ಕೇರಳ: ಆ್ಯಂಬ್ಯುಲೆನ್ಸ್ಗೆ ಮಹಿಳಾ ಚಾಲಕಿ
Team Udayavani, Mar 9, 2022, 7:35 AM IST
ತಿರುವನಂತಪುರ: ಕೇರಳದಲ್ಲಿ ಮೊದಲ ಬಾರಿಗೆ ಆ್ಯಂಬ್ಯುಲೆನ್ಸ್ಗೆ ಮಹಿಳೆಯನ್ನು ಚಾಲಕಿಯನ್ನಾಗಿ ನೇಮಿಸಲಾಗಿದೆ. ಕೊಲ್ಲಂ ಜಿಲ್ಲೆಯ ದೀಪಮೋಳ್ ಅವರಿಗೆ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಆ್ಯಂಬ್ಯುಲೆನ್ಸ್ನ ಇಗ್ನಿಷನ್ ಕೀಯನ್ನು ಹಸ್ತಾಂತರಿಸಿ, ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಚಾಲಕಿಯರನ್ನು ನೇಮಿಸಲಾಗುತ್ತದೆ. ಎಲ್ಲ 14 ಜಿಲ್ಲೆಗಳಲ್ಲಿ ಆ್ಯಂಬ್ಯುಲೆನ್ಸ್ಗಳನ್ನು ಚಲಾ ಯಿಸಲು ಕನಿಷ್ಠ ಒಬ್ಬ ಮಹಿಳೆಯನ್ನಾದರೂ ನೇಮಿಸಲಾಗುವುದು ಎಂದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೀಪಾ ಅವರು, ಜನರ ಆರೋಗ್ಯ ಸೇವೆಯ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬ ನನ್ನ ಕನಸು ಈಗ ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ದೀಪಾ ಅವರು ವಾಹನ ಚಲಾಯಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.