ಕೋವಿಡ್ ಲಸಿಕೆಯಲ್ಲಿ ಐಟಿ ಸಿಟಿಯೇ ಫಸ್ಟ್
ಶೇ.70ರಷ್ಟು ಮಂದಿ ಮೊದಲ ಡೋಸ್; ಶೇ.20ರಷ್ಟು ಮಂದಿ ಎರಡನೇ ಡೋಸ್
Team Udayavani, Aug 11, 2021, 3:21 PM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ದೇಶದಲ್ಲಿಯೇ ಕೋವಿಡ್ ಲಸಿಕೆ ಅಭಿಯಾನದಲ್ಲಿ ಐಟಿ ರಾಜಧಾನಿ ಮುಂಚೂಣಿಯಲ್ಲಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಅತ್ಯುತ್ತಮ ಸ್ಪಂದನೆ ಬೆಂಗಳೂರಿನಲ್ಲಿ ದೊರೆತಿದೆ.
ಬೆಂಗಳೂರಿನಲ್ಲಿ(ಬಿಬಿಎಂಪಿ ಮತ್ತು ಬೆಂಗಳೂರು ಗ್ರಾಮಾಂತರ ಸೇರಿ) ಈಗಾಗಲೇ ಶೇ.70 ರಷ್ಟು ಮಂದಿ ಕೋವಿಡ್ ಮೊದಲ ಡೋಸ್ ಪಡೆದಿದ್ದು, ಶೇ.20 ರಷ್ಟು ಮಂದಿ ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ. 10ರಲ್ಲಿ ಏಳು ಮಂದಿಗೆ ಮೊದಲ ಡೋಸ್, ಐವರಲ್ಲಿ ಒಬ್ಬರಿಗೆ ಎರಡನೇ ಡೋಸ್ ಪೂರ್ಣಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಇತರೆ ಮಹಾನಗರಗಳು/ ಮೆಟ್ರೋ ನಗರಗಳಿಗೆ ಪೈಕಿ
ರಾಜಧಾನಿಯಲ್ಲಿಯೇ ಲಸಿಕೆ ಅಭಿಯಾನದ ಮೊದಲ ಮತ್ತು ಎರಡನೇ ಡೋಸ್‌ನ ಗುರಿ ಸಾಧನೆ ಹೆಚ್ಚಿದೆ.
ನಗರದಲ್ಲಿ ಜನಸಂಖ್ಯೆ 1.27 ಕೋಟಿಯಷ್ಟಿದ್ದು, ಈ ಪೈಕಿ ಲಸಿಕೆ 18 ವರ್ಷ ಮೇಲ್ಪಟ್ಟ ಲಸಿಕೆ ವ್ಯಾಪ್ತಿಗೆ ಬರುವವರ ಸಂಖ್ಯೆ 1.01 ಕೋಟಿ ಇದೆ. ಮಂಗಳವಾರ ಅಂತ್ಯಕ್ಕೆ 73.5 ಲಕ್ಷ ಮಂದಿ ಮೊದಲ ಡೋಸ್, 19.7 ಲಕ್ಷ ಮಂದಿ ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಶೇ.70 ರಷ್ಟು ಮಂದಿಗೆ ಮೊದಲ, ಶೇ.20 ರಷ್ಟು ಮಂದಿಗೆ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಲಸಿಕೆ ಡೋಸ್ ವಿತರಣೆಯಲ್ಲಿ ದೆಹಲಿ ಐದು ಲಕ್ಷ (79 ಲಕ್ಷ) ಮುಂದಿರಬಹುದು. ಆದರೆ, ಬೆಂಗಳೂರಿಗಿಂತಲೂ ಮೂರುಪಟ್ಟು ಜನಸಂಖ್ಯೆ (3 ಕೋಟಿ) ಹೊಂದಿರುವ ಹಿನ್ನೆಲೆ ಗುರಿ ಸಾಧನೆಯಲ್ಲಿ ಹಿಂದಿದೆ. ಇನ್ನು ಹೆಚ್ಚು ಕಡಿಮೆ ದುಪ್ಪಟ್ಟು ಜನಸಂಖ್ಯೆ (2 ಕೋಟಿ) ಹೊಂದಿರುವ ಮುಂಬೈನಲ್ಲಿ ಬೆಂಗಳೂರಿಗಿಂತಲೂ ಕಡಿಮೆ ಮಂದಿಗೆ ಮೊದಲ ಡೋಸ್ ಪಡೆದಿದ್ದಾರೆ.
ಮುಂದಿನ ವಾರದಲ್ಲಿ ಒಂದು ಕೋಟಿ ಡೋಸ್:
ಬೆಂಗಳೂರಿನಲ್ಲಿ ಈವರೆಗೂ ಮೊದಲ ಮತ್ತು ಎರಡನೇ ಡೋಸ್ ಸೇರಿ ಒಟ್ಟು 93 ಲಕ್ಷ ಡೋಸ್ ಲಸಿಕೆಯನ್ನು ಹಂಚಿಕೆ ಮಾಡಲಾಗಿದೆ. ಆಗಸ್ಟ್ ಮೊದಲ ವಾರ ನಿತ್ಯ ಸರಾಸರಿ 80 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿದೆ. ಮುಂದಿನ ವಾರದಲ್ಲಿ ಒಟ್ಟಾರೆ ವಿತರಿಸಲಾದ ಲಸಿಕೆ ಪ್ರಮಾಣ ಒಂದು ಕೋಟಿ ಡೋಸ್‌ಗೆ ಹೆಚ್ಚಲಿದೆ. ದೆಹಲಿ 1.1 ಕೋಟಿ ಡೋಸ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದು, ಒಂದು ಕೋಟಿ ಡೋಸ್ ವಿತರಿಸಿದ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ
ಬೆಂಗಳೂರು ಮುಂಚೂಣಿಯಲ್ಲಿರಲು ಪ್ರಮುಖಐದು ಕಾರಣಗಳೇನು?
1. ಮುಂಬೈ, ಪುಣೆ, ಚೆನ್ನೈ ಸೇರಿದಂತೆ ಇತರೆ ನಗರಗಳಿಗೆ ಹೋಲಿಸಿದರೆ ಲಸಿಕಾ ವಿತರಣಾ ಕೇಂದ್ರಗಳ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಟ್ಟು 700ಕ್ಕೂ ಅಧಿಕ ಲಸಿಕಾಕೇಂದ್ರಗಳಿವೆ.
2. ಬೆಂಗಳೂರಿನಲ್ಲಿ ಸರ್ಕಾರಿ ಲಸಿಕೆ ಕೇಂದ್ರಗಳಿಗಿಂತ ಖಾಸಗಿ ಆಸ್ಪತ್ರೆಗಳ ಲಸಿಕಾ ಕೇಂದ್ರಗಳು ಹೆಚ್ಚು ಕಾರ್ಯಾಚರಣೆಯಲ್ಲಿವೆ. ಬೇರೆ ನಗರಗಳಿಗೆ ಹೋಲಿಸಿದರೆ ಅತಿ ಹೆಚ್ಚುಖಾಸಗಿ ಲಸಿಕಾ ಕೇಂದ್ರಗಳು ಇಲ್ಲಿಯೇ ಕಾರ್ಯನಿರ್ವಹಿಸುತ್ತಿವೆ.
3. ಲಸಿಕೆ ಅಭಿಯಾನವನ್ನು ನಗರಜಿಲ್ಲೆ ಆರೋಗ್ಯ ಇಲಾಖೆ,ಬಿಬಿಎಂಪಿ ವಿಭಾಗ ಮಾಡಿಕೊಂಡಿದ್ದು, ಜವಾಬ್ದಾರಿ ವಿಸ್ತರಣೆಯಾಗಿ ಅಭಿಯಾನ ವೇಗವಾಗಿ ನಡೆಯುತ್ತಿದೆ.
4. ನಗರಲ್ಲಿ ಟೆಕ್ಕಿಗಳ ಸಂಖ್ಯೆ ಹೆಚ್ಚಿದ್ದು, ಅಭಿಯಾನಕ್ಕೆಕೈಜೋಡಿಸಿದ್ದಾರೆ. ಜತೆಗೆ ಬಿಜೆಪಿ ಸರ್ಕಾರದ ಆಡಳಿತ ಹಿನ್ನೆಲೆ ಲಸಿಕೆ ದಾಸ್ತಾನು ಪೂರೈಕೆ, ಜನಪ್ರತಿನಿಧಿಗಳಿಂದ ಅಭಿಯಾನಕ್ಕೆ ಪ್ರೋತ್ಸಾಹ.
5. ಸೋಂಕು ಹೆಚ್ಚಿರುವ ನಗರ ಎಂದು ಬೆಂಗಳೂರನ್ನು ಗುರುತಿಸಿ ಹೆಚ್ಚಿನ ಪ್ರಮಾಣದ ಲಸಿಕೆ ಮೀಸಲಿಟ್ಟು, ಹಂಚಿಕೆ. ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಸಿಬ್ಬಂದಿ ಕಾರ್ಯಚಟುವಟಿಕೆಗಳು.
ಇದನ್ನೂ ಓದಿ:ಅಫ್ಘಾನಿಸ್ತಾನದ 8ನೇ ನಗರ ತಾಲಿಬಾನ್ ವಶಕ್ಕೆ, ಸೈನಿಕರು, ಪೊಲೀಸರು ಉಗ್ರರಿಗೆ ಶರಣು!
2ನೇ ಅಲೆಯಲ್ಲಿ ಕುಖ್ಯಾತಿಗೊಳಗಾಗಿತ್ತು
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ (ಮೇ) ಇಡೀ ದೇಶದ ಮಹಾನಗರಗಳ ಪೈಕಿ ಅತಿ ಹೆಚ್ಚು ಪ್ರಕರಣಗಳು (26 ಸಾವಿರ), ಸೋಂಕಿತರ ಸಾವು (375) ಬೆಂಗಳೂರಿನಲ್ಲಿ ವರದಿಯಾಗಿದ್ದವು. ಅಲ್ಲದೆ, ಸತತ ಒಂದು ತಿಂಗಳಿಗೂ ಅಧಿಕ ದಿನಗಳು ಅತಿ ಹೆಚ್ಚು ಸಕ್ರಿಯ ಸೋಂಕು ಪ್ರಕರಣಗಳನ್ನು (ಮೂರು ಲಕ್ಷ) ಬೆಂಗಳೂರು ಹೊಂದಿತ್ತು. ಹೀಗಾಗಿ,ಕೋವಿಡ್ ಸೋಂಕು ರಾಷ್ಟ್ರರಾಜಧಾನಿ ಎಂಬ ಕುಖ್ಯಾತಿಗೆ ಗುರಿಯಾಗಿತ್ತು. ಸದ್ಯ ಲಸಿಕೆಯಲ್ಲಿ ಮುಂಚೂಣಿಯಲ್ಲಿದೆ.2ನೇ ಅಲೆಯಲ್ಲಿ ನಗರದ ಆಸ್ಪತ್ರೆಗಳಲ್ಲಿ ಉಂಟಾದ ಹಾಸಿಗೆ ಕೊರತೆಯು ಕೂಡಾ ಜನರಲ್ಲಿ ಭಯ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲು ಕಾರಣವಾಗಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಬೆಂಗಳೂರು ಲಸಿಕೆ ವಿತರಣೆಯಲ್ಲಿ ಇತರೆ ಮಹಾನಗರಗಳಿಗಿಂತ ಮುಂಚೂಣಿಯಲ್ಲಿದೆ. ನಿತ್ಯ ಒಂದು ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ವಿತರಣೆ ಮಾಡುವ ಸಾಮರ್ಥ್ಯ ಬಿಬಿಎಂಪಿ ಹೊಂದಿದೆ. ದಾಸ್ತಾನು ಲಭ್ಯವಾದರೆ ಶೀಘ್ರದಲ್ಲಿಯೇ ಶೇ.100 ರಷ್ಟು ಗುರಿ ಸಾಧನೆಯಾಲಿದೆ.
-ಡಿ.ರಂದೀಪ್, ಆರೋಗ್ಯ ವಿಶೇಷ ಆಯುಕ್ತ, ಬಿಬಿಎಂಪಿ
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಶೇ.92 ರಷ್ಟು ಲಸಿಕೆ ಗುರಿ ಸಾಧನೆಯಾಗಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದ್ದು, ಹೆಚ್ಚಿನ ಜನರು ಆಗಮಿಸಿ ಲಸಿಕೆ ಪಡೆಯುತ್ತಿದ್ದಾರೆ.
-ಡಾ.ಸೈಯದ್ ಸಿರಾಜುದ್ದೀನ್ ಮದನಿ,
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ
– ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.