Interview: ಬೆಳಗಾವಿ ಅಧಿವೇಶನ “ಹೆಸರಿಗೆ ಮಾತ್ರ” ಆಗಲು ಬಿಡಲ್ಲ: ಹೊರಟ್ಟಿ
-ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಡಿ.5, 6ರಂದು ಚರ್ಚೆ
Team Udayavani, Nov 28, 2023, 10:45 PM IST
ಬೆಂಗಳೂರು: ಪ್ರತಿ ಸಲ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಒಂದು ಆರೋಪ ಕೇಳಿಬರುತ್ತದೆ. “ಉತ್ತರ ಕರ್ನಾಟಕದಲ್ಲೇ ಅಧಿವೇಶನ ನಡೆಯುತ್ತದೆ. ಆ ಭಾಗದ ಚರ್ಚೆಗೆ ಮಾತ್ರ ಅವಕಾಶ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಕೊನೆಯ ಎರಡು ದಿನಗಳು ಸೀಮಿತವಾಗಿರುತ್ತವೆ. ಅಷ್ಟೊತ್ತಿಗೆ ಎಲ್ಲರೂ ಗಂಟುಮೂಟೆ ಕಟ್ಟಿಕೊಂಡು ಊರಿಗೆ ಹೋಗುವ “ಮೂಡ್’ನಲ್ಲಿರುತ್ತಾರೆ. ಇದಕ್ಕಾಗಿ ಇಲ್ಲಿ (ಬೆಳಗಾವಿಯಲ್ಲಿ) ಅಧಿವೇಶನ ನಡೆಸಬೇಕಾ’ ಎಂಬ ಆಕ್ರೋಶ ಅಲ್ಲಿಯ ಜನರದ್ದಾಗಿದೆ.
“ಈ ಸಲ ಮೇಲ್ಮನೆಯ ಮಟ್ಟಿಗಂತೂ ಅಂತಹ ಆರೋಪಗಳಿಗೆ ಅವಕಾಶ ನೀಡುವುದಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳು ಅಧಿವೇಶನದ ಆದ್ಯತೆ ಆಗಿರಲಿವೆ. ಕೊನೆಯಲ್ಲಿ ಚರ್ಚೆ ಇಲ್ಲ. ಆರಂಭದಲ್ಲೇ ಮೊದಲೆರಡು ದಿನಗಳು ಆ ಭಾಗದ ಬದುಕು-ಬವಣೆ ಕುರಿತ ಗಂಭೀರ ಚರ್ಚೆಗಳಿಗೆ ಅಧಿವೇಶನ ವೇದಿಕೆ ಆಗಲಿದೆ. ಅದರಲ್ಲೂ ಬರ, ಅದರ ಪರಿಣಾಮಗಳು, ಪರಿಹಾರೋಪಾಯಗಳ ಮೇಲೆ ಮೇಲ್ಮನೆ ಬೆಳಕು ಚೆಲ್ಲಲಿದೆ’.
– ಇದು ಸ್ವತಃ ಉತ್ತರ ಕರ್ನಾಟಕದವರೇ ಆಗಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರ ಸ್ಪಷ್ಟ ನುಡಿಗಳು. ಬೆಳಗಾವಿ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂಬಂಧ ಸಿದ್ಧತೆಗಳೂ ಭರದಿಂದ ಸಾಗಿವೆ. ಅಧಿವೇಶನದ ಕಾರ್ಯಕಲಾಪಗಳ ಪಟ್ಟಿಯಲ್ಲಿ “ಬ್ಯುಸಿ’ ಆಗಿರುವ ಅವರು, ಸಿದ್ಧತೆಗಳು, ಈ ಬಾರಿಯ ಆದ್ಯತೆಗಳು ಸೇರಿದಂತೆ ಹಲವು ವಿಷಯಗಳ ಕುರಿತು “ಉದಯವಾಣಿ’ಯೊಂದಿಗೆ ಹಂಚಿಕೊಂಡರು.
* ಮತ್ತೂಂದು ಅಧಿವೇಶನ ಬೆಳಗಾವಿ ಸಜ್ಜಾಗುತ್ತಿದೆ. ಸಿದ್ಧತೆಗಳು ಹೇಗೆ ನಡೆದಿವೆ?
– ಎಂದಿನಂತೆ ಅಧಿವೇಶನಕ್ಕೆ ಕಾರ್ಯಕಲಾಪ ಪಟ್ಟಿಯ ಸಿದ್ಧತೆ ನಡೆದಿದೆ. ಯಾವ ವಿಷಯಗಳಿಗೆ ಆದ್ಯತೆ ನೀಡಬೇಕು? ಎಷ್ಟು ಅವಧಿ ಮೀಸಲಿಡಬೇಕು? ಉತ್ತರ ಕರ್ನಾಟಕದಲ್ಲಿ ನಡೆಯುವುದರಿಂದ ಆ ಭಾಗಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು, ಸಮಸ್ಯೆಗಳನ್ನು ಹೊತ್ತುತರುವ ಸದಸ್ಯರಿಗೆ ಸಾಧ್ಯವಾದಷ್ಟು ಅವಕಾಶ ಕಲ್ಪಿಸಬೇಕು. ಲಭ್ಯವಿರುವ ಅಲ್ಪಾವಧಿಯಲ್ಲಿ ಎಲ್ಲವನ್ನೂ ಹೊಂದಾಣಿಕೆ ಮಾಡಬೇಕಿದೆ.
* ಹಾಗಿದ್ದರೆ, ಈ ಬಾರಿಯ ಆದ್ಯತೆಗಳು ಏನು ಆಗಿರಲಿವೆ?
– ರಾಜ್ಯಾದ್ಯಂತ ಬರ ಇದೆ. ಇದರ ಬಿಸಿ ಮಳೆಯಾಶ್ರಿತ ಪ್ರದೇಶ ಹೆಚ್ಚಾಗಿರುವ ಉತ್ತರ ಕರ್ನಾಟಕಕ್ಕೆ ತುಸು ಜೋರಾಗಿಯೇ ತಟ್ಟಿದೆ. ದನಕರುಗಳಿಗೂ ನೀರಿಲ್ಲ. 1.20 ಲಕ್ಷ ಬೆಲೆಬಾಳುವ ಎತ್ತುಗಳನ್ನು ರೈತರು ಸಾಲ ಮತ್ತಿತರ ಕಾರಣಗಳಿಂದ ಬರೀ 50 ಸಾವಿರ ರೂ.ಗಳಿಗೆ ರೈತರು ಮಾರಾಟ ಮಾಡಿದ್ದಿದೆ. ಇಂತಹ ಹತ್ತಾರು ಸಮಸ್ಯೆಗಳು ಆ ಭಾಗವನ್ನು ಕಾಡುತ್ತಿವೆ. ಇದರ ಜತೆಗೆ ರಾಜ್ಯದ ಗಂಭೀರ ವಿಷಯಗಳಿಗೆ ಆದ್ಯತೆ ಇರಲಿದೆ.
* ಹೆಸರಿಗೆ ಮಾತ್ರ ಬೆಳಗಾವಿ ಅಧಿವೇಶನ. ಆದರೆ, ಅಲ್ಲಿ ನಡೆಯುವ ಚರ್ಚೆಗಳು ಬಹುತೇಕ ಉತ್ತರ ಕರ್ನಾಟಕಕ್ಕೆ ಹೊರತಾಗಿಯೇ ಇರುತ್ತವೆ ಎಂಬ ಬೇಸರ ಆ ಭಾಗದ ಜನರದ್ದಾಗಿದೆ. ಇದಕ್ಕೆ ಏನು ಹೇಳುತ್ತೀರಿ?
– ಜನರ ಆ ಬೇಸರಕ್ಕೂ ಅರ್ಥ ಇದೆ. ಪ್ರತಿ ಬಾರಿ ಉತ್ತರ ಕರ್ನಾಟಕದ ಚರ್ಚೆಗಳಿಗೆ ಕೊನೆಯ ಎರಡು ದಿನಗಳು ಮೀಸಲಿರುತ್ತಿದ್ದವು. ಅಷ್ಟೊತ್ತಿಗೆ ಉತ್ಸಾಹವೂ ಕುಗ್ಗಿರುತ್ತದೆ. ಸದಸ್ಯರು ಊರುಗಳ ಕಡೆಗೆ ಹೋಗುವ ಧಾವಂತದಲ್ಲಿ ಇರುತ್ತಾರೆ ಅಥವಾ ಗಲಾಟೆಯಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆಗಿಬಿಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸಲ ಅಧಿವೇಶನದ ಆರಂಭದಲ್ಲೇ ಅಂದರೆ ಎರಡು ಮತ್ತು ಮೂರನೇ ದಿನ (ಡಿ. 5 ಮತ್ತು 6)ವನ್ನು ಆ ಭಾಗದ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು. ಪ್ರಶ್ನೋತ್ತರ ಮುಗಿಯುತ್ತಿದ್ದಂತೆ ಚರ್ಚೆಗೆ ಎತ್ತಿಕೊಳ್ಳಲಾಗುವುದು. ಅಷ್ಟೇ ಅಲ್ಲ, ಪ್ರಶ್ನೋತ್ತರ ವೇಳೆಯಲ್ಲಿ ಉತ್ತರ ಕರ್ನಾಟಕವಲ್ಲದ ಸದಸ್ಯರು ಯಾರಾದರೂ ಆ ಭಾಗಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದರೆ, ಅದಕ್ಕೆ ಆದ್ಯತೆ ನೀಡಲಾಗುವುದು.
* ಬೆಳಗಾವಿ ಸುವರ್ಣಸೌಧ ಬರೀ ಅಧಿವೇಶನಕ್ಕೆ ಸೀಮಿತವಾಗಿದೆ. ಇಲಾಖೆಗಳ ಸ್ಥಳಾಂತರಕ್ಕೆ ಆದೇಶವಾದರೂ ಪಾಲನೆ ಮಾತ್ರ ಆಗುತ್ತಿಲ್ಲವಲ್ಲಾ?
– ಹೌದು, ಸ್ವತಃ ನಾನೇ ಭರವಸೆಗಳ ಸಮಿತಿಯಲ್ಲಿದ್ದಾಗ ಶಿಫಾರಸು ಮಾಡಿದ್ದೆ. 13 ಇಲಾಖೆಗಳನ್ನು ಸ್ಥಳಾಂತರ ಮಾಡಬೇಕು ಎಂದರೂ ಆ ನಿಟ್ಟಿನಲ್ಲಿ ಕ್ರಮ ಆಗುತ್ತಿಲ್ಲ. ಇಲಾಖೆಗಳ ಸ್ಥಳಾಂತರದ ಜತೆಗೆ ಆಗಾಗ್ಗೆ ಸಚಿವ ಸಂಪುಟ ಸಭೆಗಳು ಕೂಡ ಬೆಳಗಾವಿಯಲ್ಲಿ ನಡೆಯುವಂತಾಗಬೇಕು. ಇದೆಲ್ಲಾ ಐಎಎಸ್ ಅಧಿಕಾರಿಗಳ ಕೈಯಲ್ಲಿದೆ. ಸ್ಥಳಾಂತರದ ಅಗತ್ಯತೆಯನ್ನು ಮನಗಂಡು ಸರ್ಕಾರ ಇದಕ್ಕೆ ಮನಸ್ಸು ಮಾಡಬೇಕು. ಅಲ್ಲಿಯವರೆಗೆ ಏನೂ ಮಾಡಲಾಗದು.
* ವರ್ಷದಲ್ಲಿ 60 ದಿನ ಅಧಿವೇಶನ ಕಡ್ಡಾಯವಾಗಿ ನಡೆಸಬೇಕು. ಈ ಬಗ್ಗೆ ಏನು ಹೇಳುತ್ತೀರಿ?
– ನಾವು 60 ದಿನ ಅಂದ್ರೂ ನಡೆಸುತ್ತೇವೆ; ಹತ್ತೇ ದಿನ ನಡೆಸಿ ಅಂದ್ರೂ ನಡೆಸುತ್ತೇವೆ. ಶಾಲೆ ನಡೆಸುವುದು ಅಥವಾ ಸೂಟಿ (ರಜೆ) ಕೊಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಈ ಬಗ್ಗೆ ಖಡಕ್ ನಿರ್ಧಾರ ಕೈಗೊಂಡರೆ, ನಾವೂ 60 ದಿನ ನಡೆಸಲು ಸಿದ್ಧ. ಅದು ಸಾಧ್ಯವಾದರೆ, ಜನರ ಕಷ್ಟಗಳೂ ಪರಿಹಾರ ಆಗುತ್ತವೆ. ಆದರೆ ವಾಸ್ತವವಾಗಿ ಹೇಳುವುದಾದರೆ, ಆ ಉತ್ಸಾಹ ಕಂಡುಬರುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ.
ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.