ಸ್ಫೂರ್ತಿ! ಕ್ಯಾನ್ಸರ್ ರೋಗಿಗಳಿಗೆ ಕೂದಲನ್ನು ದಾನ ಮಾಡಿದ ಪ್ರಾಣಿ ಪ್ರೇಮಿ ಯುವಕ
Team Udayavani, Feb 12, 2022, 6:54 PM IST
ಮಂಗಳೂರು: ಉದ್ದನೆಯ ಕೂದಲು ಹುಡುಗಿಯರು ಮತ್ತು ಮಹಿಳೆಯರಿಗೆ ಸಂಬಂಧಿಸಿದ್ದಾದರೂ ಕೆಲವು ಪುರುಷರು ತಮ್ಮ ಕೂದಲನ್ನು ಬೆಳೆಸುತ್ತಾರೆ, ಅದೇ ರೀತಿ ಮಂಗಳೂರಿನ ತರುಣ ವಿಘ್ನೇಶ್ ಆಚಾರ್ಯ ಕೋಟೆಕಾರ್ ಕಷ್ಟಪಟ್ಟು ಬೆಳೆಸಿದ್ದ ಉದ್ದನೆಯ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ಉದಾತ್ತ ಉದ್ದೇಶಕ್ಕಾಗಿ ದಾನ ಮಾಡಿದ್ದಾರೆ.
27 ವರ್ಷದ ಇಂಟೀರಿಯರ್ ಡಿಸೈನರ್ ಆಗಿರುವ ವಿಘ್ನೇಶ್ ಅತ್ಯಾಸಕ್ತಿಯ ಪ್ರಾಣಿ ಪ್ರೇಮಿ. ಅವರು ತಮ್ಮ ಬಿಡುವಿನ ವೇಳೆಯಲ್ಲಿ ಎಲ್ಲಾ ರೀತಿಯ ಪ್ರಾಣಿಗಳನ್ನು ವಿಶೇಷವಾಗಿ ಹಾವುಗಳು ಮತ್ತು ಇತರ ಸರೀಸೃಪಗಳನ್ನು ರಕ್ಷಿಸುತ್ತಿದ್ದಾರೆ. 3 ವರ್ಷಗಳಿಂದ ಪೋಷಿಸುತ್ತಿದ್ದ ಅವರ ಉದ್ದನೆಯ ತಲೆ ಕೂದಲು ಅವರ ಇನ್ನೊಂದು ಗುರುತಾಗಿತ್ತು.
ಉದಯವಾಣಿ ಕೂದಲು ದಾನಕ್ಕೆ ಏನು ಪ್ರೇರಣೆ ಎಂದು ಕೇಳಿದಾಗ, ವಿಘ್ನೇಶ್ ಹೇಳಿದರು “ನಾನು ಕೂದಲು ದಾನದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಕಥೆಗಳಿಂದ ಸ್ಫೂರ್ತಿ ಪಡೆದಿದ್ದೇನೆ. ನಾನು ಬಹಳ ಸಮಯದಿಂದ ನನ್ನ ಕೂದಲನ್ನು ದಾನ ಮಾಡಲು ಯೋಜಿಸುತ್ತಿದ್ದೆ ಎಂದರು.
“ಕೂದಲು ಕನಿಷ್ಠ ಒಂದು ಅಡಿ ಉದ್ದ ಇರಬೇಕು ಎಂದು ಕೆಲವರು ಹೇಳಿದರು. ನನ್ನ ಕೂದಲನ್ನು ಅಷ್ಟು ಉದ್ದಕ್ಕೆ ಬೆಳೆಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂಬ ಕಾರಣದಿಂದ ನಾನು ನಿರಾಶೆಗೊಂಡಿದ್ದೆ ಎಂದು ಅವರು ದಾನಕ್ಕೆ ಸರಿಯಾದ ವೇದಿಕೆಯನ್ನು ಹುಡುಕುವಾಗ ಎದುರಿಸಿದ ತೊಂದರೆಗಳ ಬಗ್ಗೆ ಹೇಳಿದರು. ಬಳಿಕ ಉದ್ದ ಕಡಿಮೆ ಇರುವ ಕೂದಲನ್ನು ಸ್ವೀಕರಿಸುವ ಇತರ ಸಂಸ್ಥೆಗಳನ್ನು ಹುಡುಕುವುದನ್ನು ಮುಂದುವರೆಸಿದೆ ಎಂದರು.
ಅಂತಿಮವಾಗಿ, ರೋಷನ್ ಬೆಳ್ಮಣ್ ನಡೆಸುತ್ತಿರುವ ಹ್ಯುಮಾನಿಟಿ ಟ್ರಸ್ಟ್‌ಗೆ ಸ್ನೇಹಿತ ಮತ್ತು ಆರ್‌ಜೆ ರಶ್ಮಿ ಉಳ್ಳಾಲ್ ಮೂಲಕ ಪರಿಚಯವಾಯಿತು “ವಿಗ್ ತಯಾರಿಕೆಗಾಗಿ 8 ಇಂಚು ಉದ್ದದ ಕೂದಲಿನ ಎಳೆಗಳನ್ನು ಸ್ವೀಕರಿಸಲು ಟ್ರಸ್ಟ್ ಒಪ್ಪಿಕೊಂಡಿತು. ಅವರು ಅದನ್ನು ತಮಿಳುನಾಡಿನ ವಿಗ್ ತಯಾರಕರಿಗೆ ಕಳುಹಿಸುತ್ತಾರೆ, ”ಎಂದು ಎಂದು ವಿಘ್ನೇಶ್ ಹೇಳಿದರು.
ದಾನ ಮಾಡಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಕೂದಲನ್ನು ಹಿಡಿದುಕೊಂಡ ಪೋಸ್ಟ್‌ನಲ್ಲಿ “ವಿಗ್‌ಗಳ ಅಗತ್ಯವಿರುವ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಲಾಗಿದೆ. ಸಹಾಯಕ್ಕಾಗಿ ರಶ್ಮಿ ಉಳ್ಳಾಲ್, ರೋಶನ್ (ಹ್ಯುಮಾನಿಟಿ ಟ್ರಸ್ಟ್ ಸ್ಥಾಪಕ) ಧನ್ಯವಾದಗಳು. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ಎಂದು ಬರೆದಿದ್ದಾರೆ.
ವಿಘ್ನೇಶ್ ಅವರ ದಾನ ಇನ್ನೂ ಅನೇಕ “ಉದ್ದ ಕೂದಲಿನ” ಪುರುಷರಿಗೂ ಸ್ಫೂರ್ತಿಯಾಗಲಿ ಎಂದು ಉದಯವಾಣಿ ಆಶಯ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
MUST WATCH
ಹೊಸ ಸೇರ್ಪಡೆ
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.