![Chikkamagaluru: ನಕ್ಸಲ್ ಆರೋಪಿತರ ಪ್ರಕರಣ ಖುಲಾಸೆ](https://www.udayavani.com/wp-content/uploads/2024/12/courts-s-6-415x282.jpg)
ಪ್ರಭುದೇಸಾಯಿ ಆಲ್‌ರೌಂಡ್ ಪ್ರದರ್ಶನ
Team Udayavani, Apr 14, 2022, 5:45 AM IST
![ಪ್ರಭುದೇಸಾಯಿ ಆಲ್‌ರೌಂಡ್ ಪ್ರದರ್ಶನ](https://www.udayavani.com/wp-content/uploads/2022/04/rcb-4-620x351.jpg)
ಮುಂಬಯಿ: ಈ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ಪರ ಪದಾರ್ಪಣೆಗೈದ ಸುಯಶ್ ಪ್ರಭುದೇಸಾಯಿ ಅವರು ಆಲ್‌ರೌಂಡ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಹರ್ಷಲ್ ಪಟೇಲ್ ಅವರ ಜಾಗದಲ್ಲಿ ತಂಡದಲ್ಲಿ ಸ್ಥಾನ ಪಡೆದ ಪ್ರಭುದೇಸಾಯಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿದರು.
ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರ ಶಕ್ತಿ ಶಾಲಿ ಹೊಡೆತಗಳಿಂದ ಗಮನ ಸೆಳೆದಿದ್ದ ಪ್ರಭುದೇಸಾಯಿ ಅವರು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೇವಲ 18 ಎಸೆತಗಳಿಂದ 34 ರನ ಗಳಿಸಿದ್ದರು. ಒಂದು ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿದ್ದರು. ಆದರೆ ಇತರ ಆಟಗಾರರ ಕಳಪೆ ಆಟದಿಂದಾಗಿ ಆರ್‌ಸಿಬಿ ಅಂತಿಮವಾಗಿ ಈ ಪಂದ್ಯದಲ್ಲಿ ಸೋತಿತ್ತು. ಪ್ರಭುದೇಸಾಯಿ ಫೀಲ್ಡಿಂಗ್‌ನಲ್ಲೂ ಉತ್ತಮ ನಿರ್ವಹಣೆ ನೀಡಿದರು.
ಬೌಂಡರಿ ಗೆರೆ ಸಮೀಪ ಹಾರಿ ಚೆಂಡನ್ನು ಪಡೆದ ರೀತಿ ಅದ್ಭುತವಾಗಿತ್ತು. ಇದರ ಜತೆ ಮೋಯಿನ್ ಖಾನ್ ಅವರನ್ನು ರನೌಟ್ ಮಾಡಿದ ರೀತಿ ನೆರೆದ ಪ್ರೇಕ್ಷಕರ ಗಮನ ಸೆಳೆದಿತ್ತು.7ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ ಚೆಂಡನ್ನು ರಾಬಿನ್ ಉತ್ತಪ್ಪ ಉತ್ತರಿಸಿದರು. ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಪ್ರಭುದೇಸಾಯಿ ಫೀಲ್ಡಿಂಗ್ ಮಾಡುತ್ತಿದ್ದರು. ಚೆಂಡನ್ನು ಹಾರಿ ಹಿಡಿದ ಪ್ರಭುದೇಸಾಯಿ ಎದುರಾಳಿಗೆ ಒಂಟಿ ರನ್ ನಿರಾಕರಿಸಿದರು. ಮಾತ್ರವಲ್ಲದೇ ತತ್‌ಕ್ಷಣ ಅವರು ಚೆಂಡನ್ನು ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ನೀಡಿದ್ದರಿಂದ ಮೋಯಿನ್ ಖಾನ್ ರನೌಟ್ ಆಗಬೇಕಾಯಿತು.
ಟಾಪ್ ನ್ಯೂಸ್
![Chikkamagaluru: ನಕ್ಸಲ್ ಆರೋಪಿತರ ಪ್ರಕರಣ ಖುಲಾಸೆ](https://www.udayavani.com/wp-content/uploads/2024/12/courts-s-6-415x282.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ](https://www.udayavani.com/wp-content/uploads/2024/12/au-150x87.jpg)
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
![Team India; key players to miss England series; young batsman takes on leadership role](https://www.udayavani.com/wp-content/uploads/2024/12/odi-e-150x87.jpg)
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
![Vijay Hazare : ವರುಣ್, ತಿಲಕ್ ಬ್ಯಾಟಿಂಗ್ ವೈಭವ; ಹೈದರಾಬಾದ್ ವಿರುದ್ದ ಸೋತ ಕರ್ನಾಟಕ](https://www.udayavani.com/wp-content/uploads/2024/12/tilk-150x87.jpg)
Vijay Hazare : ವರುಣ್, ತಿಲಕ್ ಬ್ಯಾಟಿಂಗ್ ವೈಭವ; ಹೈದರಾಬಾದ್ ವಿರುದ್ದ ಸೋತ ಕರ್ನಾಟಕ
Video: ಆಸ್ಪತ್ರೆಯಲ್ಲಿ ‘ಚಕ್ ದೇ ಇಂಡಿಯಾ’ ಹಾಡಿಗೆ ವಿನೋದ್ ಕಾಂಬ್ಳಿ ನೃತ್ಯ.. ವಿಡಿಯೋ ವೈರಲ್
![New York: ಜೀನ್ಸ್ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್ ಆಡಲು ಕಾರ್ಲ್ಸನ್ ಸಿದ್ಧ](https://www.udayavani.com/wp-content/uploads/2024/12/chess-5-150x84.jpg)
Blitz Chess: ಜೀನ್ಸ್ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್ ಆಡಲು ಕಾರ್ಲ್ಸನ್ ಸಿದ್ಧ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.