Iran: ಇರಾನ್‌ನಿಂದ ಸೊರಯ ಉಪಗ್ರಹ ಉಡಾವಣೆ: ಅಮೆರಿಕಕ್ಕೆ ಆತಂಕ
-ಉಡಾವಣೆಯ ಉದ್ದೇಶವೇ ಅಸ್ಪಷ್ಟ: ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಆತಂಕ
Team Udayavani, Jan 20, 2024, 8:50 PM IST
ಜೆರುಸಲೇಮ್: ತನ್ನ ಇತಿಹಾಸದಲ್ಲೇ ಅತಿ ಎತ್ತರದ ಕಕ್ಷೆಗೆ ಉಪಗ್ರಹವನ್ನು ಕಳುಹಿಸಿದ್ದಾಗಿ ಇರಾನ್ ಹೇಳಿಕೊಂಡಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಗುವಿನ ಪರಿಸ್ಥಿತಿ ಇರುವಂತೆಯೇ ಈ ಹೇಳಿಕೆ ಹೊರಬಿದ್ದಿದೆ. ಆದರೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಈ ಬೆಳವಣಿಗೆ ಬಗ್ಗೆ ಆತಂಕ ಹೊಂದಿವೆ. ಅಣ್ವಸ್ತ್ರ ಹೊತ್ತೂಯ್ಯಬಲ್ಲ ಇರಾನಿನ ಖಂಡಾಂತರ ಕ್ಷಿಪಣಿ ಸಾಮರ್ಥ್ಯ ಇದರಿಂದ ಹೆಚ್ಚಾಗಲಿದೆ ಎಂಬುದು ಅವುಗಳಿಗಿರುವ ಆತಂಕ.
ಇತ್ತೀಚೆಗಷ್ಟೇ ಪಾಕ್ ಮತ್ತು ಇರಾನ್ ಪರಸ್ಪರ ದಾಳಿ ನಡೆಸಿ, ಈಗಷ್ಟೇ ಶಾಂತಿ ಮಾತುಕತೆಗೆ ಸಿದ್ಧವಾಗಿವೆ. ಇನ್ನು ಇಸ್ರೇಲ್-ಹಮಾಸ್ ನಡುವೆ ತೀವ್ರ ಘರ್ಷಣೆ ನಡೆಯುತ್ತಲೇ ಇದೆ. ಅದೇ ಹೊತ್ತಿನಲ್ಲಿ ಇರಾನ್, 750 ಕಿ.ಮೀ.ಗೂ ಅಧಿಕ ಎತ್ತರದ ಕಕ್ಷೆಯಲ್ಲಿ ಸೊರಯ ಉಪಗ್ರಹ ನಿಲ್ಲಿಸಿದ್ದೇವೆ. 3 ಹಂತದ ಖಾಯೆಮ್-100 ರಾಕೆಟ್ ಮೂಲಕ ಉಡಾವಣೆ ಮಾಡಿದ್ದೇವೆಂದು ಹೇಳಿದೆ. ಉಪಗ್ರಹದಲ್ಲಿ 50 ಕೆಜಿ ತೂಕದ ಪೇಲೋಡ್ ಇದೆ ಎಂದು ಇರಾನ್ ಹೇಳಿದೆ. ಆದರೆ ಉಪಗ್ರಹದ ಕೆಲಸವೇನೆಂದು ಗೊತ್ತಾಗಿಲ್ಲ.
ಪಾಕ್-ಇರಾನ್ ನಡುವೆ ಶಾಂತಿ ಮಾತುಕತೆ
ಯುದ್ಧಸನ್ನದ್ಧ ಸ್ಥಿತಿಗೆ ಪಾಕಿಸ್ತಾನ-ಇರಾನ್ ಸಂಬಂಧ ಮತ್ತೆ ಹಳಿಗೆ ಬಂದಿದೆ. ಪಾಕಿಸ್ತಾನ ಇಸ್ರೇಲ್‌ನೊಂದಿಗೆ ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧ ಮುಂದುವರಿಸಲು ತಾನು ಸಿದ್ಧ ಎಂದರೆ, ಇರಾನ್ ಕೂಡ ಪರೋಕ್ಷವಾಗಿ ಅದಕ್ಕೆ ಸಮ್ಮತಿಸಿದೆ.ಜ.16ರಂದು ಇರಾನ್, ಪಾಕಿಸ್ತಾನದ ಗಡಿಯಲ್ಲಿ ದಾಳಿ ಮಾಡಿ 2 ಮಕ್ಕಳ ಸಾವಿಗೆ ಕಾರಣವಾಗಿತ್ತು. ಜ.18ರಂದು ಇರಾನ್ ಗಡಿಯಲ್ಲಿ ಪಾಕ್ ಪ್ರತಿದಾಳಿ ಮಾಡಿ, ಇರಾನ್ 9 ಮಂದಿಯ ಸಾವಿಗೆ ಕಾರಣವಾಗಿತ್ತು. ಇದರಿಂದ ಎರಡೂ ದೇಶಗಳು ಪರಸ್ಪರ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.