ಪೃಥ್ವಿ ಶಾ ಅರ್ಧ ಶತಕದಾಟ: ಚೆನೈಗೆ ಗೆಲುವಿಗೆ 176 ರನ್ ಗಳ ಗುರಿ!
Team Udayavani, Sep 25, 2020, 9:32 PM IST
ದುಬಾೖ: ಮೊದಲ ಪಂದ್ಯವನ್ನು ಸೂಪರ್ ಓವರ್‌ನಲ್ಲಿ ಗೆದ್ದ ಖುಷಿಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮುಖಾಮುಖೀಯಲ್ಲಿ 3 ವಿಕೆಟಿಗೆ 175 ರನ್ ಪೇರಿಸಿದೆ. ಆರಂಭಕಾರ ಪೃಥ್ವಿ ಶಾ ಅರ್ಧ ಶತಕ ಬಾರಿಸಿ ಮಿಂಚಿದರು.
ಮೊದಲ ಪಂದ್ಯದಲ್ಲಿ ಡೆಲ್ಲಿ ಓಪನಿಂಗ್ ಸಂಪೂರ್ಣ ವಿಫಲವಾಗಿತ್ತು. ಆದರೆ ಇಲ್ಲಿ ಪೃಥ್ವಿ ಶಾ-ಶಿಖರ್ ಧವನ್ ಎಡವಲಿಲ್ಲ. ಚೆನ್ನೈ ವೇಗಿಗಳನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಿದರು. ವಿಕೆಟ್ ಉಳಿಸಿಕೊಂಡರೂ ರನ್ ಗತಿ ತುಸು ನಿಧಾನವಾಗಿಯೇ ಇತ್ತು. ಪವರ್ ಪ್ಲೇ ಅವಧಿಯಲ್ಲಿ ಬಂದದ್ದು 36 ರನ್ ಮಾತ್ರ. ಸ್ಯಾಮ್ ಕರನ್ ಮತ್ತು ಜೋಶ್ ಹ್ಯಾಝಲ್‌ವುಡ್ ಅವರ ಮೊದಲ ಸ್ಪೆಲ್ ಅತ್ಯಂತ ಪರಿಣಾಮಕಾರಿಯಾಗಿತ್ತು.
ಆದರೆ ರವೀಂದ್ರ ಜಡೇಜ ಅವರ ಸ್ಪಿನ್ ಎಸೆತಗಳು ಮತ್ತೆ ಹಳಿ ತಪ್ಪಿದವು. ಡೆಲ್ಲಿ ಆರಂಭಿಕರು ಸೇರಿ ಬಿರುಸಿನ ಆಟಕ್ಕಿಳಿದರು. ಜಡೇಜ ಅವರ 4 ಓವರ್‌ಗಳಿಂದ 44 ರನ್ ಸೋರಿ ಹೋಯಿತು.
ಇದನ್ನೂ ಓದಿ :ಡ್ರಗ್ಸ್ ಪ್ರಕರಣ : ನಾಳೆಯಾದರೂ ಸಿಸಿಬಿ ಪೋಲೀಸರ ವಿಚಾರಣೆಗೆ ಹಾಜರಾಗಲಿದ್ದಾರೆಯೇ ಅನುಶ್ರೀ?
ಲೆಗ್ ಸ್ಪಿನ್ನರ್ ಪೀಯೂಷ್ ಚಾವ್ಲಾ ಕೂಡ ಆರಂಭದಲ್ಲಿ ಪರಿಣಾಮಕಾರಿ ಆಗಿರಲಿಲ್ಲ. ಅವರ ಮೊದಲೆರಡು ಓವರ್‌ಗಳಲ್ಲಿ 24 ರನ್ ಹರಿದು ಹೋಯಿತು. ಆದರೆ 3ನೇ ಓವರಿನಲ್ಲಿ ಶಿಖರ್ ಧವನ್ ವಿಕೆಟ್ ಕೀಳುವ ಮೂಲಕ ಚೆನ್ನೈಗೆ ಮೊದಲ ಯಶಸ್ಸು ತಂದಿತ್ತರು. 27 ಎಸೆತಗಳಿಂದ 35 ರನ್ ಮಾಡಿದ್ದ ಧವನ್ (3 ಬೌಂಡರಿ, 1 ಸಿಕ್ಸರ್) ಅವರನ್ನು ಚಾವ್ಲಾ ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಮೊದಲ ವಿಕೆಟಿಗೆ 10.4 ಓವರ್‌ಗಳಿಂದ 94 ರನ್ ಒಟ್ಟುಗೂಡಿತು. ಇದು 2016ರ ಬಳಿಕ ಡೆಲ್ಲಿಯ ಆರಂಭಿಕ ವಿಕೆಟಿಗೆ ಒಟ್ಟುಗೂಡಿದ ಅತ್ಯಧಿಕ ಮೊತ್ತವಾಗಿದೆ.
ಇದನ್ನೂ ಓದಿ :ಎಚ್ಚರ…ನಿಮ್ಮ Insta ಅಕೌಂಟ್ ಹ್ಯಾಕ್ ಆಗಬಹುದು ! ಹೇಗಂತೀರಾ ? ಇದನ್ನು ಓದಿ
ಇನ್ನೊಂದೆಡೆ ಧವನ್‌ಗಿಂತ ಬಿರುಸಿನ ಆಟವಾಡುತ್ತಿದ್ದ ಪೃಥ್ವಿ ಶಾ ಆಗಲೇ ಅರ್ಧ ಶತಕದ ಗಡಿ ದಾಟಿ ಮುನ್ನುಗ್ಗಿದ್ದರು. ಶಾ ಗಳಿಕೆ 43 ಎಸೆತಗಳಿಂದ 64 ರನ್. ಸಿಡಿಸಿದ್ದು 9 ಬೌಂಡರಿ ಹಾಗೂ ಒಂದು ಸಿಕ್ಸರ್. ಚಾವ್ಲಾ ಎಸೆತವನ್ನು ಮುನ್ನುಗ್ಗಿ ಬಾರಿಸುವ ಪ್ರಯತ್ನದಲ್ಲಿ ಎಡವಿದ ಶಾ ಅವರನ್ನು ಧೋನಿ ಸ್ಟಂಪ್ಡ್ ಮಾಡಿದರು. ಹೀಗೆ 9 ರನ್ ಅಂತರದಲ್ಲಿ ಆರಂಭಿಕರಿಬ್ಬರ ಆಟ ಮುಗಿಯಿತು.
3ನೇ ವಿಕೆಟಿಗೆ ಜತೆಗೂಡಿದ ರಿಷಭ್ ಪಂತ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಜತೆಯಾಟವೊಂದನ್ನು ನಿಭಾಯಿಸಿದರು. 40 ಎಸೆತಗಳಿಂದ 58 ರನ್ ಒಟ್ಟುಗೂಡಿಸಿದರು. ಅಯ್ಯರ್ 22 ಎಸೆತಗಳಿಂದ 26 ರನ್ ಮಾಡಿದರೆ (1 ಬೌಂಡರಿ), ಪಂತ್ 25 ಎಸೆತಗಳಿಂದ 37 ರನ್ ಮಾಡಿ ಅಜೇಯರಾಗಿ ಉಳಿದರು (6 ಬೌಂಡರಿ). ಉರುಳಿದ 3 ವಿಕೆಟ್‌ಗಳಲ್ಲಿ 2 ಚಾವ್ಲಾ ಪಾಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.