Fraud ಷೇರುಗಳಲ್ಲಿ ಹೂಡಿಕೆ ಆಮಿಷ: 19.50 ಲ.ರೂ. ವಂಚನೆ
Team Udayavani, Jun 5, 2024, 8:11 PM IST
ಮಂಗಳೂರು: ಷೇರುಗಳಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ವ್ಯಕ್ತಿಯೋರ್ವರಿಗೆ 19.50 ಲ.ರೂ. ವಂಚಿಸಿದ ಘಟನೆ ಸಂಭವಿಸಿದ್ದು ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಆಕಾಶ್ ವರ್ನಭಾನಿ ಕಳುಹಿಸಿದ ಲಿಂಕ್‌ನ ಮೂಲಕ ವ್ಯಕ್ತಿಯೋರ್ವರು “568 INDIAN SOCK LEADE’ ವಾಟ್ಸ್ ಆ್ಯಪ್ ಗ್ರೂಪ್‌ಗೆ ಕಳೆದ ಎ. 7ರಂದು ಸೇರ್ಪಡೆಗೊಂಡಿದ್ದರು. ಅನಂತರ ಆ ಗ್ರೂಪ್‌ನಲ್ಲಿ ಸಿಂಗ್ ಎಂಬಾತ ಹಣವನ್ನು ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ವಿಚಾರ ತಿಳಿಸಿದ. ಅದರಂತೆ ದೂರುದಾರರು ಎ. 29ರಂದು 1 ಲ.ರೂ. ವರ್ಗಾವಣೆ ಮಾಡಿದ್ದರು. ಮತ್ತೆ ಮೇ 3ರಂದು 3 ಲ.ರೂ. ಮೊತ್ತ ವರ್ಗಾಯಿಸಿದರು. ಮೇ 10ರಂದು 1.50 ಲ.ರೂ., ಮೇ 17ರಂದು 4 ಲ.ರೂ. ಹೀಗೆ ಹಂತ ಹಂತವಾಗಿ 19.50 ಲ.ರೂ.ಗಳನ್ನು ವರ್ಗಾಯಿಸಿದರು. ಅನಂತರ ಹೂಡಿಕೆ ಮೊತ್ತವನ್ನು ವಾಪಸ್ ನೀಡುವಂತೆ ಕೇಳಿದಾಗ ಆರೋಪಿ ಅನೂಜ್ ಗುಪ್ತಾ ಹೆಚ್ಚುವರಿಯಾಗಿ 7.88 ಲ.ರೂ.ಗಳನ್ನು ಪಾವತಿಸುವಂತೆ ಸೂಚಿಸಿದ. ಆಗ ತಾನು ಮೋಸ ಹೋಗಿರುವುದು ದೂರುದಾರರಿರಿಗೆ ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.