮಾಡಲು ಹೋಗಿದ್ದಾರೆ. ಮಾಡಿರುವ ಅಕ್ರಮಗಳನ್ನು ಮುಚ್ಚಿಹಾಕಲು ಹೋಗಿರುವ ಮಾಹಿತಿಯೂ ನನಗೆ ಇದೆ. ಹರಿಪ್ರಸಾದ್ ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು’ ಎಂದರು.
ಜನವರಿಯಲ್ಲಿ ಮೈತ್ರಿಗೆ ಅಂತಿಮ ರೂಪ
ಬಿಜೆಪಿ – ಜೆಡಿಎಸ್ ಮೈತ್ರಿಗೆ ಜನವರಿ ಕೊನೆಯ ವಾರ ದೊಳಗೆ ಅಂತಿಮ ರೂಪ ಸಿಗಲಿದೆ. ಎಚ್.ಡಿ. ದೇವೇಗೌಡ ರನ್ನೂ ಸೇರಿಸಿಕೊಂಡೇ ಮೈತ್ರಿಯ ಅಂತಿಮ ರೂಪ, ಸೀಟು ಹಂಚಿಕೆ ತೀರ್ಮಾನವಾಗಲಿದೆ. ಜೆಡಿಎಸ್ ಪಾಲಿಗೆ ಬರುವ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುವ ಅಂಶ ಆಧರಿಸಿ ಸೀಟು ಹಂಚಿಕೆ ಆಗಲಿದೆ ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದರು.
ಜಾತಿಗಣತಿ ಯಾಕೆ ಬೇಕು? ಈ ರಾಜ್ಯ-ದೇಶ ಉದ್ಧಾರ ಆಗಬೇಕಾದರೆ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡಲಿ. ಜಾತಿಗಣತಿ ಮಾಡಿ ಈಗ ಮುಸ್ಲಿಮರಿಗೆ ಹಣ ಕೊಡುತ್ತೇವೆ ಎಂದು ಹೇಳಿ ಅವರ ಹೆಸರಿನಲ್ಲಿಯೂ ಕಮಿಷನ್ ಹೊಡೆಯುತ್ತಾರೆ ಅಷ್ಟೇ.
- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.