Hospete: ಫೆ.3 ರಂದು ಅಂತರಾಷ್ಟ್ರೀಯ ಪ್ರವಚನಕಾರರಾದ ಬಿ.ಕೆ.ಶಿವಾನಿ ಹೊಸಪೇಟೆಗೆ ಭೇಟಿ
Team Udayavani, Jan 11, 2024, 7:35 PM IST
ಹೊಸಪೇಟೆ: ಪ್ರಖ್ಯಾತ ಪ್ರೇರಣಾದಾಯಿ ಅಂತರಾಷ್ಟ್ರೀಯ ಪ್ರವಚನಕಾರರಾದ ಬಿ.ಕೆ.ಶಿವಾನಿಯವರು, ಪ್ರಥಮ ಬಾರಿಗೆ ಐತಿಹಾಸಿಕ ನಗರಿ ಹೊಸಪೇಟೆಗೆ ಆಗಮಿಸುತ್ತಿದ್ದು, ನಗರದ ಬಾಲ ಟಾಕೀಸ್ ಹಿಂಭಾಗದಲ್ಲಿರುವ ಪತ್ತಿಕೊಂಡ ಶಾಲೆ ಆವರಣದಲ್ಲಿ ಫೆ.3 ರಂದು ಬೆಳಿಗ್ಗೆ 6-30ರಿಂದ 8-30 ರ ವರೆಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯ ಸಂಚಾಲಕಿ ಬಿ.ಕೆ.ಮಾನಸ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ಕಾರ್ಯಕ್ರಮದಲ್ಲಿ ಸುಮಾರು ೨೦೦೦ ಜನರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛಿಸುವ ಜನರು ಮೊದಲೇ ತಮ್ಮ ಹೆಸರನ್ನು (9141023249) ಈ ನಂಬರ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ನೋಂದಾಯಿಸಿದವರಿಗೆ ಪ್ರವೇಶಕ್ಕೆ ಉಚಿತ ಪಾಸ್ ವಿತರಣೆ ಮಾಡಲಾಗುವುದು ಪಾಸ್ ಪಡೆಯಲು ಬಸವಣ್ಣ ಕಾಲುವೆ ಹತ್ತಿರ ಇರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯನ್ನು ಸಂಪರ್ಕಿಸಬೇಕು ಎಂದು ಕೋರಲಾಗಿದೆ.
ಆಧುನಿಕ ಜೀವನ ಶೈಲಿ ಹಾಗೂ ಒತ್ತಡ ಬದುಕಿನಿಂದ ಹೊರ ಬರಲು ಆಧ್ಯಾತ್ಮಕತೆ ಒಂದು ವರದಾನವಾಗಿದೆ. ತಮ್ಮೆಲ್ಲ ಒತ್ತಡವನ್ನು ಬದಿಗಿಟ್ಟು ಜನರು, ಆಧ್ಯಾತ್ಮ ಚಿಂತನೆ ಮತ್ತು ಮೆಡಿಟೇಷನ್ ಮೂಲಕ ಸಂಪೂರ್ಣ ಆರೋಗ್ಯ ಅನುಭವ ಹೊಂದಬೇಕು ಎಂದರು. ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ರೇವತಿ ಹಾಗೂ ವೆಂಕಟೇಶ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hagaribommanahalli: ಹಳಿ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು
Deepawali; ಸರಣಿ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!
Hoskote: 16.50 ಲ.ರೂ. ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳ ಸೆರೆ
Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ
Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.