ISRO: ಇಂದು ಇಸ್ರೋದಿಂದ ಇನ್‌ಸ್ಯಾಟ್-3ಡಿಎಸ್ ಉಡಾವಣೆ
ಮಳೆ, ಪ್ರವಾಹ, ಹವಾಮಾನದ ಕುರಿತು ಮುನ್ಸೂಚನೆ ನೀಡುವ ಉಪಗ್ರಹ - ಇಂದು ಸಂಜೆ 5.35ಕ್ಕೆ ಶ್ರೀಹರಿಕೋಟದಿಂದ ಉಡಾವಣೆ
Team Udayavani, Feb 17, 2024, 5:13 AM IST
ನವದೆಹಲಿ: ಭಾರತದ ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಶನಿವಾರ ಇನ್‌ಸ್ಯಾಟ್-3ಡಿಎಸ್ ಹವಾಮಾನ ಮುನ್ಸೂಚನಾ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಸಂಜೆ 5.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಪಗ್ರಹ ಉಡಾವಣೆಗೊಳ್ಳಲಿದೆ. 51.7 ಮೀಟರ್ ಎತ್ತರವಿರುವ ಜಿಎಸ್‌ಎಲ್‌ವಿ ರಾಕೆಟ್ ಉಪಗ್ರಹವನ್ನು ಹೊತ್ತೂಯ್ಯಲಿದೆ. ಉಪಗ್ರಹ ಒಟ್ಟು ತೂಕ 2,274 ಕೆ.ಜಿ. ಇದರ ನಿರ್ಮಾಣಕ್ಕೆ 480 ಕೋಟಿ ರೂ. ವೆಚ್ಚವಾಗಿದೆ. ಕೇಂದ್ರ ಭೂವಿಜ್ಞಾನ ಇಲಾಖೆ ಸಂಪೂರ್ಣ ವೆಚ್ಚವನ್ನು ಭರಿಸಿದೆ.
ಉಪಯೋಗಗಳೇನು?:
ಭಾರತದ ಹವಾಮಾನ, ವಾತಾವರಣಕ್ಕೆ ಸಂಬಂಧಿಸಿದಂತೆ ಮುನ್ಸೂಚನೆಗಳನ್ನು ನೀಡುವುದು ಇನ್‌ಸ್ಯಾಟ್-3ಡಿಎಸ್ ಉಪಗ್ರಹದ ಮುಖ್ಯ ಕೆಲಸ. ಈ ಉಪಗ್ರಹಗಳು ಇದುವರೆಗೆ ಭಾರತದ ಪಾಲಿಗೆ ನಿರ್ಣಾಯಕ ಶಕ್ತಿಗಳಾಗಿ ಕೆಲಸ ಮಾಡಿವೆ. ಭೂಮಿಯ ಮೇಲ್ಪದರ, ಸಮುದ್ರಭಾಗಗಳ ಮೇಲೆ ನಿಗಾ, ಮಳೆ, ಪ್ರವಾಹಗಳು, ಭೂಕಂಪನಗಳ ಕುರಿತು ಉಪಗ್ರಹ ಮುನ್ಸೂಚನೆ ನೀಡಲಿದೆ. ಈ ಉಪಗ್ರಹ ಸುಧಾರಿತ ಮೂರನೇ ಆವೃತ್ತಿಯಾಗಲಿದೆ. ಪೂರ್ಣವಾಗಿ ಹವಾಮಾನ ಸಂಬಂಧಿ ಕೆಲಸಗಳಿಗೇ ಸಮರ್ಪಿತಗೊಂಡಿದೆ.
2,274 ಕೆಜಿ- ಉಪಗ್ರಹದ ತೂಕ
480 ಕೋಟಿ ರೂ.- ನಿರ್ಮಾಣ ವೆಚ್ಚ
51.9 ಮೀಟರ್– ಜಿಎಸ್‌ಎಲ್‌ವಿ ರಾಕೆಟ್‌ನ ಎತ್ತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಎಷ್ಟು ಲಂಚ ತಿನ್ನುತ್ತೀಯಾ ತಿನ್ನು; ಅಧಿಕಾರಿಯ ಮೇಲೆ ಹಣ ಎಸೆದು ಆಕ್ರೋಶ ಹೊರಹಾಕಿದ ಜನ
Video: ಆತ್ಮಹತ್ಯೆ ಮಾಡಿಕೊಳ್ಳಲು 13ನೇ ಮಹಡಿಯಿಂದ ಜಿಗಿದರೂ ಬದುಕುಳಿದ ಕಾರ್ಮಿಕ….
Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ
Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್ ಅಸ್ತು
Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!
MUST WATCH
ಹೊಸ ಸೇರ್ಪಡೆ
ವರೂರಿ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಸುಮೇರು ಪರ್ವತ ಉದ್ಘಾಟಿಸಿದ ಉಪರಾಷ್ಟ್ರಪತಿ ಧನಕರ್
Mangaluru: ಅಂತಾರಾಷ್ಟ್ರೀಯ ಮಟ್ಟ ತಲುಪಿದ ಮಂಗಳೂರಿನ ಗಾಳಿಪಟ!
Video: ಎಷ್ಟು ಲಂಚ ತಿನ್ನುತ್ತೀಯಾ ತಿನ್ನು; ಅಧಿಕಾರಿಯ ಮೇಲೆ ಹಣ ಎಸೆದು ಆಕ್ರೋಶ ಹೊರಹಾಕಿದ ಜನ
Kundapura: ಪುರಸಭೆಗಳಲ್ಲಿ ಕಾಪು, ಕುಂದಾಪುರ ಮುಂಚೂಣಿ
Network Problem: ಮೊದಲು ಚೂರಾದರೂ ಇತ್ತು; ಈಗ ಇಲ್ಲವೇ ಇಲ್ಲ; ಕರೆ ಮಾಡಲು 3 ಕಿಮೀ ತೆರಳಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.