ಇನ್ನು ಕ್ವಾಲಿಫೈಯರ್, ಎಲಿಮಿನೇಟರ್ ಕಾತರ
4 ಎಲಿಮಿನೇಟರ್ ಆಡಿ ಕಪ್ ಎತ್ತಿದ ಏಕೈಕ ತಂಡ-ಹೈದರಾಬಾದ್!
Team Udayavani, May 23, 2022, 6:40 AM IST
ಮುಂಬಯಿ: ಒಂದು ಪಂದ್ಯ ಬಾಕಿ ಇರುವಾಗಲೇ 2022ರ ಐಪಿಎಲ್ ಪಂದ್ಯಾವಳಿಯ ಅಗ್ರ 4 ತಂಡಗಳ ಇತ್ಯರ್ಥವಾಗಿದೆ. ಗುಜರಾತ್ ಟೈಟಾನ್ಸ್ (20 ಅಂಕ), ರಾಜಸ್ಥಾನ್ ರಾಯಲ್ಸ್ (18 ಅಂಕ), ಲಕ್ನೋ ಸೂಪರ್‌ಜೈಂಟ್ಸ್ (18 ಅಂಕ) ಮತ್ತು ರಾಯಲ್ ಚಾಲೆಂಜರ್ ಬೆಂಗಳೂರು (16 ಅಂಕ) ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ.
ಈ ನಾಲ್ಕರಲ್ಲಿ ಗುಜರಾತ್ ಮತ್ತು ಲಕ್ನೋ ನೂತನ ತಂಡಗಳೆಂಬುದು ಉಲ್ಲೇಖನೀಯ. ಪದಾರ್ಪಣೆಯ ಋತುವಿನಲ್ಲೇ ಇವು ಪ್ಲೇ ಆಫ್ ಪ್ರವೇಶಿಸಿ ಸುದ್ದಿಯಾಗಿವೆ. ಹಾಗೆಯೇ 4 ತಂಡಗಳಲ್ಲಿ ಚಾಂಪಿಯನ್ ಆಗಿರುವ ಹೆಗ್ಗಳಿಕೆ ಹೊಂದಿರುವುದು ರಾಜಸ್ಥಾನ್ ಮಾತ್ರ. ಅದು 2008ರ ಚೊಚ್ಚಲ ಕೂಟದಲ್ಲೇ ಪ್ರಶಸ್ತಿ ಸುತ್ತು ತಲುಪಿ ಚಾಂಪಿಯನ್ ಆಗಿ ಮೂಡಿಬಂದಿತ್ತು. ನಾಯಕರಾಗಿದ್ದವರು ಶೇನ್ ವಾರ್ನ್. ಅನಂತರ ರಾಜಸ್ಥಾನ್ ಫೈನಲ್ ತಲುಪಿದ್ದೇ ಇಲ್ಲ.
ಆರ್‌ಸಿಬಿ ಮತ್ತು ಹಸುರು ಜೆರ್ಸಿ
ಇನ್ನು ಆರ್‌ಸಿಬಿ. ಗೇಲ್, ಎಬಿಡಿ, ಕೊಹ್ಲಿ ಅವರನ್ನೆಲ್ಲ ಒಳಗೊಂಡು ಐಪಿಎಲ್ ಇತಿಹಾಸದ ಬಲಿಷ್ಠ ತಂಡವಾಗಿದ್ದೂ ಕಪ್ ಎತ್ತಲಾಗದ ನತದೃಷ್ಟ ತಂಡ. 3 ಸಲ ಫೈನಲ್‌ಗೆ ಲಗ್ಗೆ ಇರಿಸಿ ಮೂರರಲ್ಲೂ ಮುಗ್ಗರಿಸಿದೆ.
ಆದರೆ ಹಸುರು ಜೆರ್ಸಿಗೂ ಆರ್‌ಸಿಬಿಗೂ ಅದೃಷ್ಟದ ನಂಟಿದೆ. ಹಸಿರು ಉಡುಗೆಯಲ್ಲಿ ಆಡಿ ಗೆದ್ದ ಮೂರೂ ಋತುಗಳಲ್ಲಿ ಅದು ಫೈನಲ್ ತಲುಪಿದೆ.
ಈ ಸಲವೂ ಗ್ರೀನ್ ಜೆರ್ಸಿಯಲ್ಲಿ ಜಯ ಸಾಧಿಸಿತ್ತಾದರೂ ತಂಡದ ನಸೀಬು ಮುಂಬೈ-ಡೆಲ್ಲಿ ಪಂದ್ಯದ ಫಲಿತಾಂಶವನ್ನು ಅವಲಂಬಿಸಿತ್ತು. ಇಲ್ಲಿ ಮುಂಬೈ ಜಯ ಸಾಧಿಸುವುದರೊಂದಿಗೆ ಬೆಂಗಳೂರು ಪಡೆಗೆ ಒಂದು ಹಂತದ ಅದೃಷ್ಟ ಕೈಹಿಡಿದಿದೆ.
ಮಂಗಳವಾರದ ಕ್ವಾಲಿಫೈಯರ್ ಮುಖಾಮುಖೀಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಗುಜರಾತ್-ರಾಜಸ್ಥಾನ್ ಸೆಣಸಲಿವೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪಲಿದೆ. ಪರಾಜಿತ ತಂಡಕ್ಕೆ ಇನ್ನೊಂದು ಅವಕಾಶ ಲಭಿಸಲಿದೆ.
ಬುಧವಾರ ಆರ್‌ಸಿಬಿ-ಲಕ್ನೋ ನಡುವೆ ಎಲಿಮಿನೇಟರ್ ಪಂದ್ಯ ಸಾಗಲಿದೆ. ಇಲ್ಲಿ ಸೋತ ತಂಡ ಕೂಟದಿಂದ ನಿರ್ಗಮಿಸಲಿದೆ. ಗೆದ್ದ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದ ವಿರುದ್ಧ ಆಡಲಿದೆ. ಇದು ದ್ವಿತೀಯ ಕ್ವಾಲಿಫೈಯರ್. ಇಲ್ಲಿ ಗೆದ್ದವರು ಫೈನಲ್‌ಗೆ ಲಗ್ಗೆ ಇಡಲಿದ್ದಾರೆ. ಇದು ಕೂಟದ ಮಾದರಿ.
ಹೈದರಾಬಾದ್ ಸಾಧನೆ
ಕ್ವಾಲಿಫೈಯರ್, ಎಲಿಮಿನೇಟರ್ ಮಾದರಿಯನ್ನು ಅಳವಡಿಸಿದ ಬಳಿಕ ಐಪಿಎಲ್ ಹೆಚ್ಚು ರೋಚಕ ಹಾಗೂ ಸ್ಪರ್ಧಾತ್ಮಕವಾಗಿ ಗೋಚರಿಸಿದೆ. ಇಲ್ಲಿ ಎಲಿಮಿನೇಟರ್ ಪಂದ್ಯವನ್ನು ಆಡುವಾಗ ಹೆಚ್ಚು ಎಚ್ಚರಿಕೆ ಇರಬೇಕಾಗುತ್ತದೆ. ಏಕೆಂದರೆ ಇದು “ಮಾಡು-ಮಡಿ’ ಪಂದ್ಯ. ಸೋತ ತಂಡಕ್ಕೆ ಬಾಗಿಲು ಸಂಪೂರ್ಣವಾಗಿ ಮುಚ್ಚಲ್ಪಡುತ್ತದೆ.
ಐಪಿಎಲ್ ಇತಿಹಾಸದಲ್ಲಿ ಎಲಿಮಿನೇಟರ್ ಪಂದ್ಯವಾಡಿಯೂ ಚಾಂಪಿಯನ್ ಆಗಿ ಮೂಡಿಬಂದ ಏಕೈಕ ತಂಡವೆಂದರೆ ಸನ್‌ರೈಸರ್ ಹೈದರಾಬಾದ್. ಅದು 2016ರಲ್ಲಿ ಈ ಸಾಧನೆಗೈದಿತ್ತು. ಅಂದಿನ ನಾಯಕ ಡೇವಿಡ್ ವಾರ್ನರ್.
ಎಲಿಮಿನೇಟರ್ ಆಡುವ ತಂಡ ಟ್ರೋಫಿ ಎತ್ತುವ ಹಾದಿಯಲ್ಲಿ ಸತತ 3 ಪಂದ್ಯಗಳನ್ನು ಜಯಿಸಬೇಕಾಗುತ್ತದೆ. ಅಂದು ಹೊಸದಿಲ್ಲಿಯಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್‌ಗೆ ಎದುರಾದ ತಂಡ ಕೆಕೆಆರ್. ವಾರ್ನರ್ ಸೇನೆ ಇದನ್ನು 22 ರನ್ನುಗಳಿಂದ ಜಯಿಸಿತು. ಬಳಿಕ ದ್ವಿತೀಯ ಕ್ವಾಲಿಫೈಯರ್ ಹಣಾಹಣಿಯಲ್ಲಿ ಗುಜರಾತ್ ಲಯನ್ಸ್‌ಗೆ 4 ವಿಕೆಟ್‌ಗಳ ಸೋಲುಣಿಸಿ ಫೈನಲ್‌ಗೆ ಲಗ್ಗೆ ಇರಿಸಿತು. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಕಾಳಗದಲ್ಲಿ ಆತಿಥೇಯ ಆರ್‌ಸಿಬಿಯನ್ನು 8 ರನ್ನುಗಳಿಂದ ರೋಚಕವಾಗಿ ಮಣಿಸಿ ಟ್ರೋಫಿ ಎತ್ತಿತು!
2021ರಲ್ಲಿ ಕೆಕೆಆರ್ ಮುಂದೆಯೂ ಇಂಥದೊಂದು ಅವಕಾಶವಿತ್ತು. ಆದರೆ ಫೈನಲ್‌ನಲ್ಲಿ ಅದು ಚೆನ್ನೈಗೆ ಶರಣಾಗಿ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.