![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Nov 18, 2023, 5:41 PM IST
ಬೆಳಗಾವಿ: ಪರಿಸರ ಮಾಲಿನ್ಯ ತಡೆಗೆ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೆ ಬೆಳಗಾವಿ ಮಹಾನಗರ ಪಾಲಿಕೆ ಇದೇ ಪ್ಲಾಸ್ಟಿಕ್ ಪೌಡರ್ ಬಳಸಿ ರಸ್ತೆ ನಿರ್ಮಿಸಲಿದ್ದು, ಅಂದುಕೊಂಡತೆ ಆದರೆ ಇದೇ ತಿಂಗಳಲ್ಲಿ ಈ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.
ಒಂದು ಸಲ ಬಳಕೆಯ ಪ್ಲಾಸ್ಟಿಕ್‌ಗೆ ಸಂಪೂರ್ಣವಾಗಿ ನಿಷೇಧ ಹೇರಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅದರಂತೆ ಬೆಳಗಾವಿ ನಗರದಲ್ಲಿಯೂ ಇಂಥ ಪ್ಲಾಸ್ಟಿಕ್‌ಗೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಆದರೆ ತ್ಯಾಜ್ಯ ಸೇರಿದಂತೆ ವಿವಿಧ ಕಡೆಯಿಂದ ಸಂಗ್ರಹವಾಗುವ ಪ್ಲಾಸ್ಟಿಕ್‌ದಿಂದಲೇ ಪೌಡರ್ ಮಾಡಿ ರಸ್ತೆ ಡಾಂಬರೀಕರಣ ಮಾಡಲು ಪಾಲಿಕೆ ವಿನೂತನ ಯೋಜನೆಗೆ ಕೈಹಾಕಿದೆ.
ಬೆಳಗಾವಿ ಪಾಲಿಕೆಯಲ್ಲಿ ರಸ್ತೆ ನಿರ್ಮಿಸುವ ಗುತ್ತಿಗೆದಾರರು ಕಡ್ಡಾಯವಾಗಿ ಪ್ಲಾಸ್ಟಿಕ್ ಪೌಡರ್ ಬಳಸಬೇಕೆಂದು ಪಾಲಿಕೆ ಸೂಚನೆ ನೀಡಿದೆ. ಹೀಗಾಗಿ ಪ್ಲಾಸ್ಟಿಕ್‌ಗೆ ಹೆಚ್ಚಿನ ಬೇಡಿಕೆ ಬಂದಿದ್ದು, ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಬೇರ್ಪಡಿಸಿ ಯಂತ್ರದ ಸಹಾಯದಿಂದ ಪ್ಲಾಸ್ಟಿಕ್ ಪೌಡರ್ ಮಾಡಿ ರಸ್ತೆಗೆ ಬಳಸಿಕೊಳ್ಳುವ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಸದ್ಯ ಬೆಳಗಾವಿಯಲ್ಲಿ ಸಂಗ್ರಹವಾಗುವ ಟನ್‌ಗಟ್ಟಲೇ ಪ್ಲಾಸ್ಟಿಕ್ ಅನ್ನು ಬಾಗಲಕೋಟೆಯ ಸಿಮೆಂಟ್ ಕಾರ್ಖಾನೆಗೆ ಕಳುಹಿಸಲಾಗುತ್ತಿದೆ. ಈ ಪ್ಲಾಸ್ಟಿಕ್ ಉಚಿತವಾಗಿ ಕಾರ್ಖಾನೆಗೆ ಹೋಗುತ್ತಿದೆ. ಕಾರ್ಖಾನೆಯಲ್ಲಿ ಸಿಮೆಂಟ್ ತಯಾರಿಸಲು ಈ ಪ್ಲಾಸ್ಟಿಕ್ ಬಳಕೆ ಆಗುತ್ತಿದೆ. ಆದರೆ ಈಗ ಇದೇ ಪ್ಲಾಸ್ಟಿಕ್ ಬೇರೆ ಕಡೆಗೆ ಕೊಡುವುದಕ್ಕಿಂತ ನಮ್ಮಲ್ಲಿಯೇ ಬಳಕೆ ಮಾಡಿ ಡಾಂಬರ್ ರಸ್ತೆ ನಿರ್ಮಿಸಲು ಪಾಲಿಕೆ ಮುಂದಾಗಿದೆ.
ಒಣ ಕಸ ಬೇರ್ಪಡಿಸಿ ಪ್ಲಾಸ್ಟಿಕ್ ಸಂಗ್ರಹ: ಈಗಾಗಲೇ ನಗರದ ವಿವಿಧೆಡೆ ದಾಳಿ ನಡೆಸಿರುವ ಮಹಾನಗರ ಪಾಲಿಕೆಯವರು ಒಮ್ಮೆ ಬಳಕೆಯ ಪ್ಲಾಸ್ಟಿಕ್ ಅನ್ನು ಟನ್‌ಗಟ್ಟಲೇ ವಶಕ್ಕೆ ಪಡೆದುಕೊಂಡಿದೆ. ಇದೆಲ್ಲವನ್ನೂ ಪೌಡರ್ ತಯಾರಿಕೆಗೆ ಬಳಸಲಿದೆ. ಜತೆಗೆ ಮನೆಯಲ್ಲಿ ಸಂಗ್ರಹಿಸುವ ಒಣ ಕಸದಲ್ಲಿಯ ಪ್ಲಾಸ್ಟಿಕ್ ಬೇರ್ಪಡಿಸಿ ಪೌಡರ್ ತಯಾರಿಕೆಗೆ ಬಳಸಿಕೊಳ್ಳಲಾಗುವುದು. ಪಾಲಿಕೆಯ ಆರೋಗ್ಯ ಇಲಾಖೆಯಿಂದ ಪೌಡರ್ ತಯಾರಿಸಿ ಅದನ್ನು ಕಟ್ಟಡ ನಿರ್ಮಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ.
ರಸ್ತೆ ನಿರ್ಮಿಸಲು ಕಡ್ಡಾಯವಾಗಿ ಈ ಪ್ಲಾಸ್ಟಿಕ್ ಪೌಡರ್ ಬಳಕೆ ಮಾಡಿದರೆ ರಸ್ತೆ ಗಟ್ಟಿಮುಟ್ಟಾಗಿ ಗುಣಮಟ್ಟದಿಂದ ಕೂಡಿರುವುದರ ಜತೆಗೆ ಪಾಲಿಕೆಗೂ ಇದರ ಲಾಭವಾಗಲಿದೆ. ಗುತ್ತಿಗೆದಾರರು ರಸ್ತೆ ನಿರ್ಮಿಸುವಾಗ ಕಡ್ಡಾಯವಾಗಿ ಈ ಪ್ಲಾಸ್ಟಿಕ್
ಬಳಸಬೇಕಾಗಿದೆ. ಹೀಗಾಗಿ ಪ್ರತಿ 200 ಮೀಟರ್ ರಸ್ತೆಗೆ 250ರಿಂದ 300 ಕೆಜಿ ಪ್ಲಾಸ್ಟಿಕ್ ಪೌಡರ್ ಬಳಸಬೇಕಾಗಿದೆ. ಗುತ್ತಿಗೆದಾರರಿಗೆ ಪ್ಲಾಸ್ಟಿಕ್ ಪೌಡರ್ ಅವಶ್ಯಕತೆ ಬಹಳಷ್ಟಿದೆ.
ಈಗಾಗಲೇ ಬೆಳಗಾವಿಯ ಆಟೋ ನಗರದ ಕಾರ್ಖಾನೆಯೊಂದರಲ್ಲಿ ಪ್ಲಾಸ್ಟಿಕ್ ಪೌಡರ್ ತಯಾರಿಸಲಾಗುತ್ತಿದೆ. ಇಲ್ಲಿಂದ ರಸ್ತೆಗೆ ಅವಶ್ಯಕತೆ ಇರುವ ಪೌಡರ್ ನೀಡಲಾಗುತ್ತಿದೆ. ಈಗ ಸದ್ಯ 500 ಕೆಜಿ ಪೌಡರ್ ತಯಾರಿಸಲಾಗಿದೆ. ಬೆಳಗಾವಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಇನ್ನು ಮುಂದೆ ರಸ್ತೆ ನಿರ್ಮಾಣಕ್ಕೆ ಬಳಸುವ ಯೋಜನೆ ಹೊಂದಲಾಗಿದೆ.
ಪೌಡರ್ ತಯಾರಿಕೆ ಯಂತ್ರ ಖರೀದಿ: ಪಾಲಿಕೆ ಇನ್ನು ಮುಂದೆ ಸ್ವಂತ ಖರ್ಚಿನಿಂದಲೇ ಪ್ಲಾಸ್ಟಿಕ್‌ನಿಂದ ಪೌಡರ್ ನಿರ್ಮಾಣ ಯಂತ್ರ ಖರೀದಿಸಲಿದೆ. ಇಲ್ಲಿ ತಯಾರಾಗುವ ಪೌಡರ್ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಮಾರಾಟ ಮಾಡಲಿದೆ. ಇದರಿಂದ ತಮ್ಮ ಯೋಜನೆಯೂ ಕಾರ್ಯಗತವಾಗುವುದರ ಜತೆಗೆ ಪೌಡರ್ ಮಾರಾಟದಿಂದ ಪಾಲಿಕೆಗೂ ಆದಾಯ ಹೆಚ್ಚಲಿದೆ ಎನ್ನುತ್ತಾರೆ ಆರೋಗ್ಯ ಅಧಿಕಾರಿ ಕಲಾದಗಿ.
ಈ ಪ್ಲಾಸ್ಟಿಕ್ ಬಳಸಿ ನಿರ್ಮಾಣವಾಗುವ ರಸ್ತೆ ಕಾಮಗಾರಿಗೆ ಅಕ್ಟೋಬರ್ ತಿಂಗಳಲ್ಲಿಯೇ ಚಾಲನೆ ಸಿಗುವ ಸಾಧ್ಯತೆ ಇತ್ತು. ಆದರೆ ಪಾಲಿಕೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ಪಾಲಿಕೆ ಆಯುಕ್ತರ ನಡುವಿನ ಸಂಘರ್ಷದಿಂದಾಗಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.
ವಿಶೇಷತೆ ಏನು?
*ಪ್ಲಾಸ್ಟಿಕ್ ಪೌಡರ್‌ನಿಂದ ಪರಿಸರ ಮಾಲಿನ್ಯ ತಡೆ ಸಾಧ್ಯತೆ
*200 ಮೀಟರ್ ಉದ್ದದ ರಸ್ತೆಗೆ 250ರಿಂದ 300 ಕೆಜಿ ಪ್ಲಾಸ್ಟಿಕ್ ಅವಶ್ಯಕತೆ
*ಮುಂದಿನ ದಿನಮಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಪ್ಲಾಸ್ಟಿಕ್ ಪೌಡರ್ ನಿರ್ಮಾಣ ಕಡ್ಡಾಯವಾಗುವ ಸಾಧ್ಯತೆ
*ಭವಿಷ್ಯದಲ್ಲಿ ಪ್ಲಾಸ್ಟಿಕ್ ಪೌಡರ್ ಬೇಡಿಕೆ ಹೆಚ್ಚಳ
*ಒಂದು ಸಲ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿದ್ದರಿಂದ ಪಾಲಿಕೆಯಿಂದ ಪ್ಲಾಸ್ಟಿಕ್ ಜಪ್ತಿ
*ಪ್ಲಾಸ್ಟಿಕ್ ಪೌಡರ್ ಬಳಕೆ ಹೆಚ್ಚಾದಂತೆ ಪ್ಲಾಸ್ಟಿಕ್ ಕೊರತೆ ಆಗುವ ಸಾಧ್ಯತೆಯೂ ಉಂಟು
ಬೆಳಗಾವಿ ಪಾಲಿಕೆ ವತಿಯಿಂದ ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಪೌಡರ್ ಬಳಸಿ ರಸ್ತೆ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಸಲಕರಣೆಗಳು, ರಸ್ತೆ ನಿರ್ಮಾಣಕ್ಕೆ ಬೇಕಾಗುವ ಪ್ಲಾಸ್ಟಿಕ್ ಪೌಡರ್ ತಯಾರಾಗಿದೆ. ಶೀಘ್ರವೇ ಈ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಈಗ ಪಾಲಿಕೆ ಎದುರಿನ ರಸ್ತೆಯನ್ನು ಪ್ರಾಯೋಗಿಕವಾಗಿ ಮಾಡಲಾಗುವುದು.
ಅಶೋಕ ದುಡಗುಂಟಿ, ಆಯುಕ್ತರು, ಮಹಾನಗರ ಪಾಲಿಕೆ
*ಭೈರೋಬಾ ಕಾಂಬಳೆ
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.