Mann Ki Baat: ನವಭಾರತದ ಸ್ಫೂರ್ತಿಯ ಸಂಕೇತ: “ಮನ್ ಕಿ ಬಾತ್”ನಲ್ಲಿ ಚಂದ್ರಯಾನ ಬಣ್ಣನೆ
Team Udayavani, Aug 28, 2023, 1:03 AM IST
ಹೊಸದಿಲ್ಲಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಇಳಿದದ್ದು ನವಭಾರತದ ಸ್ಫೂರ್ತಿಯ ಸಂಕೇತ. ಯಾವುದೇ ಕಷ್ಟದ ಪರಿಸ್ಥಿತಿಯನ್ನು ಪರಿಶ್ರಮದಿಂದ ಎದುರಿಸಲು ಸಾಧ್ಯ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ರವಿವಾರ “ಮನ್ ಕಿ ಬಾತ್’ನ 104ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಇಸ್ರೋದ ಮಹತ್ವಾತಾಂಕ್ಷೆಯ ಯೋಜನೆಯಲ್ಲಿ ಮಹಿಳಾ ವಿಜ್ಞಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಶಕ್ತಿ, ಸಾಮರ್ಥ್ಯಗಳನ್ನು ಅನಾವರಣ ಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ದೇಶದ ಮಹಿಳೆಯರು ಮುಖ್ಯ ಭೂಮಿಕೆ ವಹಿಸಿ ಒಂದು ಯೋಜನೆಯನ್ನು ಯಶಸ್ಸಿನತ್ತ ಕೊಂಡೊಯ್ಯು ತ್ತಾರೆ ಎಂದಾದರೆ ಆ ದೇಶದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಚಂದ್ರಯಾನ ಯಶಸ್ಸಿನ ಸ್ಫೂರ್ತಿಯಲ್ಲಿ ತಾವೇ ಬರೆದ “ಈಗಷ್ಟೇ ಸೂರ್ಯ ಉದಯಿಸಿದ್ದಾನೆ’ ಎಂಬ ಪದ್ಯವನ್ನು ಪ್ರಧಾನಿ ವಾಚಿಸಿದರು.
ಇತಿಹಾಸಕ್ಕೆ ಮಾದರಿ ಧನಪಾಲ
ಬೆಂಗಳೂರಿನ ಇತಿಹಾಸಕ್ಕೆ ಸಂಬಂಧಿಸಿ ಬಿಎಂಟಿಸಿಯ ನಿವೃತ್ತ ಚಾಲಕ ಕೆ. ಧನಪಾಲ ಅವರ ಅಪ್ರತಿಮ ಸೇವೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಧನಪಾಲ ಅವರು ಉದ್ಯಾನನಗರಿಯ ಪರಂಪರೆ ಮತ್ತು ಇತಿ ಹಾಸದ ಮರುಶೋಧನೆ ನಡೆಸಿರುವುದು ನನಗೆ ಹೆಮ್ಮೆ ಉಂಟು ಮಾಡಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಧನಪಾಲ ಅವರು ಬಿಎಂಟಿಸಿಯ “ಬೆಂಗಳೂರು ದರ್ಶಿನಿ’ ವಿಭಾಗದಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ, ಸದ್ಯ ನಿವೃತ್ತರಾಗಿದ್ದಾರೆ.
ಪ್ರಧಾನಿಯವರು “ಮನ್ ಕಿ ಬಾತ್’ನಲ್ಲಿ ನನ್ನ ಹೆಸರು ಪ್ರಸ್ತಾವಿಸಿರುವುದು ಅತ್ಯಂತ ಖುಷಿ ಕೊಟ್ಟಿದೆ. ಇದಕ್ಕಿಂತ ದೊಡ್ಡ ಸಮ್ಮಾನ ಇನ್ನೇನಿದೆ? ಎಲ್ಲ ಸ್ನೇಹಿತರು, ವಿದ್ವಾಂಸರು ಕರೆ ಮಾಡಿ ಶುಭ ಹಾರೈಸುತ್ತಿದ್ದಾರೆ. ಇನ್ನಷ್ಟು ಆಸಕ್ತಿಯಿಂದ ಕೆಲಸ ಮಾಡಲು ಪ್ರೇರಣೆ ಸಿಕ್ಕಿದೆ.
-ಕೆ. ಧನಪಾಲ್, ಬಿಎಂಟಿಸಿ ನಿವೃತ್ತ ಚಾಲಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.