PUC ಗೆ ಆಂತರಿಕ ಅಂಕ: ಪ್ರಶ್ನೆಪತ್ರಿಕೆಗೆ ಹೊಸ ರೂಪ
Team Udayavani, Sep 25, 2023, 1:02 AM IST
ಮಂಗಳೂರು: ಪದವಿಪೂರ್ವ ವಿದ್ಯಾರ್ಥಿಗಳಿಗೆ ಅಂಕ ಹಂಚಿಕೆ ಬದಲಾವಣೆ ಹಿನ್ನೆಲೆ ಯಲ್ಲಿ ಈ ಸಾಲಿನಿಂದ ಪ್ರಶ್ನೆಪತ್ರಿಕೆಯ ಶೈಲಿಯೂ ಬದಲಾಗಲಿದ್ದು, ಆಂತರಿಕ ಅಂಕ ಹಂಚಿಕೆಯ ಸ್ವರೂಪ ಅನುಷ್ಠಾನಕ್ಕೆ ಸಿದ್ಧತೆ ನಡೆಯುತ್ತಿದೆ.
ಈ ವರ್ಷದಿಂದ ಪಿಯುಸಿಯ ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಿಗೆ 80 ಅಂಕಗಳಲ್ಲಿ ಲಿಖೀತ ಪರೀಕ್ಷೆ ನಡೆಯಲಿದೆ ಮತ್ತು 20 ಅಂಕ ಆಂತರಿಕವಾಗಿ ನೀಡಲಾಗುತ್ತದೆ. ಇದಕ್ಕಾಗಿ ವಿವಿಧ ಪರೀಕ್ಷೆಗಳ ಸರಾಸರಿ ಅಂಕಗಳ ಮೂಲಕ ಗರಿಷ್ಠ 10 ಅಂಕ ಹಾಗೂ ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್ ಮೂಲಕ 10 ಅಂಕ ನೀಡಲಾಗುತ್ತದೆ.
ಆಂತರಿಕ ಮೌಲ್ಯಮಾಪನ ವಿಧಾನಗಳ ಬಗ್ಗೆ ಮಾರ್ಗ ದರ್ಶಿ ಕೈಪಿಡಿ ಈಗಾಗಲೇ ತಲುಪಿದೆ. 80 ಅಂಕಗಳಿಗೆ ಸರಿ ಹೊಂದುವ ಪ್ರಶ್ನೆಗಳ ನೀಲನಕ್ಷೆ ಮತ್ತು ಮಾದರಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತಿದೆ.
ಆಂತರಿಕ ಅಂಕ ಹಂಚಿಕೆ ವಿಧಾನ
10 ಅಂಕ: 1ನೇ, 2ನೇ ಕಿರು ಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳಲ್ಲಿ ಉತ್ತಮವಾದ ಎರಡನ್ನು 10 ಅಂಕಗಳಿಗೆ ಪರಿವರ್ತಿಸಿ ಅವುಗಳ ಸರಾಸರಿ ಅಂಕಗಳನ್ನು ನೀಡಲಾಗುತ್ತದೆ.
10 ಅಂಕ: ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಹಾಗೂ ಅಸೈನ್‌ಮೆಂಟ್ ಅಂಕಗಳು (ಇದರಲ್ಲಿ ಪ್ರಾಜೆಕ್ಟ್ ಹಾಗೂ ಅಸೈನ್‌ಮೆಂಟ್‌ಗಳಿಗೆ ಬರವಣಿಗೆ ವಿಭಾಗಕ್ಕೆ 5 ಅಂಕಗಳು ಹಾಗೂ ಪ್ರಸ್ತುತಿಗೆ 3 ಅಂಕಗಳು ಮತ್ತು ಸಂದರ್ಶನಕ್ಕೆ 2 ಅಂಕಗಳು).
ಪ್ರಸೆಂಟೇಶನ್‌ಗೆ ಎಷ್ಟು ತಾಸು?
“ಪಿಯುಸಿಗೆ ಒಂದು ಶೈಕ್ಷಣಿಕ ವರ್ಷದಲ್ಲಿ ಪಾಠಕ್ಕಾಗಿ 120 ತಾಸು ಮೀಸಲಿದೆ. ಇದರಲ್ಲಿ ಬೋಧನೆ ಮುಗಿಸುವುದೇ ಸವಾಲು. ಇದರ ಮಧ್ಯೆ ಹೊಸ ಕ್ರಮದಂತೆ ಆಂತರಿಕ ಅಂಕಗಳ ಪೈಕಿ 5 ಅಂಕಗಳನ್ನು ಪ್ರಸ್ತುತಿ (ಪ್ರಸೆಂಟೇಶನ್) ಹಾಗೂ ಸಂದರ್ಶನಕ್ಕೆ ಮೀಸಲಿಡಲಾಗಿದೆ. ಒಬ್ಬ ವಿದ್ಯಾರ್ಥಿಯು ಅರ್ಧ ತಾಸು ತರಗತಿಯಲ್ಲಿ ಪ್ರಸೆಂಟೇಶನ್/ಸಂದರ್ಶನ ನೀಡಿದರೆ 80 ವಿದ್ಯಾರ್ಥಿಗಳು ಇರುವ ತರಗತಿಯಲ್ಲಿ ಎಷ್ಟು ತಾಸುಗಳನ್ನು ಇದಕ್ಕಾಗಿ ಮೀಸಲಿಡಬೇಕು ಎಂಬುದು ಸದ್ಯದ ಪ್ರಶ್ನೆ. ಒಂದು ವೇಳೆ ಕನಿಷ್ಠ ಅರ್ಧ ತಾಸು ಪ್ರಸೆಂಟೇಶನ್ ಇಲ್ಲವಾದರೆ ಇದರ ಔಚಿತ್ಯವಾದರೂ ಏನು?’ ಎನ್ನುವುದು ಅಧ್ಯಾಪಕರೊಬ್ಬರು ಪ್ರಶ್ನಿಸಿದ್ದಾರೆ.
ಎಸೆಸೆಲ್ಸಿ , ದ್ವಿತೀಯ ಪಿಯುಸಿ ಪರೀಕ್ಷೆಯ ಮಾರ್ಗಸೂಚಿ ಪ್ರಕಟ
ಬೆಂಗಳೂರು: ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಗೆ ಮೂರು ಅಂತಿಮ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿದ್ದ ಸರಕಾರ ಈಗ ಪರೀಕ್ಷೆಯ ಮಾರ್ಗಸೂಚಿ ಪ್ರಕಟಿಸಿದೆ. ಮೊದಲ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಾತ್ರ 2ನೇ ಮತ್ತು 3ನೇ ಪರೀಕ್ಷೆಯನ್ನು ಬರೆ ಯುವ ಅವಕಾಶ ನೀಡಲಾಗಿದ್ದು, ವಿಷಯವಾರು ತಮ್ಮಿಚ್ಛೆಯ ಅಂಕವನ್ನು ಕಾಯ್ದುಕೊಳ್ಳಲು ಅವಕಾಶ ಇದೆ.
ಪ್ರಥಮ ಬಾರಿಗೆ ಪರೀಕ್ಷೆ ತೆಗೆದು ಕೊಳ್ಳುವ ಹೊಸಬರು ಮತ್ತು ಖಾಸಗಿ ಅಭ್ಯರ್ಥಿಗಳು ನೇರವಾಗಿ ಪರೀಕ್ಷೆ-2 ಮತ್ತು ಪರೀಕ್ಷೆ-3ಕ್ಕೆ ಹಾಜರಾಗುವಂತಿಲ್ಲ ಎಂದು ಸ್ಪಷ್ಪಪಡಿಸಲಾಗಿದೆ.
ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಾಗಿ ಒಂದು ಬಾರಿ ಮಾತ್ರ ಶುಲ್ಕ ವಿಧಿಸ ಬೇಕು. ಪರೀಕ್ಷೆ-1ರಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ 2 ಮತ್ತು 3ನೇ ಪರೀಕ್ಷೆ ತೆಗೆದುಕೊಳ್ಳಲು ಇಚ್ಛೆ
ಇಲ್ಲದಿದ್ದಲ್ಲಿ ಅವರಿಗೆ ಅಂಕಪಟ್ಟಿಯನ್ನು ವಿತರಿಸಬೇಕೆಂದು ತಿಳಿಸಲಾಗಿದೆ.
ಶೇ.75 ಹಾಜರಿ ಕಡ್ಡಾಯ
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶೇ.75ರಷ್ಟು ವಾರ್ಷಿಕ ಹಾಜರಾತಿ ಯನ್ನು ಕಡ್ಡಾಯಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.