ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್: ರುದ್ರಾಂಕ್ಷ್ ಬಂಗಾರ ಬೇಟೆ
Team Udayavani, Feb 22, 2023, 5:23 AM IST
ಕೈರೋ (ಈಜಿಪ್ಟ್): ವಿಶ್ವ ಚಾಂಪಿಯನ್ ರುದ್ರಾಂಕ್ಷ್ ಬಾಳಾ ಸಾಹೇಬ್ ಪಾಟೀಲ್ ಕೈರೋ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಬಂಗಾರದ ಪದಕಕ್ಕೆ ಗುರಿ ಇರಿಸಿದ್ದಾರೆ.
ಮಂಗಳವಾರ ನಡೆದ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ವಿಶ್ವದ ನಂ.1 ಖ್ಯಾತಿಯ ರುದ್ರಾಂಕ್Ò ಪಾಟೀಲ್ ಜರ್ಮನಿಯ ಮ್ಯಾಕ್ಸಿಮಿಲಿಯನ್ ಉಲ್ಬಿಚ್ ವಿರುದ್ಧ 16-8 ಅಂತರದ ಮೇಲುಗೈ ಸಾಧಿಸಿದರು. ರ್‍ಯಾಂಕಿಂಗ್ ಸುತ್ತಿನಲ್ಲೂ ರುದ್ರಾಂಕ್ಷ್ 262.0 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರು. ಇಲ್ಲಿ ಉಲ್ಬಿಚ್ 260.6 ಅಂಕ ಗಳಿಸಿದ್ದರು. ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನ (629.3 ಅಂಕ) ಗಳಿಸುವ ಮೂಲಕ ರುದ್ರಾಂಕ್Ò ರ್‍ಯಾಂಕಿಂಗ್ ಸುತ್ತಿನಲ್ಲಿ ಸ್ಪರ್ಧಿಸಲು ಅರ್ಹತೆ ಸಂಪಾದಿಸಿದ್ದರು.
4 ಪದಕ, 3 ಚಿನ್ನ
ರುದ್ರಾಂಕ್ಷ್ ಪಾಟೀಲ್ ಸಾಧನೆ ಯೊಂದಿಗೆ ಈ ಕೂಟದಲ್ಲಿ ಭಾರತ ಒಟ್ಟು 4 ಪದಕ ಗೆದ್ದಂತಾಯಿತು. ಇದರಲ್ಲಿ 3 ಚಿನ್ನದ ಪದಕಗಳಾಗಿವೆ. ರುದ್ರಾಂಕ್ಷ್ ಪಾಟೀಲ್ ಗೆದ್ದ 2ನೇ ಸ್ವರ್ಣ ಪದಕ ಇದಾಗಿದೆ.
10 ಮೀ. ಏರ್ ಪಿಸ್ತೂಲ್ ಮತ್ತು ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ಭಾರತ ಮೊದಲೆರಡು ಚಿನ್ನದ ಪದಕ ಗಳನ್ನು ಜಯಿಸಿತ್ತು. ಇಲ್ಲಿ ಕ್ರಮವಾಗಿ ಆರ್. ನರ್ಮದಾ ನಿತಿನ್-ರುದ್ರಾಂಕ್Ò ಪಾಟೀಲ್ ಮತ್ತು ವರುಣ್ ತೋಮರ್-ರಿದಂ ಸಂಗ್ವಾನ್ ಜೋಡಿ ಚಾಂಪಿಯನ್ ಆಗಿತ್ತು. ಕಂಚಿನ ಪದಕ ವರುಣ್ ತೋಮರ್ ಅವರಿಗೆ ರವಿವಾರವೇ ಒಲಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.