ಮುಗಿಯಿತೇ ಇಮ್ರಾನ್‌ ರಾಜಕೀಯ ಬದುಕು?


Team Udayavani, Aug 6, 2023, 10:34 PM IST

IMRAN KHAN

ಪಾಕಿಸ್ಥಾನದಲ್ಲಿ ಆಡಳಿತ ನಡೆಸಿದ ಯಾವುದೇ ಪ್ರಧಾನಿ ಶಿಕ್ಷೆಗೆ ಗುರಿಯಾಗದೇ ಇರುವ ಉದಾಹರಣೆಗಳೇ ಇಲ್ಲವೆಂದು ಹೇಳಬೇಕಾಗುತ್ತದೆ. ಉಡುಗೊರೆಗಳನ್ನು ಮಾರಾಟ ಮಾಡಿ, ಚುನಾವಣ ಆಯೋಗಕ್ಕೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ಐದು ವರ್ಷ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಇಸ್ಲಾಮಾಬಾದ್‌ನ ಕೋರ್ಟ್‌ ಶನಿವಾರ ತೀರ್ಪು ನೀಡಿದೆ.

ಇನ್ನೇನು ಕೆಲವೇ ತಿಂಗಳಲ್ಲಿ ಅಲ್ಲಿನ ಸಂಸತ್‌ನ ಕೆಳಮನೆ, ನ್ಯಾಶನಲ್‌ ಅಸೆಂಬ್ಲಿಗೆ ಚುನಾವಣೆ ನಡೆಯಲಿದೆ ಎನ್ನುವಾಗಲೇ ಈ ನಿರ್ಧಾರ ಹೊರಬಿದ್ದಿದೆ ಎನ್ನುವುದು ಗಮನಾರ್ಹ. ತೀರ್ಪಿನ ಹಿನ್ನೆಲೆಯಲ್ಲಿ ತಾಂತ್ರಿಕವಾಗಿ ಹೇಳುವುದಿದ್ದರೆ, ಅವರು ಈಗಾಗಲೇ ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದಾರೆ ಮತ್ತು ಶೀಘ್ರದಲ್ಲಿಯೇ ನಡೆಯಲಿದೆ ಎಂದು ಹೇಳಲಾಗುವ ಸಂಸತ್‌ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸಲು ಅಸಾಧ್ಯ.

ಹಾಲಿ ಸಂಸತ್‌ನಲ್ಲಿ ಆಡಳಿತ ಪಕ್ಷವಾಗಿ ಸರಿ ಸುಮಾರು ಎರಡು ವರ್ಷಗಳ ಹಿಂದೆ ಇದ್ದದ್ದು ಇಮ್ರಾನ್‌ ಖಾನ್‌ ಅವರ ಪಾಕಿಸ್ಥಾನ ತೆಹ್ರೀಕ್‌-ಇ-ಇನ್ಸಾಫ್ (ಪಿಟಿಐ)ಪಕ್ಷ. ಬಹುಮತ ಇಲ್ಲದಿದ್ದರೂ ಕೆಲವೊಂದು ಪಕ್ಷಗಳ ಬೆಂಬಲದಿಂದ ಮೂರು ವರ್ಷ 235 ದಿನಗಳ ವರೆಗೆ (2018 ಆ.18ರಿಂದ 2022 ಎ.10) ಆಡಳಿತ ನಡೆಸಿದ್ದರು. ಅನಂತರ ಅವರಿಗೆ ಬೆಂಬಲ ನೀಡುತ್ತಿದ್ದ ಪಕ್ಷಗಳು ವಿಪಕ್ಷಗಳಾದ ಪಾಕಿಸ್ಥಾನ ಮುಸ್ಲಿಂ ಲೀಗ್‌ (ನವಾಜ್‌) ಪಿಎಂಎಲ್‌-ಎನ್‌, ಹಾಲಿ ಸಚಿವ ಬಿಲಾವಲ್‌ ಭುಟ್ಟೋ ಅವರ ಪಾಕಿಸ್ಥಾನ ಪೀಪಲ್ಸ್‌ ಪಾರ್ಟಿ ಜತೆ ಸೇರಿ ಸರಕಾರ ರಚಿಸಿ 2022 ಎ.11ರಿಂದ ಇದುವರೆಗೆ ಆಡಳಿತ ನಡೆಸಿವೆ.

ಹಾಲಿ ಸರಕಾರ ಆಡಳಿತಕ್ಕೆ ಬಂದ ದಿನದಿಂದಲೂ ಇಮ್ರಾನ್‌ ಅವರ ಪಾಕಿಸ್ಥಾನ ತೆಹ್ರೀಕ್‌-ಇ-ಇನ್ಸಾಫ್ ಮತ್ತು ಪಿಎಂಎಲ್‌ (ಎನ್‌) ನೇತೃತ್ವದ ಮೈತ್ರಿ ಸರಕಾರದ ನಡುವೆ ವೈಯಕ್ತಿಕ ಮಟ್ಟದ ಸಮರವೇ ನಡೆದಿತ್ತು. ಇಮ್ರಾನ್‌ ಖಾನ್‌ ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ ಅವರಿಗೆ ಆ ದೇಶದಲ್ಲಿ ಬೆಂಬಲ ಇದೆ ಎನ್ನುವುದು ಸ್ಪಷ್ಟ. ಹೀಗಾಗಿ ಸದ್ಯದ ಶಿಕ್ಷೆಯ ತೀರ್ಮಾನ ಅವರಿಗೆ ಅನು ಕೂಲವಾಗಿ ಬಂದೀತು ಎಂಬ ಆಶಯ ಇದೆ. ರಾಜಕೀಯವಾಗಿ ಅವರನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಈಗಿನ ಸರಕಾರದ ಆರಂಭದಿಂದಲೇ ನಡೆಯುತ್ತಾ ಬಂದಿತ್ತು.

ಹೊಸ ಪ್ರಕರಣದಲ್ಲಿ ಅವರಿಗೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಯಿತು ಎಂದಾದರೆ, ಖಾನ್‌ ಅವರ ರಾಜಕೀಯ ಜೀವನ ಮುಕ್ತಾಯವಾದಂತೆ ಎಂದು ಹೇಳಬೇಕಾಗುತ್ತದೆ. ಮೂರು ವರ್ಷ ಜೈಲು ಮತ್ತು ಚುನಾವಣೆಯಿಂದ ಸ್ಪರ್ಧೆ ನಿಷೇಧ ತೀರ್ಮಾನ ಪ್ರಶ್ನಿಸಿ ಅವರ ವಕೀಲರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಅಲ್ಲಿ ಅವರ ಪರವಾಗಿ ತೀರ್ಪು ಬಂದರೆ, ರಾಜಕೀಯವಾಗಿ ಮಾಜಿ ಕ್ರಿಕೆಟಿಗ ಮರುಹುಟ್ಟು ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಈ ಅಂಶ ಕುತೂಹಲಕ್ಕೆ ಕಾರಣವಾಗಿರುವುದಂತೂ ಸತ್ಯವೇ.

ಒಂದು ವೇಳೆ ಕಾನೂನು ಹೋರಾಟದಲ್ಲಿ ಮಾಜಿ ಪ್ರಧಾನಿ ಖಾನ್‌ ಅವರಿಗೆ ಹಿನ್ನಡೆಯಾದರೆ ಅವರ ರಾಜಕೀಯ ಜೀವನ ಮುಕ್ತಾಯವಾದಂತೆ. ಸದ್ಯ ಅವರಿಗೆ 70 ವರ್ಷ ವಯಸ್ಸು. ತೀರ್ಪಿನಲ್ಲಿ ಉಲ್ಲೇಖೀಸಲಾಗಿರುವ ವಾಕ್ಯಗಳನ್ನೇ ವಿಶ್ಲೇಷಿಸಿ ನೋಡುವುದಿದ್ದರೆ ನಿಷೇಧ ಅವಧಿ ಮುಕ್ತಾಯಗೊಂಡಾಗ ಅವರಿಗೆ 75 ವರ್ಷ ತುಂಬುತ್ತದೆ. ಆ ಸಂದರ್ಭದಲ್ಲಿ ಅವರಿಗೆ ದೇಹಾರೋಗ್ಯವಿದ್ದು, ಚುನಾವಣೆಗೆ ಸ್ಪರ್ಧೆ ಮಾಡಲು ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳು ಉಂಟಾದರೂ ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲದ ಮಾತು.

ಒಂದಂತೂ ನಿಜ. ನಿಷೇಧ ಊರ್ಜಿತವಾದರೆ ಹೋರಾಟ ಮುಂದುವರಿಸುವುದಂತೂ ನಿಶ್ಚಿತ. “ನನ್ನ ಈಗಿನ ಪಕ್ಷಕ್ಕೆ ನಿಷೇಧ ಹೇರಿದರೆ, ಹೊಸ ಪಕ್ಷ ಸ್ಥಾಪನೆ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಗೆಲ್ಲುತ್ತೇನೆ’ ಎಂದು ಜು.15ರಂದು ಸವಾಲು ಹಾಕಿದ್ದರು ಮಾಜಿ ಕ್ರಿಕೆಟಿಗ. ದೇಶದಲ್ಲಿನ ಹಿಂಸಾತ್ಮಕ ವಾತಾವರಣ ಕೊನೆಗೊಳ್ಳಲು ಪಿಟಿಐ ಪಕ್ಷವನ್ನು ನಿಷೇಧಿಸುವುದೊಂದೇ ಅತ್ಯುತ್ತಮ ಮಾರ್ಗ ಎಂದು ಸಚಿವ ರಾಣಾ ಸನಾವುಲ್ಲ ಹೇಳಿದ್ದಕ್ಕೆ ತಿರುಗೇಟಾಗಿ ಖಾನ್‌ ಈ ಮಾತುಗಳನ್ನಾಡಿದ್ದರು.

ಇನ್ನು ಅಲ್‌-ಖಾದಿರ್‌ ಟ್ರಸ್ಟ್‌ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಮೇ 9ರಂದು ಅವರನ್ನು ಬಂಧಿಸಲಾಗಿತ್ತು. ಮಾಜಿ ಪ್ರಧಾನಿ ಎಂಬುದನ್ನೂ ಲೆಕ್ಕಿಸದೆ ದರದರನೆ ಅವರನ್ನು ಎಳೆದೊಯ್ದು ಬಂಧಿಸಿದ್ದು ಬೆಂಬಲಿಗರಲ್ಲಿ ಆಕ್ರೋಶ ಸೃಷ್ಟಿಸಿತ್ತು ಮತ್ತು ಅನಂತರ ಉಂಟಾಗಿದ್ದ ಕೋಲಾಹಲ ಹಾಲಿ ಸರಕಾರವನ್ನು ಕಂಗೆಡಿಸಿತ್ತು. ಎಲ್ಲಿಯ ವರೆಗೆ ಎಂದರೆ ಇಮ್ರಾನ್‌ ಬೆಂಬಲಿಗರು ರಾವಲ್ಪಿಂಡಿಯಲ್ಲಿ ಇರುವ ಪಾಕಿಸ್ಥಾನ ಸೇನೆಯ ಪ್ರಧಾನ ಕೇಂದ್ರಕ್ಕೇ ನುಗ್ಗಿ ದಾಂಧಲೆ ನಡೆಸಿದ್ದರು. ಆ ಪ್ರಕರಣದಲ್ಲಿ ಕೆಲವು ದಿನಗಳ ಬಳಿಕ ಹೈಕೋರ್ಟ್‌ ಅವರನ್ನು ಬಿಡುಗಡೆಯನ್ನೂ ಮಾಡಿತ್ತು. ಈ ಬಾರಿ ಮಾಜಿ ಪ್ರಧಾನಿ ಜಾಣ ನಡೆ ಅನುಸರಿಸಿದ್ದಾರೆ.

ಬಂಧನ ಖಂಡಿಸಿ ಹಿಂಸೆಗೆ ಇಳಿಯದಂತೆ ಸೂಚನೆಯನ್ನೂ ನೀಡಿದ್ದಾರೆ. ಏಕೆಂದರೆ ಸಂಸತ್‌ ಚುನಾವಣೆ ಸಂದರ್ಭದಲ್ಲಿ ಅದೇ ಬೆಳವಣಿಗೆ ಪ್ರತಿಕೂಲವಾಗಿ ಹೋದರೆ ಕಷ್ಟವಾದೀತು ಎಂಬ ದೂರದೃಷ್ಟಿಯನ್ನು ಇರಿಸಿಕೊಂಡಿದ್ದಾರೆ.

2022 ಎ.11ರಿಂದ ಮೊದಲ್ಗೊಂಡು ಇಮ್ರಾನ್‌ ಖಾನ್‌ ಅವರು ತಮ್ಮ ದೇಶದ ಸೇನೆಯ ವಿರುದ್ಧ ಕಟು ಮಾತುಗಳನ್ನು ಆಗಾಗ ಆಡುತ್ತಾ ಬಂದಿದ್ದರು. “ನನ್ನ ಸರಕಾರ ಪತನಕ್ಕೆ ಸೇನೆಯ ಹಿರಿಯ ಅಧಿಕಾರಿಗಳು, ವಿಶೇಷವಾಗಿ ಸೇನಾ ಮುಖ್ಯಸ್ಥ ಜ| ಖಮರ್‌ ಜಾವೇದ್‌ ಬಾಜ್ವಾ ಅವರೇ ಕಾರಣ’ ಎಂದು ಆರೋಪಿ ಸುತ್ತಾ ಬಂದಿದ್ದರು. ಅದಕ್ಕೆ ಪೂರಕವಾಗಿ ಅಲ್‌-ಖಾದಿರ್‌ ಟ್ರಸ್ಟ್‌ ವಂಚನೆ, ಪ್ರಧಾನಿಯಾಗಿದ್ದಾಗ ವಿದೇಶ ಪ್ರವಾಸದ ವೇಳೆ ಸಿಕ್ಕಿದ್ದ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪಗಳಲ್ಲಿ ಅವರಿಗೆ ಶಿಕ್ಷೆಯಾಗಿದೆ. ಪಾಕಿಸ್ಥಾನ ತೆಹ್ರೀಕ್‌-ಇ-ಇನ್ಸಾಫ್ ಪಕ್ಷ ಮತ್ತು ಇಮ್ರಾನ್‌ ಖಾನ್‌ ಅವರ ಹೇಳಿಕೆಯೇನೆಂದರೆ ಸದರಿ ಶಿಕ್ಷೆಯಾಗಿರುವ ಪ್ರಕರಣದಲ್ಲಿನ ಆರೋಪಗಳೇ ಸುಳ್ಳು. “ಅಧಿಕಾರದಿಂದ ಇಳಿದ ಬಳಿಕ ನನ್ನ ವಿರುದ್ಧ 76 ವಿವಿಧ ಪ್ರಕರಣಗಳು ದಾಖಲಾಗಿವೆ’ ಎನ್ನುತ್ತಾರೆ ಮಾಜಿ ಪ್ರಧಾನಿ.

ಅಂದ ಹಾಗೆ ಇಷ್ಟೆಲ್ಲ ಸುದ್ದಿಯಾಗಿರುವ ಪ್ರಕರಣದ ಬಗ್ಗೆಯೂ ತಿಳಿದುಕೊಳ್ಳಲೇಬೇಕಾಗುತ್ತದೆ. ಪ್ರಧಾನಿಯಾಗಿ ವಿದೇಶ ಪ್ರವಾಸದ ವೇಳೆ ಸಿಕ್ಕಿದ ಉಡುಗೊರೆಗಳನ್ನು ಸರಕಾರದ ವಶಕ್ಕೆ ಒಪ್ಪಿಸಬೇಕು. 2018ರಿಂದ 2022ರ ವರೆಗಿನ ಅವಧಿಯಲ್ಲಿ ಏಳು ಬೆಲೆ ಬಾಳುವ ವಾಚ್‌ಗಳು ಸೇರಿದಂತೆ ಕೋಟ್ಯಂತರ ಮೌಲ್ಯದ ಉಡುಗೊರೆಗಳನ್ನು ಸರಕಾರದ ಕೋಠಿಯಿಂದ ತೆಗೆದು ದುಬಾೖ ಯಲ್ಲಿ ಮಾರಾಟ ಮಾಡಿದ್ದರು ಎನ್ನುವುದು ಆರೋಪ. ಈ ಪೈಕಿ ಒಂದು ವಾಚ್‌ನ ಬೆಲೆ 3 ಲಕ್ಷ ಡಾಲರ್‌. ಮಾಜಿ ಪ್ರಧಾನಿ “ನಾನೇ ಅವುಗಳನ್ನು ಖರೀದಿ ಮಾಡಿದ್ದೆ’ ಎಂದು ವಾದಿಸುತ್ತಾರೆ. ಏನೇ ಆಗಲಿ, ದೇಶದ ಪ್ರತಿನಿಧಿಯಾಗಿ ಮತ್ತೂಂದು ದೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಿಕ್ಕಿದ್ದ ಉಡುಗೊರೆಗಳನ್ನು ಮಾರಾಟ ಮಾಡಿ ಸಿಕ್ಕಿಬೀಳುವುದೆಂದರೆ ನಾಚಿಕೆಯ ವಿಚಾರವೇ. ಪಾಕಿಸ್ಥಾನದ ರಾಜಕೀಯದ ಇತಿಹಾಸದಲ್ಲಿ ಅಧಿಕಾರಕ್ಕೆ ಏರಿದ್ದ ಪ್ರಧಾನಮಂತ್ರಿ ಅಧಿಕಾರ ಪೂರ್ತಿಗೊಳಿಸಿದ್ದಿಲ್ಲ.

ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸ್ಥಿತಿ ಸದ್ಯಕ್ಕೆ ಅಯೋಮಯ ಎಂದಾದರೆ ಅಲ್ಲಿನ ನ್ಯಾಶನಲ್‌ ಅಸೆಂಬ್ಲಿಗೆ ನಡೆಯುವ ಚುನಾವಣೆಯೂ ವಿಳಂಬವಾಗುವ ಸಾಧ್ಯತೆ ಇದೆ ಎನ್ನುತ್ತಿವೆ ಆ ದೇಶದ ಪತ್ರಿಕೆಗಳ ವರದಿಗಳು. ಅದಕ್ಕೆ ಕಾರಣಗಳೂ ಇವೆ, ಆ ದೇಶದಲ್ಲಿನ ಕೌನ್ಸಿಲ್‌ ಆಫ್ ಕಾಮನ್‌ ಇಂಟೆರೆಸ್ಟ್‌ (ಸಿಸಿಐ) ಕೈಗೊಂಡ ಪ್ರಕಾರ ಇತ್ತೀಚಿನ ಜನಸಂಖ್ಯೆಯ ದಾಖಲೆಗಳಿಗೆ ಅನುಗುಣವಾಗಿ ಕ್ಷೇತ್ರಗಳ ಪುನರ್‌ ವಿಂಗಡಣೆಯೂ ಆಗಬೇಕಾಗಿದೆ. ಪ್ರತೀ ಪ್ರಾಂತದಲ್ಲಿ ಕೂಡ ಈ ಬಗ್ಗೆ ನಿರ್ಣಯಗಳನ್ನು ಕೈಗೊಂಡು, ಕ್ಷೇತ್ರ ಪುನರ್‌ ವಿಂಗಡಣೆ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ನಾಲ್ಕು ತಿಂಗಳ ಅವಧಿ ಬೇಕಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಆ ದೇಶದಲ್ಲಿ ಚುನಾವಣೆ ನಡೆದರೆ ಯಾರು ಗೆಲ್ಲುತ್ತಾರೆ ಎಂದು ಊಹಿಸಿಕೊಳ್ಳಲೂ ಕಷ್ಟವಾಗಿದೆ. ಏಕೆಂದರೆ ಅಲ್ಲಿನ ಸ್ಥಿತಿ ಯಾವತ್ತೂ ಡೋಲಾಯಮಾನವೇ ಆಗಿರುವುದರಿಂದ ಅಂಥ ಚಿಂತನೆಯನ್ನೂ ನಡೆಸಲು ಸಾಧ್ಯವಿಲ್ಲ. 2018ರ ಸಂಸತ್‌ ಚುನಾವಣೆ ವೇಳೆ ಕೂಡ ಪಿಟಿಐ ಅಕ್ರಮ ಎಸಗಿತ್ತು ಎಂಬ ಆರೋಪಗಳೂ ವ್ಯಕ್ತವಾಗಿದ್ದವು.

ಸದ್ಯಕ್ಕೆ ಘೋಷಣೆಯಾಗಿರುವಂತೆ ಆ.9ಕ್ಕೆ ಶೆಹಬಾಜ್‌ ಶರೀಫ್ ನೇತೃತ್ವದ ಸಂಪುಟ ಹಾಲಿ ನ್ಯಾಶನಲ್‌ ಅಸೆಂಬ್ಲಿಯನ್ನು ವಿಸರ್ಜಿ ಸುವ ನಿರ್ಧಾರವನ್ನು ಕೈಗೊಳ್ಳಲಿದೆ. ಆ ದೇಶದ ನಿಯಮ ಪ್ರಕಾರ ಅಧ್ಯಕ್ಷ ರಶೀದ್‌ ಅಳ್ವಿ ಸಂಪುಟದ ನಿಯಮ ಒಪ್ಪಲಿ, ಬಿಡಲಿ ನಿರ್ಧಾರ ತೆಗೆದುಕೊಂಡ ದಿನದಿಂದ ಎರಡು ದಿನಗಳ ಒಳಗಾಗಿ ಸ್ವಯಂಚಾಲಿತವಾಗಿ ಅದು ಜಾರಿಯಾಗಿ ಬಿಡುತ್ತದೆ. ಅಲ್ಲಿನ ಚುನಾವಣ ಆಯೋಗಕ್ಕೆ ನ. 8ರ ವರೆಗೆ ಚುನಾವಣೆ ನಡೆಸುವ ಅವಕಾಶವೂ ಇದೆ. ಅಂದರೆ 90 ದಿನಗಳ ಒಳಗಾಗಿ ಹೊಸ ಚುನಾವಣೆ ನಡೆಸಬೇಕು. ಇನ್ನೀಗ ಕ್ಷೇತ್ರಗಳ ಪುನರ್‌ ವಿಂಗಡಣೆ ಎಂದಾದರೆ, ಆ ಪ್ರಕ್ರಿಯೆ ಮುಕ್ತಾಯಗೊಳ್ಳಲು 2024ರ ಮೇ- ಜೂನ್‌ ಕೂಡ ಆಗಬಹುದು ಎಂಬ ಸಂದೇಹ ಕೂಡ ಎದ್ದಿದೆ. ಒಟ್ಟಾರೆಯಲ್ಲಿ ಭಾರತದ ನೆರೆಯ ರಾಷ್ಟ್ರದ ಆಡಳಿತ ಯಾವ ರೀತಿ ಇರಲಿದೆ ಎಂಬ ಬಗ್ಗೆ ಕಾದು ನೋಡುವುದೇ ಅತ್ಯುತ್ತಮ.

~ ಸದಾಶಿವ ಕೆ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.