Hamas: ಭೂದಾಳಿಗೆ ಇಸ್ರೇಲ್ ಮುನ್ನುಡಿ: ಹಮಾಸ್ ವಿರುದ್ಧ ಕ್ಷಿಪ್ರ ಕಾರ್ಯಾಚರಣೆ
ಇದು ಅಭ್ಯಾಸವಷ್ಟೇ ಎಂದ ನೆತನ್ಯಾಹು
Team Udayavani, Oct 27, 2023, 1:16 AM IST
ರಾಫಾ/ಟೆಲ್ ಅವಿವ್: ಹಮಾಸ್ ಉಗ್ರರ ವಿರುದ್ಧ ಯಾವುದೇ ಕ್ಷಣದಲ್ಲಿ ಭೂದಾಳಿಯನ್ನು ಇಸ್ರೇಲ್ ನಡೆಸಲಿದೆ ಎಂಬ ಸುದ್ದಿಗಳು ಇರುವಂತೆಯೇ, ಬುಧ ವಾರ ಅಲ್ಪಾವಧಿಗೆ ಗಾಜಾದಲ್ಲಿ ಭೂದಾಳಿ ನಡೆಸ ಲಾಗಿದೆ. ಪರಿಣಾಮವಾಗಿ ಉಗ್ರರಿಗೆ ಭಾರೀ ಪ್ರಮಾಣದ ಹಾನಿ ಉಂಟು ಮಾಡಲಾಗಿದೆ.
ಆ ಪ್ರದೇಶದಲ್ಲಿರುವ ಸಶಸ್ತ್ರ ಮೂಲ ಸೌಕರ್ಯಗಳು, ಟ್ಯಾಂಕ್ ವಿರೋಧಿ ಕ್ಷಿಪಣಿ ಗಳನ್ನು ಉಡಾಯಿಸುವ ಘಟಕಗಳನ್ನು ಧ್ವಂಸ ಗೊಳಿಸಲಾಗಿದೆ. ಅದಕ್ಕಾಗಿ ಅತ್ಯಾಧುನಿಕವಾಗಿರುವ ಯುದ್ಧ ಟ್ಯಾಂಕ್‌ಗಳನ್ನು ಬಳಸಲಾಗಿದೆ. ಯಾವುದೇ ಕ್ಷಣದಲ್ಲಿ ನಡೆಸಲಾಗುವ ಭೂ ದಾಳಿಗೆ ಇದೊಂದು ಪ್ರಾಯೋಗಿಕ ಅಭ್ಯಾಸ ಎಂದು ಬೆಂಜಮಿನ್ ನೆತನ್ಯಾಹು ಸರಕಾರ ಹೇಳಿಕೊಂಡಿದೆ.
ಕೆಲವು ಗಂಟೆಗಳ ಕಾಲ ನಡೆದ ಕಾರ್ಯಾ ಚರಣೆಯಲ್ಲಿ ಹಲವಾರು ಮಂದಿ ಹಮಾಸ್ ಉಗ್ರರನ್ನು ಕೊಲ್ಲಲಾಗಿದ್ದು, ತನ್ನ ಯಾವೊಬ್ಬ ಯೋಧನೂ ಗಾಯಗೊಂಡಿಲ್ಲ ಎಂದು ಇಸ್ರೇಲ್ ಹೇಳಿಕೊಂಡಿದೆ. ಒಂದರ್ಥದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ಸೇನಾ ಪಡೆ ಸರ್ಜಿಕಲ್ ದಾಳಿ ನಡೆಸಿದೆ ಎಂದು ವಿಶ್ಲೇಷಿಸಲಾಗಿದೆ.
ಈ ದಾಳಿಯ ಬಳಿಕ ಕೂಡಲೇ ಇಸ್ರೇಲ್ ಪಡೆಗಳು ತಮ್ಮ ಸ್ಥಾನಕ್ಕೆ ವಾಪಸಾಗಿವೆ. ಗಾಜಾ ಪಟ್ಟಿಯಲ್ಲಿ ಸತತ ದಾಳಿಯಿಂದ ವಿದ್ಯುತ್, ನೀರು ಸಹಿತ ಅಗತ್ಯ ವಸ್ತುಗಳ ಕೊರತೆ ಉಂಟಾಗಲಿದೆ ಎಂಬ ವಿಶ್ವಸಂಸ್ಥೆ ನೀಡಿದ ಎಚ್ಚ ರಿಕೆ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಗಾಜಾಪಟ್ಟಿಯ ಖಾನ್ ಯೂನಿಸ್‌ನಲ್ಲಿ ಇಸ್ರೇಲ್ ಸೇನಾಪಡೆಯ ಮುಂದು ವರಿದ ವೈಮಾನಿಕ ದಾಳಿಯಲ್ಲಿ 15 ಮಂದಿ ಅಸುನೀಗಿದ್ದಾರೆ. ಜತೆಗೆ ಒಂದೇ ಕುಟುಂಬಕ್ಕೆ ಸೇರಿದ ಎಂಟು ಮನೆಗಳನ್ನು ಧ್ವಂಸಗೊಳಿಸಲಾಗಿದೆ.
ಇರಾನ್ ತರಬೇತಿ?
ಘಾತಕ ದಾಳಿ ನಡೆಸುವ ನಿಟ್ಟಿನಲ್ಲಿ ಹಮಾಸ್ ಹಾಗೂ ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಎಂಬ ಸಂಘಟನೆಗೆ ಇರಾನ್‌ನಿಂದಲೇ ತರಬೇತಿ ನೀಡಲಾಗಿತ್ತು ಎಂದು “ದ ವಾಲ್‌ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ ಮಾಡಿದೆ. ಎರಡೂ ಸಂಘಟನೆಗಳ ಆಯ್ದ 500 ಮಂದಿಗೆ ಇರಾನ್‌ನಲ್ಲಿ ವಿಶೇಷ ತರಬೇತಿ ನೀಡಲಾಗಿತ್ತು. ಅದಕ್ಕೆ ಇರಾನ್ ಸೇನೆ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾಪ್ಸ್ (ಐಆರ್‌ಜಿಸಿ) ನೇತೃತ್ವ ವಹಿಸಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ದಿಢೀರ್ ದಾಳಿಗೆ ಕಾರಣ ಯಾರು ಎಂಬ ಪ್ರಶ್ನೆ ಮೂಡಿದ್ದಾಗಲೇ, ಇದಕ್ಕೆ ಇರಾನ್ ಕಾರಣ. ಆಗಸ್ಟ್‌ನಿಂದ ಈಚೆಗೆ ಎರಡೂ ಸಂಘಟನೆಗಳು ಭೂಮಿ, ವಾಯು ಮತ್ತು ಸಮುದ್ರದ ಮೂಲಕ ದಾಳಿಗೆ ಸರ್ವ ಸಿದ§ತೆಯನ್ನೂ ಮಾಡಿಕೊಂಡಿತ್ತು ಎಂದು ಪತ್ರಿಕೆ ಹೇಳಿಕೊಂಡಿದೆ. ಆದರೆ ಇದನ್ನು ಇರಾನ್ ಸರಾಸಗಟಾಗಿ ತಿರಸ್ಕರಿಸಿದೆ.
50 ಇಸ್ರೇಲಿ ಒತ್ತೆಯಾಳುಗಳ ಹತ್ಯೆ?
ಇದುವರೆಗೆ ಐವತ್ತು ಮಂದಿ ಇಸ್ರೇಲ್‌ನ ಒತ್ತೆಯಾಳುಗಳನ್ನು ಕೊಂದು ಹಾಕಿದ್ದೇವೆ ಎಂದು ಹಮಾಸ್ ಹೇಳಿಕೊಂಡಿದೆ. ಅ.7ರಂದು ಇಸ್ರೇಲ್ ವಿರುದ್ಧ ದಾಳಿ ನಡೆಸಿದ ದಿನದಿಂದ ಪ್ರತಿ ದಾಳಿ ಆರಂಭವಾಗಿತ್ತು. ಆ ದಿನದಿಂದಲೇ ಒತ್ತೆಯಾಳುಗಳ ಪೈಕಿ ಕೆಲವರನ್ನು ಕೊಲ್ಲಲಾಗಿದೆ ಎಂದು ಟೆಲಿಗ್ರಾಂ ಚಾನೆಲ್‌ನಲ್ಲಿ ಉಗ್ರ ಸಂಘಟನೆ ಅಪ್‌ಲೋಡ್ ಮಾಡಲಾಗಿರುವ ಸಂದೇಶದಲ್ಲಿ ತಿಳಿಸಲಾಗಿದೆ. ಆದರೆ ಯಾವುದೇ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ಸಂಘಟನೆಯ ಹೇಳಿಕೆಯನ್ನು ಪುಷ್ಟೀಕರಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.