ಐಎಸ್‌-ಕೆ : ಅಮೆರಿಕನ್‌ ಪಡೆಗಳಿಗೆ ತಲೆನೋವಾದ ಉಗ್ರರು


Team Udayavani, Aug 28, 2021, 6:55 AM IST

ಐಎಸ್‌-ಕೆ : ಅಮೆರಿಕನ್‌ ಪಡೆಗಳಿಗೆ ತಲೆನೋವಾದ ಉಗ್ರರು

ಇಡೀ ಅಫ್ಘಾನಿಸ್ಥಾನ ತಾಲಿಬಾನ್‌ ವಶಕ್ಕೆ ಹೋದ ಮೇಲೆ, ಅಮೆರಿಕವೂ ಸೇರಿದಂತೆ ಆ ದೇಶದಲ್ಲಿದ್ದ ಬೇರೆ ಬೇರೆ ದೇಶಗಳ ನಾಗರಿಕರು, ರಾಜತಾಂತ್ರಿಕ ಸಿಬಂದಿ ಮತ್ತು ಅಫ್ಘಾನ್‌ ನಲ್ಲಿ ಇರಲು ಇಚ್ಛಿಸದ ನಾಗರಿಕರು ದೇಶ ಬಿಟ್ಟು ಹೋಗುತ್ತಿದ್ದಾರೆ. ಇನ್ನೇನು ಇನ್ನೆರಡು ದಿನಗಳಲ್ಲಿ ಈ ಸ್ಥಳಾಂತರ ಪ್ರಕ್ರಿಯೆ ಮುಗಿಯಬೇಕಿತ್ತು. ಇದರ ನಡುವೆಯೇ ಅಫ್ಘಾನಿಸ್ಥಾನದಲ್ಲಿ ಬೇರು ಬಿಟ್ಟಿರುವ ಐಸಿಸ್‌-ಕೆ ಎಂಬ ಗುಂಪಿಗೆ ಸೇರಿದ ಉಗ್ರರು ರಕ್ತದೋಕುಳಿಯನ್ನೇ ಹರಿಸಿದ್ದಾರೆ. ಹಾಗಾದರೆ ಈ ಉಗ್ರರು ಯಾರು? ಇವರಿಂದ ತಾಲಿಬಾನ್‌ಗೂ ಅಪಾಯವಿದೆಯೇ?

ಏನಿದು ಐಎಸ್‌-ಕೆ?
ಐಎಸ್‌-ಕೆ ಅಥವಾ ಐಸಿಸ್‌ -ಕೆ ಎಂದರೆ ಇಸ್ಲಾಮಿಕ್‌ ಸ್ಟೇಟ್‌ ಖೋರೇ ಸಾನ್‌ ಎಂದರ್ಥ. ಇದು ಇಸ್ಲಾಮಿಕ್‌ ಸ್ಟೇಟ್‌ ಅಥವಾ ಐಎಸ್‌ನ ಅಂಗ ಸಂಸ್ಥೆ. ಈ ಹಿಂದೆ ಇದನ್ನು ಐಎಸ್‌ ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌ ಆಫ್ ಇರಾಕ್‌ ಮತ್ತು ಸಿರಿಯಾ) ಎಂದು ಕರೆಯಲಾಗುತ್ತಿತ್ತು. ಇದಕ್ಕೆ ಐಎಸ್‌ ಐಎಸ್‌-ಕೆ, ಐಎಸ್‌ ಕೆಪಿ ಎಂದೂ ಕರೆಯುತ್ತಾರೆ. ಅಫ್ಘಾನಿಸ್ಥಾನದ ಖೋರೇ ಸಾನ್‌ ಪ್ರಾಂತ್ಯದಲ್ಲಿ ಇದು ಹುಟ್ಟಿದ್ದು. ಇದರ ಪ್ರಮುಖ ಉದ್ದೇಶವೇ ಕೇಂದ್ರ ಮತ್ತು ದಕ್ಷಿಣ ಏಷ್ಯಾದಲ್ಲಿ ಖ್ಯಾಲಿ ಫೇಟ್‌ ಅನ್ನು ಸ್ಥಾಪಿಸುವುದು. ಆತಂಕಕಾರಿ ವಿಷಯವೆಂದರೆ, ಇದು ಹುಟ್ಟಿದ ಕೆಲವೇ ದಿನಗಳಲ್ಲಿ ಅಫ್ಘಾನ್‌ ನ ಹಲವಾರು ಗ್ರಾಮೀಣ ಜಿಲ್ಲೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಐಎಸ್‌-ಕೆ ಹುಟ್ಟಿದ್ದು ಯಾವಾಗ?
2014-15ರಲ್ಲಿ ಐಎಸ್‌ಐಎಸ್‌ ಇರಾಕ್‌ ಮತ್ತು ಸಿರಿಯಾ ಬಿಟ್ಟು ಬೇರೆಡೆಗೂ ತನ್ನ ಕಾರ್ಯ ವ್ಯಾಪ್ತಿ ವಿಸ್ತರಿಸಿತು. ಇಂಥ ಸಂದರ್ಭದಲ್ಲೇ ಅಫ್ಘಾನಿಸ್ಥಾನದ ಖೋರೇ ಸಾನ್‌ ಪ್ರಾಂತ್ಯದಲ್ಲಿ ಐಎಸ್‌-ಕೆ ಹುಟ್ಟಿಕೊಂಡಿತು. 2015-16ರ ವೇಳೆಗೆ ಐಎಸ್‌-ಕೆ ಸಂಘಟನೆ ಅಫ್ಘಾನಿಸ್ಥಾನದಲ್ಲಿರುವ ಅಮೆರಿಕ ಪಡೆಗಳ ಮೇಲೆ ದಾಳಿ ನಡೆಸಲು ಶುರು ಮಾಡಿಕೊಂಡಿತು.

ಐಎಸ್‌-ಕೆ ಮುಖ್ಯಸ್ಥ ಯಾರು?
ಅಫ್ಘಾನಿಸ್ಥಾನದ ಖೋರೇಸಾನ್‌ ಪ್ರಾಂತ್ಯದಲ್ಲಿ ಈ ಸಂಘಟನೆ ಹುಟ್ಟಿಕೊಂಡರೂ ಇದರ ಸ್ಥಾಪಕ ಮಾತ್ರ ಪಾಕಿಸ್ಥಾನಿ. ಅಮೀರ್‌ ಆಗಿದ್ದ ಹಫೀಜ್‌ ಸಯೀದ್‌ ಖಾನ್‌ ಎಂಬಾತ ಐಎಸ್‌-ಕೆಯ ಮುಖ್ಯಸ್ಥ. ಈ ಸಂಘಟನೆ ಪಾಕಿಸ್ಥಾನದ ಉಗ್ರ ಸಂಘಟನೆಗಳ ಜತೆಗೆ ಗಾಢವಾದ ಸಂಬಂಧ ಇರಿಸಿಕೊಂಡಿತ್ತು. ಅಷ್ಟೇ ಅಲ್ಲ, ಇದಕ್ಕೆ ನೀರೇರೆದು ಬೆಳೆಸಿದ್ದು ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ. ಅಷ್ಟೇ ಅಲ್ಲದೆ ಇದಕ್ಕೆ ತಾಲಿ ಬಾನ್‌ ಜತೆಗೂ ನಂಟಿತ್ತು. ಹಫೀಜ್‌ ಸಯೀದ್‌ ಖಾನ್‌ ಮುಖ್ಯಸ್ಥನಾಗಿದ್ದರೆ, ಉಪ ಮುಖ್ಯಸ್ಥ ತಾಲಿಬಾನ್‌ ನಿಂದ ಬಂದವನೇ ಆಗಿದ್ದ. ಈತನ ಹೆಸರು ಅಬ್ದುಲ್‌ ರೌಫ್ ಅಲಿಜಾ. ಕೆಲವು ವರ ದಿ ಗಳ ಪ್ರಕಾರ, ಈತ ಗುಂಟೇ ಮಾಲಾದಲ್ಲಿರುವ ಅಮೆರಿಕದ ಕ್ಯಾಂಪ್‌ ನಲ್ಲಿ ಬಂಧಿಯಾಗಿದ್ದ. ಐಎಸ್‌-ಕೆಯ ಉಪಟಳ ಹೆಚ್ಚಾದಂತೆ ಅಮೆರಿಕ ವೈಮಾನಿಕ ದಾಳಿ ನಡೆಸಿ ಹಫೀಜ್‌ ಸಯೀದ್‌ ಖಾನ್‌ ಮತ್ತು ಅಬ್ದುಲ್‌ ರೌಫ್ ಅಲಿಜಾರನ್ನು ಕೊಂದುಹಾಕಿತ್ತು. ಸದ್ಯ ಈ ಗುಂಪಿನ ಮುಖ್ಯಸ್ಥ ಶಾಹಬ್‌ ಅಲ್‌-ಮುಹಾ ಜಿರ್‌.

ಯಾರೀತ ಶಾಹಬ್‌ ಅಲ್‌-ಮುಜಾ ಹೀರ್‌?
ಈಗ ಅಫ್ಘಾನಿಸ್ಥಾನ-ಪಾಕಿಸ್ಥಾನದ ನಾಗರಿಕ. ಸಾಮಾನ್ಯವಾಗಿ ಮುಜಾಹೀರ್‌ ಎಂದು ಕರೆಯುವುದು 1947ರಲ್ಲಿ ಭಾರತ ವಿಭಜನೆಯಾದಾಗ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಪಾಕಿಸ್ಥಾನಕ್ಕೆ ವಲಸೆ ಹೋದವರನ್ನು ಮಾತ್ರ. ಆದರೆ ಈತನಿಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ, ಈತನ ಪೂರ್ವಜರು ಯಾರೂ ಭಾರತಕ್ಕೆ ಸೇರಿದವರಲ್ಲ ಎಂದು ಹೇಳಲಾಗುತ್ತಿದೆ. ಆದರೆ ಶಾಹಬ್‌ ಅಲ್‌-ಮುಜಾಹೀರ್‌ ಸಂಪ್ರದಾಯಸ್ಥ ಅರಬ್‌. ಐಎಸ್‌-ಖೋರೇಸಾನ್‌ನ ಮುಖ್ಯಸ್ಥ ಸ್ಥಾನಕ್ಕೇರಿದ ದಕ್ಷಿಣ ಏಷ್ಯಾದ ಉಗ್ರ. ಐಎಸ್‌-ಕೆಯ ಮುಖ್ಯಸ್ಥನಾಗುವ ಮುನ್ನ ಈತ ಅಲ್‌ ಕಾಯಿದಾ ಉಗ್ರ ಸಂಘಟನೆ ಮತ್ತು ಹಕ್ಕಾನಿ ನೆಟ್‌ ವರ್ಕ್‌ನ ಮಧ್ಯಮ ಹಂತದ ಕಮಾಂಡರ್‌ ಆಗಿದ್ದ. ಇದು ತಾಲಿಬಾನ್‌ ಸ್ಥಾಪನೆಗೆ ಕಾರಣವಾಗಿದ್ದು ಅಲ್ಲದೇ, ಐಎಸ್‌ಐ ಮತ್ತು ತಾಲಿಬಾನ್‌ ನಡುವಿನ ಸಂಪರ್ಕ ಸೇತುವೆ ಎಂದೇ ಹೇಳಲಾಗುತ್ತಿದೆ. ಇನ್ನೊಂದು ವಾದದ ಪ್ರಕಾರ, ಐಎಸ್‌-ಕೆ ಮುಖ್ಯಸ್ಥನ ಹೆಸರು ಶಾಹಬ್‌ ಅಲ್‌-ಮುಜಾಹೀರ್‌ ಅಲ್ಲ. ಸಿರಿಯಾದ ಅಬುಮೊಹಮ್ಮದ್‌ ಸಯೀದ್‌ ಖುರಾಸಾನಿ ಎಂಬಾತ ಐಎಸ್‌-ಕೆಯ ಮುಖ್ಯಸ್ಥ. ಆದರೆ ಇವರಿಬ್ಬರೂ ಒಬ್ಬರೇ ಎಂದೂ ಮೂಲಗಳು ಹೇಳುತ್ತಿವೆ.

ಎಷ್ಟು ಮಂದಿ ಇದ್ದಾರೆ?
ಮೂಲಗಳ ಪ್ರಕಾರ, 1,500ರಿಂದ 2000 ಸಾವಿರ ಉಗ್ರರು ಈ ಸಂಘಟನೆಯಲ್ಲಿ ಇದ್ದಾರೆ. ಆದರೆ ಇವು ಸಣ್ಣ ಸಣ್ಣ ಗುಂಪುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗೆರಿಲ್ಲಾ ಹೋರಾಟದಲ್ಲಿ ಪಳಗಿದ್ದಾರೆ.

ಐಎಸ್‌- ಕೆ ಮತ್ತು ತಾಲಿಬಾನ್‌ ಸಂಬಂಧ ಎಂಥದ್ದು?
ಸದ್ಯಕ್ಕೆ ಈ ಎರಡೂ ಸಂಘಟನೆಗಳ ನಡುವೆ ಸಂಬಂಧ ಅಷ್ಟಕ್ಕಷ್ಟೇ. ಈ ಎರಡೂ ಸಂಘಟನೆಗಳು ಅಫ್ಘಾನಿಸ್ಥಾನದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಹೋರಾಟ ನಡೆಸುತ್ತಿವೆ. ಹೀಗಾಗಿಯೇ ಗುರುವಾರ ತಾಲಿಬಾನ್‌, ಕಾಬೂಲ್‌ ವಿಮಾನ ನಿಲ್ದಾಣ ಸೇರಿ ಕೆಲವೆಡೆ ದಾಳಿಗಳಾಗಬಹುದು ಎಂದು ಮೊದಲೇ ಅಮೆರಿಕ ಪಡೆಗಳಿಗೆ ಮುನ್ನೆಚ್ಚರಿಕೆ ಕೊಟ್ಟಿತ್ತು. ಇದೇ ಸಂಘಟನೆ ಮಾಡಬಹುದು ಎಂದೂ ಹೇಳಿತ್ತು. ಅಫ್ಘಾನಿಸ್ಥಾನದಲ್ಲಿ ತಮ್ಮದೇ ಆದ ಶರಿಯಾವನ್ನು ಹೇರಬೇಕು ಎಂಬುದು ಐಎಸ್‌-ಕೆಯ ಸಂಚು. ಆದರೆ ತಾಲಿಬಾನ್‌ ಕೂಡ ತಾವು ಸಿದ್ಧಪಡಿಸಿಕೊಂಡಿರುವ ಶರಿಯಾ ನಿಯಮ ಹೇರಬೇಕು ಅಂದುಕೊಂಡಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಕೆಲವು ವರದಿಗಳ ಪ್ರಕಾರ, ತಾಲಿಬಾನ್‌, ಕಾಬೂಲ್‌ ಅನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆ, ದಕ್ಷಿಣ ಏಷ್ಯಾದ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯ ಹಿಂದಿನ ಅಧ್ಯಕ್ಷ ಅಬು ಒಮರ್‌ ಖೋರೇಸಾನಿಯನ್ನು ಹತ್ಯೆ ಮಾಡಿರುವುದಾಗಿ ಹೇಳಿದೆ.

ಐಎಸ್‌-ಕೆ ಎಷ್ಟು ಶಕ್ತಿ ಶಾಲಿ?
ವಾಷಿಂಗ್ಟನ್‌ ಮೂಲದ ಥಿಂಕ್‌ ಟ್ಯಾಂಕ್‌ ಪ್ರಕಾರ, 2017-18ರ ಅವಧಿಯಲ್ಲಿ ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನದಲ್ಲಿ 100ಕ್ಕೂ ಹೆಚ್ಚು ದಾಳಿಗಳು ಮತ್ತು ಅಮೆರಿಕನ್‌-ಅಫ್ಘಾನ್‌-ಪಾಕಿಸ್ಥಾನಿ ಪಡೆಗಳ ಮೇಲೆ 250 ದಾಳಿ ನಡೆಸಿದೆ. ಎಲ್ಲೇ ಭಯೋತ್ಪಾದಕ ದಾಳಿ ನಡೆದರೂ ಅದರ ಹೊಣೆಯನ್ನು ಇದೇ ಸಂಘಟನೆ ಹೊತ್ತುಕೊಳ್ಳುತ್ತದೆ. ಹೀಗಾಗಿ ಕೆಲವೊಮ್ಮೆ ಇದು ಸುಳ್ಳು ಹೇಳುತ್ತದೆ ಎಂಬುದು ರಕ್ಷಣ ತಜ್ಞರ ಅಭಿಮತ. ಕಾಬೂಲ್‌ ವಿಶ್ವವಿದ್ಯಾನಿಲಯದ ಒಳಗೆ, ರಾಷ್ಟ್ರಾಧ್ಯಕ್ಷರ ಅರಮನೆ ಮೇಲೆ, ಕಾಬೂಲ್‌ ನ ಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ 2020ರಲ್ಲಿ ದಾಳಿ ಮಾಡಿದ್ದು ಇದೇ ಸಂಘಟನೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಜನವರಿಯಲ್ಲಿ ಆಗಿನ ಅಫ್ಘಾನ್‌ ಸರಕಾರ, ಐಎಸ್‌-ಕೆಯ ಹಲವಾರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಹೇಳಿತ್ತು. ಗ್ಲೋಬಲ್‌ ಟೆರರಿಸಮ್‌ ಇಂಡೆಕ್ಸ್‌ ಹೇಳುವಂತೆ ಜಗತ್ತಿನ ನಾಲ್ಕು ಅಪಾಯಕಾರಿ ಉಗ್ರ ಸಂಘಟನೆಗಳಲ್ಲಿ ಇದೂ ಒಂದು.

ಐಎಸ್‌-ಕೆ ದಾಳಿ, ಅಮೆರಿಕ ಪಡೆಗಳ ಮುಂದಿನ ನಡೆಯೇನು?
ಸದ್ಯ ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ಐಎಸ್‌-ಕೆ ಉಗ್ರರು ದಾಳಿ ನಡೆಸಿದ್ದು 108 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 13 ಮಂದಿ ಅಮೆರಿಕದ ಯೋಧರೂ ಇದ್ದಾರೆ. ಇದು ಅಮೆರಿಕಕ್ಕೆ ಸಿಟ್ಟು ತರಿಸಿದೆ. ಅಷ್ಟೇ ಅಲ್ಲ, ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ಹೀಗಾಗಿ, ಆ.31ಕ್ಕೆ ಅಫ್ಘಾನ್‌ ಬಿಡುವ ತಯಾರಿಯಲ್ಲಿದ್ದ ಅಮೆರಿಕ, ಮತ್ತೆ ಇಲ್ಲೇ ಉಳಿಯಲಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಅಷ್ಟೇ ಅಲ್ಲ, ಈಗಾಗಲೇ, ಅಮೆರಿಕದ ಕಮಾಂಡರ್‌ ಗಳಿಗೆ ಬೈಡೆನ್‌ ಸೂಚನೆ ನೀಡಿದ್ದಾರೆ. ಐಎಸ್‌ಐಎಸ್‌ನ ಕೇಂದ್ರಗಳು ಎಲ್ಲೆಲ್ಲಿ ಇವೆಯೋ, ಅವುಗಳನ್ನು ಹುಡುಕಿ ನಾಶಪಡಿಸುವಂತೆ ಸೂಚಿಸಿದ್ದಾರೆ.

ಜಗತ್ತಿಗೆ ಆತಂಕವಿದೆಯೇ?
ಸದ್ಯ ಇದು ದುರ್ಬಲವಾಗಿರುವ ಭಯೋತ್ಪಾದನ ಸಂಘಟನೆ. ಇದರ ಬಹಳಷ್ಟು ಮಂದಿಯನ್ನು ಅಮೆರಿಕ ಸೇನೆ ಹೊಡೆದುಹಾಕಿದೆ. ಆದರೂ ಮತ್ತೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಹೈಪ್ರೊ ಫೈಲ್‌ ಟಾರ್ಗೆಟ್‌ಗಳಾದ ಅಮೆರಿಕ ಮತ್ತು ಅದರ ಮಿತ್ರ ದೇಶಗಳ ನೆಲೆಗಳ ಮೇಲೆ ದಾಳಿ ನಡೆಸುವುದು. ಹಾಗೆಯೇ ಅಫ್ಘಾನಿಸ್ಥಾನದಲ್ಲೂ ಇದರ ಕಾಟ ಹೆಚ್ಚಾಗಿಯೇ ಇದೆ. ಇಲ್ಲಿರುವ ಅಲ್ಪಸಂಖ್ಯಾಕರನ್ನು ಗುರುತಿಸಿ, ಅವರ ಮೇಲೆ ದಾಳಿ ಮಾಡುವ ಕೆಲಸವನ್ನೂ ಇದು ಮಾಡುತ್ತಿದೆ. ಈಗಲೇ ಮುಂದೆ ಎಷ್ಟು ಆತಂಕ ತಂದಿಡಬಹುದು ಎಂದು ಹೇಳುವುದು ಕಷ್ಟವಾದರೂ ಕಾಬೂಲ್‌ ನಲ್ಲಿನ ವಿಮಾನ ನಿಲ್ದಾಣದ ಮೇಲಿನ ದಾಳಿ ಗಮನಿಸಿದರೆ, ಮುಂದೆ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.