RBI: ಇನ್ನು ಪರ್ಸನಲ್ ಲೋನ್ ಸಿಗೋದು ಸ್ವಲ್ಪ ಕಷ್ಟ- ಆರ್‌ಬಿಐನಿಂದ ಹೊಸ ನಿಯಮ
Team Udayavani, Nov 16, 2023, 11:56 PM IST
ಮುಂಬಯಿ: ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ (ಎನ್‌ಬಿಎಫ್ಸಿ) ಪರ್ಸ ನಲ್ ಲೋನ್ ಪಡೆಯಲು ಉದ್ದೇಶಿಸಿದ್ದೀರಾ? ಹಾಗಿದ್ದರೆ ಅದು ಸಿಗುವುದು ಕೊಂಚ ಕಷ್ಟವಾಗಲಿದೆ. ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಆರ್‌ಬಿಐ ಕಠಿಣಗೊಳಿಸಿರುವುದರಿಂದ ಈ ಸ್ಥಿತಿ ಉಂಟಾಗಲಿದೆ. ಪರ್ಸನಲ್ ಲೋನ್ ಅನ್ನು ಭದ್ರತೆ ಇಲ್ಲದ (ಅನ್ ಸೆಕ್ಯೂರ್ಡ್ ಲೋನ್) ಎಂದು ಪರಿಣಿಸಿದೆ. ಹೀಗಾಗಿ, ಬ್ಯಾಂಕ್‌ಗಳಿಗೆ ಇರುವ ರಿಸ್ಕ್ ಫ್ಯಾಕ್ಟರ್ ಪ್ರಮಾಣವನ್ನು ಶೇ.25ರಿಂದ ಶೇ.150ಕ್ಕೆ ಏರಿಕೆ ಮಾಡಿದೆ. ಆದರೆ, ಚಿನ್ನ ಮತ್ತು ಚಿನ್ನಾಭರಣ ಸಾಲ ಮೇಲೆ ಇರುವ ಸಾಲದ ಮೇಲಿನ ರಿಸ್ಕ್ ಫ್ಯಾಕ್ಟರ್ ಶೇ.100 ಹಾಗೆಯೇ ಮುಂದುವರಿಯಲಿದೆ. ಈ ನಿಯಮ ಗೃಹ, ಶಿಕ್ಷಣ ಮತ್ತು ವಾಹನ ಸಾಲಗಳ ಮೇಲೆ ಅನ್ವಯವಾಗುವುದಿಲ್ಲ.
ಇದೇ ವೇಳೆ, ದೇಶದಲ್ಲಿನ ಅರ್ಥ ವ್ಯವಸ್ಥೆ ಸಂಪೂರ್ಣ ಪ್ರಮಾಣದಲ್ಲಿ ಬಲವರ್ಧನೆ ಗೊಂಡಿಲ್ಲ ಎಂದು ಆರ್‌ಬಿಐ ಹೇಳಿದೆ. ವಿತ್ತೀಯ ನೀತಿಯ ಕ್ರಮ ಹಾಗೂ ಪೂರೈಕೆ ವ್ಯವಸ್ಥೆಯ ಖಾತರಿಯು ಚಿಲ್ಲರೆ ಹಣದುಬ್ಬರ ವನ್ನು ಸಮತೋಲನದಲ್ಲಿ ಇರಿಸಿದೆ. ನಾವಿನ್ನೂ ಸಮಸ್ಯೆಯಿಂದ ಸಂಪೂರ್ಣ ಹೊರಬಂದಿಲ್ಲ ಅರ್ಥವ್ಯವಸ್ಥೆ ಸಬಲಗೊಳ್ಳಲು ಮತ್ತಷ್ಟು ದೂರ ಶ್ರಮಿಸಬೇಕಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ದೇಶದ ಆರ್ಥಿಕ ಚೇತರಿಕೆ ಕುರಿತಂತೆ ಆರ್‌ಬಿಐ ಡೆಪ್ಯೂಟಿ ಗವರ್ನರ್ ಮೈಕಲ್ ದೇಬಬ್ರತ ಪಾತ್ರ ನೇತೃತ್ವದ ತಂಡ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ದೇಶದ ಸೇವಾವಲಯದ ವಿಸ್ತರಣೆ ಹೆಚ್ಚಿದ್ದು, 2023-24ರ ಅವಧಿಯಲ್ಲಿ ದೇಶದ ಜಿಡಿಪಿಯಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದೇ ವೇಳೆ ಅರ್ಥವ್ಯವಸ್ಥೆ ಇನ್ನೂ ಸದೃಢವಾಗಿಲ್ಲ, 2022-23ರ ಮೊದಲ 7 ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಕಡಿಮೆಯಾಗಿದೆ ಭವಿಷ್ಯದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿಡಲು ಮತ್ತಷ್ಟು ದೂರ ಸಾಗಬೇಕಿದೆ ಎಂದೂ ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.