![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 25, 2023, 11:13 PM IST
ಹೊಸದಿಲ್ಲಿ/ಮುಂಬಯಿ: ಭಾರತೀಯ ನೌಕಾ ಪಡೆಗೆ ಭೀಮಬಲ ನೀಡಲಿರುವ ಅತ್ಯಾಧುನಿಕ ಕ್ಷಿಪಣಿ ವಿಧ್ವಂಸಕ ನೌಕೆ “ಐಎನ್‌ಎಸ್ ಇಂಫಾಲ್’ ಅನ್ನು ಮಂಗಳವಾರ ಕರ್ತವ್ಯಕ್ಕೆ ನಿಯೋ ಜನೆ ಮಾಡಲಾಗುತ್ತದೆ. ಮುಂಬಯಿಯ ನೌಕಾ ನೆಲೆಯಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಅದನ್ನು ನೌಕಾಪಡೆಯ ಪಶ್ಚಿಮ ಕಮಾಂಡ್‌ಗೆ ನಿಯೋಜನೆಗೊಳಿಸಲಾಗುತ್ತದೆ. ಹಿಂದೂ ಮಹಾ ಸಾಗರ ವ್ಯಾಪ್ತಿಯ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಚೀನದ ಪ್ರಾಬಲ್ಯವನ್ನು ಮನಗಂಡು ಅದನ್ನು ವಿನ್ಯಾಸಗೊಳಿಸಲಾಗಿದೆ. ಅದರ ನಿಯೋಜನೆಯಿಂದ ಸಾಗರದ ಭದ್ರತೆಗೆ ಮತ್ತಷ್ಟು ಶಕ್ತಿ ಬರಲಿದೆ.
ಮಣಿಪುರಕ್ಕೆ ನೀಡಿದ ಗೌರವ: ಭಾರತೀಯ ನೌಕಾಪಡೆಯು ಯುದ್ಧನೌಕೆಯೊಂದಕ್ಕೆ ಇದೇ ಮೊದಲ ಬಾರಿಗೆ ದೇಶದ ಈಶಾನ್ಯ ಭಾಗದ ನಗ ರದ ಹೆಸರನ್ನು ಇಡಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಣಿಪುರದ ಜನರು ಮಾಡಿದ ಹೋರಾಟ, ತ್ಯಾಗವನ್ನು ಸ್ಮರಿಸುವ ನಿಟ್ಟಿನಲ್ಲಿ ಮಣಿಪುರದ ರಾಜಧಾನಿ ಇಂಫಾಲ್‌ನ ಹೆಸರನ್ನೇ ಐಎನ್‌ಎಸ್ ಇಂಫಾಲ್‌ಗೆ ಇಡಲಾಗಿದೆ
ಪ್ರಸಕ್ತ ವರ್ಷದ ಅ.20ರಂದು “ಐಎನ್‌ಎಸ್ ಇಂಫಾಲ್” ಅನ್ನು ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು. ಪರೀಕ್ಷಾರ್ಥ ಭಾಗವಾಗಿ ಬ್ರಹ್ಮೋಸ್ ಕ್ಷಿಪಣಿಯನ್ನು ಅದರ ಮೂಲಕ ಪರೀಕ್ಷಿಸಲಾಗಿತ್ತು. ಮಡಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್‌ನಿಂದ ಭಾರತದಲ್ಲೇ ನಿರ್ಮಾಣಗೊಂಡಿರುವ ಈ ಯುದ್ಧನೌಕೆ ಶೇ.75ರಷ್ಟು ದೇಶಿ ಬಿಡಿಭಾಗ, ತಂತ್ರಜ್ಞಾನವನ್ನು ಒಳ ಗೊಂಡಿದೆ. 163 ಮೀಟರ್ ಉದ್ದ ಹಾಗೂ 74,000 ಟನ್ ತೂಕದ್ದಾಗಿದೆ. ಒಟ್ಟು ಆರು ತಿಂಗಳ ಅವಧಿಯಲ್ಲಿ ಅದನ್ನು ನಿರ್ಮಿಸಲಾಗಿದೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಂಡಿ ರುವ “ಐಎನ್‌ಎಸ್ ಇಂಫಾಲ್” ಪರಮಾಣು, ಜೈವಿಕ, ರಾಸಾಯನಿಕ ಯುದ್ಧ ಪರಿಸ್ಥಿತಿಗಳಲ್ಲೂ ಹೋರಾಡುವ ಸಾಮರ್ಥ್ಯ ಹೊಂದಿದ್ದು, ಭಾರತ ದಲ್ಲಿ ಈ ವರೆಗೆ ನಿರ್ಮಿಸಿದ ಪ್ರಬಲ ಯುದ್ಧನೌಕೆಗಳಲ್ಲಿ ಒಂದು ಎಂಬ ಖ್ಯಾತಿಗೂ ಪಾತ್ರವಾಗಿದೆ.
ಇಂಫಾಲ್ ಹೆಸರು ಏಕೆ?
ದೇಶದ ಸ್ವಾತಂತ್ರ್ಯಕ್ಕಾಗಿ ಮಣಿಪುರದ ಜನರು ಮಾಡಿದ ತ್ಯಾಗ ಸ್ಮರಿಸಲು ರಾಜಧಾನಿ ಇಂಫಾಲ್ ಹೆಸರು ಇರಿಸಲು ತೀರ್ಮಾನ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.