![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 4, 2024, 12:03 AM IST
ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಎಲ್ಲನ್ ಮಸ್ಕ್ ಮಾಲೀಕತ್ವದ ಸ್ಪೇಸ್‌ಎಕ್ಸ್ ಸಂಸ್ಥೆಯೊಂದಿಗೆ ಸೇರಿಕೊಂಡು ಬೃಹತ್ ಸಂಪರ್ಕ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. 4,700 ಕೆಜಿ ತೂಕದ ಜಿಸ್ಯಾಟ್-20 ಅನ್ನು ಕಕ್ಷೆಗೆ ಸೇರಿಸಲು ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ಬಾಹ್ಯಾಕಾ ನೌಕೆಯನ್ನು ಇಸ್ರೋ ಬಳಸಿಕೊಳ್ಳಲಿದೆ.
4 ಟನ್‌ಗಿಂತ ಜಾಸ್ತಿ ತೂಕವಿರುವ ಉಪಗ್ರಹಗಳನ್ನು ಉಡಾವಣೆ ಮಾಡುವ ಶಕ್ತಿ ಭಾರತೀಯ ರಾಕೆಟ್ಗಳಿಗಿಲ್ಲ. ಹಾಗಾಗಿ ಇದುವರೆಗೆ ಫ್ರಾನ್ಸ್‌ನ ಏರಿಯನ್ಸ್ಪೇಸ್ ಸಂಸ್ಥೆಯ ರಾಕೆಟ್‌ಗಳನ್ನು ಬಳಸಿ ಉಪಗ್ರಹಗಳ ನ್ನು ಉಡಾವಣೆ ಮಾಡುತ್ತಿತ್ತು. ಈ ವರ್ಷ ದ್ವಿತೀಯ ತ್ತೈಮಾಸಿಕದಲ್ಲಿ ಜಿಸ್ಯಾಟ್-20ಯನ್ನು ಅಮೆರಿಕದ ಫ್ಲೋರಿಡಾದಿಂದ ಕಕ್ಷೆಗೆ ಸೇರಿಸಲು ಯೋಜಿಸಲಾಗಿದೆ. ಈ ನಿಟ್ಟಿ ನ ಲ್ಲಿ ಸ್ಪೇಸ್‌ಎಕ್ಸ್ ಸಂಸ್ಥೆಯೊಂದಿಗೆ ಭಾರತ ಬಾಹ್ಯಾಕಾಶ ಇಲಾಖೆ ಮತ್ತು ಇಸ್ರೋ ಒಪ್ಪಂದ ಮಾಡಿಕೊಂಡಿವೆ.
ಜಿಸ್ಯಾಟ್-20 ಏನು ಮಾಡುತ್ತೆ?: ಎನ್‌ಎಸ್‌ಐಎಲ್ ಸಂಸ್ಥೆ ಇಸ್ರೋ ಜತೆ ಸೇರಿಕೊಂಡು ಜಿಸ್ಯಾಟ್-20 ಉಪಗ್ರಹ ಸಿದ್ಧಪಡಿಸಿದೆ. ಇದ ರಲ್ಲಿರುವ 32 ಪ್ರಬಲ ಬೀಮ್‌ಗಳ ಮೂಲಕ ಅಂಡ ಮಾನ್-ನಿಕೋಬಾರ್, ಲಕ್ಷದ್ವೀಪ, ಜಮ್ಮುಕಾಶ್ಮೀರ ಸೇರಿ ಇಡೀ ಭಾರತ ವನ್ನೇ ಸಂಪರ್ಕ ವ್ಯವಸ್ಥೆಯಡಿ ತರಬ ಹುದು. 48 ಜಿಬಿಪಿಎಸ್ ವೇಗದಲ್ಲಿ (ಎಚ್‌ಟಿಎಸ್) ಮಾಹಿತಿ, ಸಂಕೇತ, ಚಿತ್ರಗಳನ್ನು ವರ್ಗಾಯಿಸುತ್ತದೆ. ಸಂಪರ್ಕವೇ ಇಲ್ಲದಿರುವ ಸ್ಥಳಗಳಿಗೂ ಅಂತ ರ್ಜಾಲ ಸಂಪರ್ಕ ಕಲ್ಪಿಸುವುದು ಉಪಗ್ರಹದ ಉದ್ದೇಶ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.