ಇಂದು ಐಪಿಎಲ್‌ನ 150ನೇ ಪಂದ್ಯ ಆಡಲಿರುವ ರವೀಂದ್ರ ಜಡೇಜ
Team Udayavani, Apr 9, 2022, 6:15 AM IST
ಮುಂಬಯಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರವೀಂದ್ರ ಜಡೇಜ ಅವರು ಐಪಿಎಲ್‌ನಲ್ಲಿ ಇನ್ನೊಂದು ಮೈಲುಗಲ್ಲು ಸ್ಥಾಪಿಸಲಿದ್ದಾರೆ.
ಶನಿವಾರ ಸನ್‌ರೈಸರ್ ಹೈದರಾಬಾದ್ ತಂಡವನ್ನು ಚೆನ್ನೈ ತಂಡ ಎದುರಿಸಲಿದೆ. ಇದು ಜಡೇಜ ಪಾಲಿಗೆ ಐಪಿಎಲ್‌ನ 150ನೇ ಪಂದ್ಯವಾಗಲಿದೆ.
ಚೆನ್ನೈ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ (217) ಮತ್ತು ಸುರೇಶ್ ರೈನಾ (200) ಮಾತ್ರ 200 ಪ್ಲಸ್ ಪಂದ್ಯಗಳಲ್ಲಿ ಆಡಿದ ಆಟಗಾರರಾಗಿದ್ದಾರೆ.
2012ರಿಂದ ಚೆನ್ನೈ ಪರ ಆಡುತ್ತಿರುವ ಜಡೇಜ ಅವರು ತಂಡದ ಆಲ್‌ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಆಡಿದ 149 ಪಂದ್ಯಗಳಿಂದ 110 ವಿಕೆಟ್ ಉರುಳಿಸಿದ್ದಾರೆ. ಇದು ಚೆನ್ನೈ ಪರ ಮೂರನೇ ಗರಿಷ್ಠ ಸಾಧನೆಯಾಗಿದೆ.
ಬ್ಯಾಟಿಂಗ್‌ನಲ್ಲಿಯೂ ಮಿಂಚಿರುವ ಅವರು 1,523 ರನ್ ಪೇರಿಸಿದ್ದಾರೆ.ಕೆಲವೊಂದು ಪಂದ್ಯಗಳಲ್ಲಿ ಜಡೇಜ ಅದ್ಭುತವಾಗಿ ಆಡಿ ತಂಡ ಗೆಲ್ಲಲು ಕಾರಣರಾಗಿದ್ದಾರೆ. ಚೆನ್ನೈ ಪರ ಆಡಿದ ಎರಡನೇ ಪಂದ್ಯದಲ್ಲಿ ಅವರು ಡೆಕ್ಕನ್ ಚಾರ್ಜರ್ ವಿರುದ್ಧ ಕೇವಲ 29 ಎಸೆತಗಳಿಂದ 48 ರನ್ ಸಿಡಿಸಿದ್ದರು. ಇದರಿಂದ ಚೆನ್ನೈ 74 ರನ್ನುಗಳಿಂದ ಗೆಲ್ಲಲು ಸಾಧ್ಯವಾಗಿತ್ತು.
ಇದನ್ನೂ ಓದಿ:ಐಪಿಎಲ್: ಶುಭಮನ್ ಗಿಲ್ ಶತಕ ವಂಚಿತ; ಕೊನೆಯ ಎಸೆತದಲ್ಲಿ ಗೆದ್ದ ಗುಜರಾತ್ ಟೈಟಾನ್ಸ್
ಚೆನ್ನೈ ಪರ ಜಡೇಜ ಅವರ ಪ್ರಯಾಣ 2022ರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಬಾರಿಯ ಐಪಿಎಲ್ ಆರಂಭವಾಗುವ ಮೊದಲೇ ಧೋನಿ ಅವರು ನಾಯಕತ್ವದ ಜವಾಬ್ದಾರಿಯನ್ನು ಜಡೇಜ ಅವರಿಗೆ ಬಿಟ್ಟುಕೊಟ್ಟಿದ್ದಾರೆ. “ಚೆನ್ನೈ ಎಂಬುದು ನನ್ನ ಪಾಲಿಗೆ ಎಲ್ಲವೂ ಆಗಿದೆ. ಇದೊಂದು ಕುಟುಂಬ, ನನ್ನ ಪಾಲಿಗೆ ಮನೆ ಇದ್ದ ಹಾಗೆ.
ಕಳೆದ 10 ವರ್ಷಗಳಿಂದ ನಾನು ಈ ತಂಡದ ಅಂಗವಾಗಿದ್ದೇನೆ. ನಾನು ಬೇರೆ ತಂಡದ ಜತೆ ಆಡುತ್ತಿದ್ದೇನೆ ಎಂದು ಅನಿಸುವುದಿಲ್ಲ’ ಎಂಬುದು ಜಡೇಜ ಪ್ರತಿಕ್ರಿಯೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.