ಯಾವುದೇ ಕ್ಷಣ ಮಧ್ಯಂತರ ಚುನಾವಣೆ: ಸಿದ್ದು
Team Udayavani, Aug 29, 2019, 3:08 AM IST
ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ “ಆಪರೇಷನ್ ಕಮಲ’ದ ಅನೈತಿಕ ಶಿಶು. ಇಂತಹ ಸರಕಾರ ಯಾವುದೇ ಕ್ಷಣ ಪತನವಾಗಿ ಮಧ್ಯಂತರ ಚುನಾವಣೆ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಜನಾದೇಶ ಇಲ್ಲದಿದ್ದರೂ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ. ಇದು ಶಿಸ್ತು ಬದ್ಧ ಪಕ್ಷ ಅಲ್ಲ. ಅಧಿಕಾರದ ಆಸೆಗಾಗಿ ಅಡ್ಡದಾರಿ ಅನುಸರಿಸುವ ಪಕ್ಷ. ಈಗ ಈ ಪಕ್ಷದಿಂದ ಅನೈತಿಕ ಸರ್ಕಾರ ರಚನೆಯಾಗಿದೆ ಎಂದು ಟೀಕಿಸಿದರು.
ನಾವು ಮಧ್ಯಂತರ ಚುನಾವಣೆ ಬಯಸುವುದಿಲ್ಲ. ಆದರೆ, ಬಿಜೆಪಿಯೊಳಗಿನ ಅಸಮಾಧಾನ ಹಾಗೂ ಬೆಳವಣಿಗೆ ನೋಡಿದರೆ ಯಾವುದೇ ಕ್ಷಣದಲ್ಲೂ ಈ ಸರಕಾರ ಬಿದ್ದು ಹೋಗಬಹುದು. ಆಗ ಅನಿವಾರ್ಯವಾಗಿ ಮಧ್ಯಂತರ ಚುನಾವಣೆ ಬರಲಿದೆ. ಇದಕ್ಕೆ ನಾವೂ ಸಹ ಸಿದ್ಧರಾಗಿದ್ದೇವೆ ಎಂದರು.
ಜೆಡಿಎಸ್ ಮೇಲೆ ಹಗೆ ಇಲ್ಲ: ನಾವು ಅಧಿಕೃತವಾಗಿ ವಿರೋಧ ಪಕ್ಷದಲ್ಲಿದ್ದೇವೆ. ನಮ್ಮ ವಿರೋಧ ಕೋಮುವಾದಿ ಬಿಜೆಪಿಗೆ ಹೊರತು ಜೆಡಿಎಸ್ ವಿರುದ್ಧ ಅಲ್ಲ. ನಾವು ಜೆಡಿಎಸ್‌ನವರ ಮೇಲೆ ಹಗೆ ಸಾಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಪಕ್ಷ ದ್ರೋಹ ಮಾಡಿದವರಿಗೆ ಪಾಠವಾಗಬೇಕೆಂದು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇಂತಹ ಅನರ್ಹ ಶಾಸಕರ ಬೆಂಬಲದಿಂದ ಬಿಜೆಪಿ, ಮೈತ್ರಿ ಸರಕಾರವನ್ನು ಬೀಳಿಸಿದೆ. ಈಗ ಅದಕ್ಕೂ ಸಹ ನೆಮ್ಮದಿ ಇಲ್ಲ ಎಂದು ಹೇಳಿದರು.
ಈಶ್ವರಪ್ಪ ಮೂರ್ಖ: ಸಿದ್ದರಾಮಯ್ಯ “ಆಪರೇಷನ್ ಜನಕ’ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, “ಈಶ್ವರಪ್ಪ ಮೂರ್ಖ. ಅವರ ನಾಲಿಗೆಗೂ, ಬ್ರೇನ್‌ಗೂ ಲಿಂಕೇ ಇಲ್ಲ’ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ರಾಜ್ಯದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿದೇಶಕ್ಕೆ ಹೋಗಲು ಸಮಯ ಸಿಗುತ್ತದೆ. ಆದರೆ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಹ ಪರಿಸ್ಥಿತಿ ಕುರಿತು ವೈಮಾನಿಕ ಸಮೀಕ್ಷೆ ಕೈಗೊಳ್ಳಲು ಸಮಯ ಸಿಗುತ್ತಿಲ್ಲ.
-ಸಿದ್ದರಾಮಯ್ಯ, ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.