ಬಿಡುಗಡೆ ಆಯ್ತು ಐಫೋನ್ ಕಾರ್ ಕೀ!
ಇನ್ನು ಕೀ ಹಂಗಿಲ್ಲದೇ ಐಫೋನ್ ಬಳಸಿಯೇ ಕಾರ್ ಸ್ಟಾರ್ಟ್ ಮಾಡಬಹುದು!
Team Udayavani, Jul 17, 2020, 12:27 PM IST
ಮುಂಬೈ: ಹಲವು ದಿನಗಳಿಂದ ಆ್ಯಪಲ್, ಐಫೋನ್‌ನ ಹೊಸ ಆಪರೇಟಿಂಗ್ ಸಿಸ್ಟಮ್ ಬಿಡುಗಡೆ ಮಾಡುವುದಾಗಿ ಹೇಳುತ್ತಲೇ ಇತ್ತು. ಅದೀಗ ಸಾಕಾರವಾಗಿದೆ.
ಒಎಸ್ 13.6 ಬಿಡುಗಡೆಯಾಗಿದೆ. ಇದರೊಂದಿಗೆ ಹಲವು ದಿನಗಳಿಂದ ಬಹಳ ಕುತೂಹಲ ಮೂಡಿಸಿದ್ದ ವಿಶಿಷ್ಟ ಸೌಲಭ್ಯಗಳೂ ಗ್ರಾಹಕರಿಗೆ ಸಿಕ್ಕಿವೆ. ಅದರಲ್ಲಿ ಅತಿಮುಖ್ಯವಾಗಿರುವುದು ಐಫೋನ್ ಕಾರ್ ಕೀ! ಇದನ್ನು ಸಕ್ರಿಯ ಮಾಡಿಕೊಂಡರೆ, ಬಾಗಿಲು ಮುಟ್ಟದೇ ಕಾರು ತೆರೆಯಬಹುದು, ಕೀ ಬಳಸದೇ ಸ್ಟಾರ್ಟ್ ಮಾಡಬಹುದು! ಸದ್ಯ ಈ ಸೌಲಭ್ಯಕ್ಕೆ ಪೂರಕ ವಾಗಿ ರುವುದು 2021ರಲ್ಲಿ ಬಿಡು ಗಡೆಯಾಗಲಿರುವ ಬಿಎಂಡಬ್ಲ್ಯೂ 5ನೇ ಆವೃತ್ತಿಯ ಕಾರುಗಳು ಮಾತ್ರ! ಮುಂದಿನ ದಿನಗಳಲ್ಲಿ ಈ ಸರಣಿಗೆ ಇನ್ನಷ್ಟು ಕಂಪನಿಗಳು ಸೇರಿಕೊಳ್ಳಬಹುದು.
ಏನಿದು ಕಾರ್ ಕೀ ಸೌಲಭ್ಯ?
ಐಫೋನ್‌ನ ನೂತನ 14ನೇ ಆವೃತ್ತಿಯ (13.6) ಆಪರೇಟಿಂಗ್ ಸಿಸ್ಟಮ್ ಮೂಲಕ ಆ್ಯಪಲ್ ಸಂಸ್ಥೆ ಬಿಡುಗಡೆ ಮಾಡಿರುವ ಸೌಲಭ್ಯ. ಕೇವಲ ಮೊಬೈಲ್‌ನ ಒಂದು ಸ್ಪರ್ಶದ ಮೂಲಕ ಕಾರಿನ ಬಾಗಿಲು ತೆರೆಯುತ್ತೆ - ಮುಚ್ಚಿಕೊಳ್ಳುತ್ತದೆ. ಕಾರು ಸ್ಟಾರ್ಟ್ ಕೂಡಾ ಆಗುತ್ತದೆ. ಈ ಸೌಲಭ್ಯ ಎಲ್ಲ
ಐಫೋನ್‌ಗಳಲ್ಲಿ ಲಭ್ಯವಿಲ್ಲ. ಐಫೋನ್ ಎಸ್‌ಇ 2ನೇ ಆವೃತ್ತಿ, 11 ಪ್ರೊ, 11ಪ್ರೊ ಮ್ಯಾಕ್ಸ್, ಐಫೋನ್ 1, ಫೋನ್ ಎಕ್ಸ್‌ಎಸ್, ಎಕ್ಸ್‌ಎಸ್ ಮ್ಯಾಕ್ಸ್, ಎಕ್ಸ್ ಆರ್ ಆವೃತ್ತಿಗಳಲ್ಲಿ ಮಾತ್ರ ಲಭ್ಯ. ಇದೇ ಸೌಲಭ್ಯವನ್ನು ಆ್ಯಪಲ್ ವಾಚ್‌ನಲ್ಲೂ ಪಡೆಯಬಹುದು. ಅದಕ್ಕಾಗಿ ಆ್ಯಪಲ್ 5ನೇ ಕೈಗಡಿಯಾರ ಸರಣಿ ನಿಮ್ಮ ಲ್ಲಿ ರಬೇಕು, ಅದರ ಒಎಸ್ 6.2.8 ಅಥವಾ ಅದರ ನಂತರದ್ದು ಆಗಿರಬೇಕು. ವಿಶೇಷವೆಂದರೆ ನೀವು ಈ ಡಿಜಿಟಲ್ ಕಾರ್ ಕೀಯನ್ನು ಸಂದೇಶದ ಮೂಲಕ ಐದು ಜನರಿಗೆ ಕಳುಹಿಸಬಹುದು. ಅವರು ನಿಮ್ಮ ಕಾರನ್ನು ಅದರ ಮೂಲಕವೇ ಚಲಾಯಿಸಬಹುದು! ನೀವು ದೂರದಲ್ಲೇ ಕುಳಿತು ಆ್ಯಪಲ್ ವ್ಯಾಲೆಟ್ ಮೂಲಕ ಕಾರನ್ನು ನಿಯಂತ್ರಿಸಲೂ ಅವಕಾಶವಿದೆ.
ಹೇಗೆ ಸಕ್ರಿಯಗೊಳಿಸುವುದು?
– ಈ ಸೌಲಭ್ಯವನ್ನು ಸಕ್ರಿಯಗೊಳಿಸುವ ಮುನ್ನ, ನಿಮ್ಮ ಕಾರು ಇದಕ್ಕೆ ಸ್ಪಂದಿಸುತ್ತದೆಯಾ ಎನ್ನುವುದನ್ನು ತಿಳಿದುಕೊಳ್ಳಿ.
– ಡಿಜಿಟಲ್ ಕಾರ್ ಕೀಗೆ ನಿಮ್ಮ ಕಾರು ಸ್ಪಂದಿಸುತ್ತದೆ ಎನ್ನುವುದು ಖಚಿತವಾದರೆ, ಮೊಬೈಲ್‌ನಲ್ಲಿ ನಿಮ್ಮ ಕಾರಿನ ಆ್ಯಪ್ ತೆರೆಯಿರಿ. ಸೂಚನೆ ಪಾಲಿಸಿ ಕಾರ್ ಕೀ
ರಚನೆ ಪ್ರಕ್ರಿಯೆ ಮುಗಿಸಿ. ಆಗ ಕಾರ್ ಆ್ಯಪ್, ಆ್ಯಪಲ್ ವ್ಯಾಲೆಟ್‌ಗೆ ಕೀಯನ್ನು ರವಾನಿಸುತ್ತದೆ.
– ಡಿಜಿಟಲ್ ಕೀ ಸಿಕ್ಕ ನಂತರ, ಐಫೋನ್ ಅನ್ನು ಕಾರಿನ ಎನ್‌ಎಫ್ಸಿ (ನಿಯರ್ ಫಿಲ್ಡ್ ಕಮ್ಯುನಿಕೇಶನ್, ಇದೊಂದು ಸಾಧನ) ಸಮೀಪ ಇಡಿ. ಐಫೋನ್ ಮತ್ತು
ಕಾರ್ ಸಂಪರ್ಕಗೊಳ್ಳುವವರೆಗೆ ಕಾಯಿರಿ.
-ಈ ಪ್ರಕ್ರಿಯೆ ಮುಗಿದ ನಂತರ, ಡನ್ ಎಂಬ ಗುಂಡಿಯನ್ನು ಒತ್ತಿ. ಅಲ್ಲಿಗೆ ಡಿಜಿಟಲ್ ಕೀ ಬಳಕೆಗೆ ಮುಕ್ತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.