Israel-Hamas: ಕದನ ವಿರಾಮ ಒಪ್ಪಂದ: ಇಂದಿನಿಂದ ಒತ್ತೆಯಾಳುಗಳ ಬಿಡುಗಡೆ
ಒತ್ತೆಯಾಳುಗಳ ಬಿಡುಗಡೆಗೆ ದಿಢೀರ್ ಅಡಚಣೆ
Team Udayavani, Nov 24, 2023, 6:45 AM IST
ಜೆರುಸಲೇಮ್: ಹಮಾಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷಕ್ಕೆ 4 ದಿನಗಳ ಕದನವಿರಾಮ ಘೋಷಿಸಿ, ಒತ್ತೆಯಾಳುಗಳನ್ನು ಬಿಡುಗಡೆಗೊಳಿ ಸುವ ಒಪ್ಪಂದಕ್ಕೆ ಕೊನೆಯ ಹಂತದಲ್ಲಿ ಅಡಚಣೆಗಳು ಎದುರಾಗಿವೆ. ಇದಕ್ಕೆ ನಿರ್ದಿಷ್ಟ ಕಾರಣಗಳೇನೆಂದು ಗೊತ್ತಾಗಿಲ್ಲ, ಹಾಗಾಗಿ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿದೆ.
ಇಸ್ರೇಲ್ ಮಾಧ್ಯಮಗಳ ವರದಿಗಳ ಪ್ರಕಾರ, ರಾಜತಾಂತ್ರಿಕ ಮಾತುಕತೆಯ ಫಲವಾಗಿ ಹಮಾಸ್ ಉಗ್ರರು ಒತ್ತೆಯಾಳಾಗಿಸಿಕೊಂಡಿರುವ ಇಸ್ರೇಲಿ ಗರನ್ನು ಬಿಡುಗಡೆಗೊಳಿಸುವುದು ಹಾಗೂ ಸಂಘ ರ್ಷದ ವೇಳೆ ಇಸ್ರೇಲ್ ಪಡೆಗಳು ಸೆರೆ ಹಿಡಿದಿರುವ ಪ್ಯಾಲೆಸ್ತೀನಿಯರನ್ನು ಬಿಡುಗಡೆ ಗೊಳಿಸುವುದಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಕೆಲವು ಅಂತಿಮ ವಿವರಗಳನ್ನು ಸಿದ್ಧ ಪಡಿಸು ವುದು ಇನ್ನೂ ಬಾಕಿ ಉಳಿದಿರುವ ಕಾರಣ ಅಧಿಕಾರಿಗಳು ಶುಕ್ರ ವಾರಕ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
ಇಸ್ರೇಲ್ -ಹಮಾಸ್ ನಡುವಿನ ಒಪ್ಪಂದದಲ್ಲಿ ಗಲ್ಫ್ ರಾಷ್ಟ್ರಗಳು ಹಾಗೂ ಅಮೆರಿಕ ಮತ್ತು ಈಜಿಪ್ಟ್ ಪ್ರಮುಖ ಪಾತ್ರ ವಹಿಸಿದ್ದು, ಮೊದಲಿಗೆ ಮಕ್ಕಳು ಮತ್ತು ಮಹಿಳೆಯರನ್ನು ಬಿಡುಗಡೆ ಗೊಳಿಸಲು ನಿರ್ದೇಶಿಸಲಾಗಿದೆ. ಒತ್ತೆಯಾಳುಗಳ ಕುಟುಂಬಸ್ಥರು ತಮ್ಮವರನ್ನು ರಕ್ಷಿಸುವಂತೆ ನಡೆಸಿದ ಪ್ರತಿಭಟನೆಗಳು ಕೂಡ ಈ ಕ್ರಮ ಕೈಗೊಳ್ಳಲು ಕಾರಣ ಎನ್ನಲಾಗಿದೆ.
ಇತ್ತ ಸಂಘರ್ಷದಿಂದ ಮೃತಪಡುತ್ತಿರುವವರ ಸಂಖ್ಯೆ ಗಾಜಾದಲ್ಲಿ ಏರಿಕೆಯಾಗುತ್ತಲೇ ಇದೆ. ಈವರೆಗೆ 13,000 ಮಂದಿ ಮೃತಪಟ್ಟಿದ್ದಾರೆಂದು ಹಮಾಸ್ ಆರೋಗ್ಯ ಸಚಿವಾಲಯ ಹೇಳಿದ್ದು, ನಾಗರಿಕರ ಹತ್ಯೆಗೆ ಇಸ್ರೇಲ್ ನೇರಹೊಣೆ ಎಂದು ಆರೋಪಿಸಿದೆ. ಇದೇ ವೇಳೆ ಅಲ್‌ಶಿಫಾ ಆಸ್ಪತ್ರೆ ಯಲ್ಲಿ ಹಮಾಸ್ ಉಗ್ರರಿಗೆ ನೆರವು ನೀಡಿದ್ದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸಲಿಯಾನನ್ನು ಇಸ್ರೇಲ್ ಪಡೆಗಳು ಬಂಧಿಸಿವೆ.
ಹೆಜ್ಬುಲ್ಲಾ ನಾಯಕನ ಪುತ್ರನ ಹತ್ಯೆ
ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಹೆಜ್ಬುಲ್ಲಾದ ಐವರನ್ನು ಇಸ್ರೇಲ್ ಪಡೆಗಳು ಹೊಡೆದುರುಳಿಸಿವೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ, ಹೆಜ್ಬುಲ್ಲಾ ನಾಯಕ, ಲೆಬನಾನಿನ ಹಿರಿಯ ಸಂಸತ್ ಸದಸ್ಯನ ಮಗನೂ ಮೃತಪಟ್ಟಿದ್ದಾನೆಂದು ವರದಿಯಾಗಿದೆ.
ಹಮಾಸ್ ಬೆಂಬಲಿಗರ ನಿವಾಸಗಳ ಮೇಲೆ ಶೋಧ
ಹಮಾಸ್ ಅನ್ನು ಜರ್ಮನಿ ಉಗ್ರಸಂಘಟನೆ ಎಂದು ಘೋಷಿಸಿದ್ದು, ರಾಷ್ಟ್ರದಲ್ಲಿ ಹಮಾಸ್‌ಗೆ ಬೆಂಬಲ ಸೂಚಿಸುವುದನ್ನು ನಿರ್ಬಂಧಿಸಿದೆ. ಏತನ್ಮಧ್ಯೆ ಗುಪ್ತಚರ ಮೂಲಗಳು ಜರ್ಮನಿಯಲ್ಲಿ 450ಕ್ಕೂ ಅಧಿಕ ಹಮಾಸ್ ಬೆಂಬಲಿಗರಿರುವ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಜರ್ಮನಿಯ 300ಕ್ಕೂ ಅಧಿಕ ಪೊಲೀಸರು ಹಮಾಸ್ ಬೆಂಬಲಿಗರ ನಿವಾಸಗಳು, ಆಸ್ತಿಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ಆರಂಭಿಸಿವೆ. ಬರ್ಲಿನ್‌ನಲ್ಲಿಯೇ 11 ಸ್ಥಳಗಳಲ್ಲಿ 15 ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುವವರನ್ನು ಮಟ್ಟಹಾಕಲು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುದ್ಧ ನಿಲ್ಲದು, ವಿರಾಮ ಅಷ್ಟೇ!
ಕದನವಿರಾಮ ಘೋಷಿಸಿ, ಒತ್ತೆಯಾಳುಗಳ ಬಿಡುಗಡೆಯಾದ ಬಳಿಕ ಯುದ್ಧ ನಿಲ್ಲುತ್ತದೆಂದು ಎಲ್ಲರೂ ಭಾವಿಸಿರುವ ನಡುವೆಯೇ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಯುದ್ಧ ನಿಲ್ಲುವುದಿಲ್ಲ ಇದು ವಿರಾಮವಷ್ಟೇ ಎಂದಿದ್ದಾರೆ. ಅಲ್ಲದೇ, ಹಮಾಸ್‌ನ ನಾಯಕರು ಎಲ್ಲಿಯೇ ಇರಲಿ ಅವರನ್ನು ಪತ್ತೆಹಚ್ಚಿ ಗುರಿಯಾಗಿಸುವಂತೆ ಇಸ್ರೇಲಿನ ಬಲಿಷ್ಟ ಗುಪ್ತಚರ ಸಂಸ್ಥೆ ಮೊಸಾದ್‌ಗೂ ಆದೇಶಿಸಿದ್ದಾರೆ. ಹಮಾಸ್‌ನನ್ನು ಸಂಪೂರ್ಣ ಕಿತ್ತೂಗೆದ ಬಳಿಕವೇ ಇಸ್ರೇಲ್‌ನ ಕಾರ್ಯಾಚರಣೆ ನಿಲ್ಲುತ್ತದೆ ಎಂದು ಪತ್ರಿಕಾಗೋಷ್ಟಿಯಲ್ಲೂ ನೆತನ್ಯಾಹು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.