ನಾನೇ ಶ್ರೇಷ್ಠ ಎಂದು ಸಾಧಿಸುವುದು ಸುಲಭ!
Team Udayavani, Feb 9, 2021, 8:00 AM IST
ಅಹಂ ಎಂಬುದು ಶಕುನಿಯಂತೆ, ಗುಳ್ಳೆನರಿಯಂತೆ ಬಲು ಕುತಂತ್ರಿ, ಬಹಳ ಚಾಣಾಕ್ಷಮತಿ. ಯಜಮಾನಿಕೆ ಅದರ ಜಾಯಮಾನ.
ಅಧಿಕಾರಶಾಹಿ ಅದರ ಸ್ವಭಾವ. ಆಕ್ರಮಣ ಅದರ ಗುಣ. ಅದು ಸದಾ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಕೊಳ್ಳಲು ಹೊಂಚುಹಾಕುತ್ತಿರುತ್ತದೆ. ನಮ್ಮ ಮನೆ ನಮ್ಮ ಅಹಂನ ಭಾಗ, ನಮ್ಮ ಹೂದೋಟ ಅದರ ಭಾಗ, ನಮ್ಮ ಮಕ್ಕಳು, ನಮ್ಮ ಬಾಳಸಂಗಾತಿ… ಎಲ್ಲವೂ ಅದರ ಅಡಿಯಾಳುಗಳು. ಅಹಂನಿಂದಾಗಿ ನಾವು ಕಲ್ಪನೆಯ ಸಾಮ್ರಾಜ್ಯವೊಂದನ್ನು ಕಟ್ಟಿಕೊಂಡಿದ್ದೇವೆ. ಈ ಸಾಮ್ರಾಜ್ಯವು ಪ್ರಕೃತಿಯ ಜತೆಗೆ ನಾವು ಸಂಘರ್ಷಕ್ಕೆ ಇಳಿಯುವಂತೆ ಮಾಡು ತ್ತದೆ. ನೆನಪಿರಲಿ, ಅದರಲ್ಲಿ ಗೆಲ್ಲುವುದು ಪ್ರಕೃತಿಯೇ, ನಾವಲ್ಲ. ಯಾಕೆಂದರೆ ಅಹಂ ನಮ್ಮ ತಪ್ಪು, ಪ್ರಕೃತಿಯದಲ್ಲ.
ಫ್ರಾನ್ಸ್‌ನಲ್ಲೊಬ್ಬರು ಪ್ರೊಫೆಸರ್ ಇದ್ದರು. ರಾಜಧಾನಿ ಪ್ಯಾರಿಸ್‌ನ ಹೆಸ ರಾಂತ ವಿಶ್ವವಿದ್ಯಾನಿಲಯದಲ್ಲಿ ತಣ್ತೀಶಾಸ್ತ್ರ ವಿಭಾಗದ ಮುಖ್ಯಸ್ಥರವರು. ಒಂದೇ ಒಂದು ಸಮಸ್ಯೆ ಎಂದರೆ ಆ ಮನುಷ್ಯ ಬಹಳ ವಿಕ್ಷಿಪ್ತ ವ್ಯಕ್ತಿ.
ಪ್ರೊಫೆಸರ್ ಅವರ ವಿಚಿತ್ರ ನಡವ ಳಿಕೆಗಳಿಗೆ ಅವರ ಶಿಷ್ಯರು ಒಗ್ಗಿ ಹೋಗಿದ್ದರು. ಬೇರೆ ವಿಧಿಯಿಲ್ಲವಲ್ಲ! ಆದರೆ ಒಂದು ದಿನ ಅದು ಎಲ್ಲೆ ಮೀರಿತು. ಆ ದಿನ ತರಗತಿಯೊಳಕ್ಕೆ ನುಗ್ಗಿದವರೇ ಪ್ರೊಫೆಸರ್ ಹೇಳಿದರು, “ಇವತ್ತು ನಾನು ಒಂದು ವಿಚಾರವನ್ನು ಘೋಷಣೆ ಮಾಡಬೇಕೆಂದಿದ್ದೇನೆ. ಯಾರಾದರೂ ಪ್ರತಿ ಹೇಳುವವರು ಇದ್ದರೆ ಕೈಯೆತ್ತಿ.’
ತರಗತಿಯಲ್ಲಿ ಸೂಜಿ ಬಿದ್ದರೂ ಕೇಳಿಸುವಂಥ ನೀರವ ನೆಲೆಸಿತು. ಆಗ ಪ್ರೊಫೆಸರ್ ಹೇಳಿದರು, “ಈಗ ನನ್ನ ಘೋಷಣೆ: ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಮನುಷ್ಯ ನಾನು. ಯಾರಾದ್ದಾದರೂ ಇದಕ್ಕೆ ತಕರಾರು ಇದೆಯಾ?’
ವಿದ್ಯಾರ್ಥಿಗಳ ನಡುವೆ ಗುಸುಗುಸು ಆರಂಭವಾಯಿತು. “ಇದು ಅತಿಯಾ ಯಿತು. ಇಷ್ಟರ ವರೆಗೆ ಹೇಗೋ ಸಹಿಸಿ ಕೊಂಡಿದ್ದೆವು. ಆದರೆ ಇದನ್ನು ತಾಳಿ ಕೊಳ್ಳುವುದು ಹೇಗೆ!’
ಒಬ್ಬ ವಿದ್ಯಾರ್ಥಿ ಮೆಲ್ಲನೆ ಎದ್ದು ನಿಂತು ಕೇಳಿದ, “ಸರಿ, ಆದರೆ ಅದಕ್ಕೆ ಸಾಕ್ಷ éಗಳು ಬೇಕಲ್ಲ… ಅದನ್ನು ನಾವು ತಿಳಿಯಬೇಕಾಗಿದೆ.’
ಪ್ರೊಫೆಸರ್ ಗಹಗಹಿಸಿ ನಕ್ಕರು, “ಅದು ಬಹಳ ಸರಳ. ಈ ಜಗತ್ತಿನಲ್ಲಿ ಶ್ರೇಷ್ಠ ದೇಶ ಯಾವುದು?’
ಮಕ್ಕಳು ಗುಸುಗುಸು ಮಾತಾಡಿ ಕೊಂಡರು, “ಫ್ರಾನ್ಸ್!’ ಬೇರೆ ಯಾವ ದೇಶವನ್ನಾದರೂ ಫ್ರೆಂಚರು ಶ್ರೇಷ್ಠ ಎಂದು ಒಪ್ಪಿಕೊಂಡಾರೆಯೇ? ಭಾರತೀ ಯರು ಭಾರತವೇ ಶ್ರೇಷ್ಠ ಎಂದು ಹೇಳುವ ಹಾಗೆ ಫ್ರೆಂಚರು ಫ್ರಾನ್ಸ್ ದೇಶವೇ ಶ್ರೇಷ್ಠ ಎನ್ನು ತ್ತಾರೆ. ಪ್ರೊಫೆಸರ್ ಹೆಣೆ ಯುತ್ತಿರುವ ಬಲೆ ಯೊಳಗೆ ಸಿಲುಕುತ್ತಿ ದ್ದೇವೆ ಎಂಬ ಅರಿವು ಮಕ್ಕಳಿಗೆ ಇರಲಿಲ್ಲ.
ಪ್ರೊಫೆಸರ್ ಮುಂದುವರಿಸಿದರು, “ಈಗ ಫ್ರಾನ್ಸ್ ಮಾತ್ರ ಉಳಿದಿದೆ. ಫ್ರಾನ್ಸ್ ನಲ್ಲಿ ನಾನೇ ಶ್ರೇಷ್ಠ ಎಂದು ಸಾಧಿಸಿದರೆ ಆಯಿತಲ್ಲ! ಈ ಫ್ರಾನ್ಸ್‌ನಲ್ಲಿ ಶ್ರೇಷ್ಠ ನಗರ ಯಾವುದು?’
ಫ್ರಾನ್ಸ್‌ನಲ್ಲಿ ರಾಜಧಾನಿ ಪ್ಯಾರಿಸ್ ಶ್ರೇಷ್ಠ. ವಿದ್ಯಾರ್ಥಿಗಳು ಹಾಗೆಯೇ ಹೇಳಿದರು. “ಈಗ ಈ ಪ್ಯಾರಿಸ್‌ನಲ್ಲಿ ಶ್ರೇಷ್ಠ ಸಂಸ್ಥೆ ಯಾವುದು?’ ಪ್ರೊಫೆಸರ್ ಕೇಳಿದರು. ವಿದ್ಯಾರ್ಥಿಗಳಿಗೆ ಉಭಯ ಸಂಕಟ. ತಾನಿರುವ ಸಂಸ್ಥೆ ಶ್ರೇಷ್ಠವಲ್ಲ ಎಂದು ಯಾವನಾದರೂ ಹೇಳಿಕೊಳ್ಳುವ ಹಾಗಿದೆಯೇ? ಹಾಗಾಗಿ “ಈ ವಿಶ್ವವಿದ್ಯಾ ನಿಲಯವೇ ಶ್ರೇಷ್ಠ’ ಎಂದರು.
“ಈ ವಿಶ್ವವಿದ್ಯಾನಿಲಯದಲ್ಲಿ ಶ್ರೇಷ್ಠ ವಿಭಾಗ ಯಾವುದು?’ ಪ್ರೊಫೆಸರ್ ಕೇಳಿದರು. ತಾವು ಅಧ್ಯಯನ ಮಾಡುತ್ತಿ ರುವ ತಣ್ತೀಶಾಸ್ತ್ರ ವಿಭಾಗವಲ್ಲದೆ ಇನ್ನೊಂದು ಶ್ರೇಷ್ಠ ಎಂದು ಆ ವಿದ್ಯಾರ್ಥಿಗಳು ಹೇಳಿಯಾರೆ!
ಈಗ ಆ ವಿಕ್ಷಿಪ್ತ ಪ್ರೊಫೆಸರ್ ಕುರ್ಚಿಯಲ್ಲಿ ಕುಳಿತು ಕಾಲ ಮೇಲೆ ಕಾಲು ಏರಿಸಿ ಹೇಳಿದರು, “ಜಗತ್ತಿನ ಶ್ರೇಷ್ಠ ದೇಶ ಫ್ರಾನ್ಸ್. ಅದರಲ್ಲಿ ಪ್ಯಾರಿಸ್ ಶ್ರೇಷ್ಠ ನಗರ. ಅಲ್ಲಿ ನಮ್ಮ ವಿಶ್ವವಿದ್ಯಾನಿಲಯವೇ ಶ್ರೇಷ್ಠ. ಅದರಲ್ಲಿ ನಮ್ಮ ತಣ್ತೀಶಾಸ್ತ್ರ ವಿಭಾಗ ಶ್ರೇಷ್ಠ. ಅದಕ್ಕೆ ನಾನು ಮುಖ್ಯಸ್ಥ.
ಹಾಗಾಗಿ ನಾನೇ ಜಗತ್ತಿನ ಅತೀ ಶ್ರೇಷ್ಠ ವ್ಯಕ್ತಿ’.
ಅಹಂ ಪ್ರತಿಯೊಬ್ಬರಲ್ಲಿಯೂ ವರ್ತಿ ಸುವುದು ಹೀಗೆ.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.