“ದುಬಾೖಯಿಂದ ಊರಿಗೆ ತಲುಪಿದ್ದೇ ನಮ್ಮ ಪುಣ್ಯ’
Team Udayavani, May 15, 2020, 6:24 AM IST
ಕೋವಿಡ್ 19ದಿಂದ ವಿದೇಶದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಭಾರತೀಯರನ್ನು ಏರ್‌ಲಿಫ್ಟ್ ಮಾಡುವ “ವಂದೇ ಭಾರತ್ ಮಿಷನ್’ನಡಿ ದುಬಾೖಯಿಂದ ವಿಶೇಷ ವಿಮಾನದಲ್ಲಿ ಬಂದ ಕೆಲವರ ಮನದಾಳದ ಮಾತು ಇಂತಿದೆ.
ಮಂಗಳೂರು: “ನಾನು ದುಬಾೖಯ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಹೊಟೇಲ್ ಮುಚ್ಚಿ 2 ತಿಂಗಳಾಯಿತು. ನಾವು ಹೊಟೇಲ್ ಒಳಗೇ ಇರುತ್ತಿದ್ದೆವು. ಎರಡು ತಿಂಗಳಿನಲ್ಲಿ 2 ಬಾರಿ ಮಾತ್ರ ಹೊರಗೆ ಹೋಗಿದ್ದೇನೆ. ಅಲ್ಲಿ ಇರುವವರ ಭಾರತೀಯರ ಪೈಕಿ ಹಲವರು ಭಾರೀ ಸಂಕಷ್ಟದಲ್ಲಿದ್ದಾರೆ. ನಾವು ಊರಿಗೆ ತಲುಪಿದ್ದು ನಮ್ಮ ಪುಣ್ಯ.’
ದುಬಾೖಯಿಂದ ವಿಶೇಷ ವಿಮಾನದಲ್ಲಿ ಮಂಗಳವಾರ ಮಂಗಳೂರಿಗೆ ಆಗಮಿಸಿದ ಯುವಕನೋರ್ವನ ನುಡಿಯಿದು.”ನನ್ನ ಆರೋಗ್ಯವೂ ಕೈಕೊಟ್ಟಿತ್ತು. ದುಬಾೖಯಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದೆ. ಈಗ ನನ್ನ ಹೋದ ಜೀವ ಮರಳಿ ಬಂದಂತಾಗಿದೆ. ದುಬಾೖ ವಿಮಾನ ನಿಲ್ದಾಣಕ್ಕೆ ಬಂದ ಅನಂತರ ಕ್ವಾರಂಟೈನ್ ಕೋಣೆಗೆ ಬರುವವರೆಗೆ ಒಂದು ಹನಿ ನೀರು ಕೂಡ ಕುಡಿದಿಲ್ಲ. ಅಷ್ಟು ಜಾಗರೂಕತೆ ವಹಿಸಿದ್ದೆವು. ಇಲ್ಲಿ ನಿಲ್ದಾಣದಿಂದ ಕ್ವಾರಂಟೈನ್ ಸ್ಥಳಕ್ಕೆ ಹೋಗುವಾಗ ಕೆಲವರಿಗೆ ಸಮಸ್ಯೆಯಾಯಿತು. ಉಳಿದಂತೆ ತೊಂದರೆಯಾಗಿಲ್ಲ. ನಾನೀಗ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದೇನೆ. ದುಬಾೖಯಲ್ಲಿ ಇನ್ನೂ ಸಾವಿರಾರು ಮಂದಿ ನಮ್ಮ ದೇಶದ ವಿಮಾನ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದಾರೆ. ಅವರೆಲ್ಲರನ್ನು ಭಾರತಕ್ಕೆ ಕರೆತರಬೇಕಾಗಿದೆ. ನನ್ನ ಪ್ರಕಾರ ಭಾರತದಲ್ಲಿ ಸಿಗುವ ಚಿಕಿತ್ಸೆ ದುಬಾೖಯಲ್ಲಿ ಈಗಿನ ಸ್ಥಿತಿಯಲ್ಲಿ ಸಿಗುವುದು ಕಷ್ಟ. ಹಾಗಂತ ಯಾರೂ ಭಯಪಡುವ ಅಗತ್ಯವಿಲ್ಲ. ಹೆಚ್ಚಿನ ಎಚ್ಚರಿಕೆ ಬೇಕಾಗಿದೆ. ನನಗಂತೂ ಹೋದ ಜೀವ ಮರಳಿ ಬಂದಂತಾಗಿದೆ. ಈಗ ಅಲ್ಲಿ ಅನೇಕ ಮಂದಿ ಭಾರತೀಯರು ಕೆಲಸವಿಲ್ಲದೆ, ಸಂಬಳವಿಲ್ಲದೆ ತೊಂದರೆಗೊಳಗಾಗಿದ್ದಾರೆ. ಕೆಲಸಕ್ಕಿಂತಲೂ ಜೀವ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ’ ಎಂದವರು ಹೇಳುತ್ತಾರೆ.
ಅಲ್ಲಿನವರ ನೆರವಿನಿಂದ ಊರಿಗೆ ಬಂದೆವು
“ನಾನು ಮಾರ್ಚ್ ಮೊದಲ ವಾರದಲ್ಲಿ ದುಬಾೖಗೆ ಹೋದೆ. ಉದ್ಯೋಗಕ್ಕಾಗಿ ಅಲೆದು ಇದ್ದ ಹಣವೂ ಖಾಲಿಯಾಯಿತು. ಅಸಹಾಯಕನಾಗಿದ್ದಾಗ ದುಬಾೖಯ ಕೆಲವು ಮಂದಿ ಸಹಾಯ ಮಾಡಿ ಉಳಿದುಕೊಳ್ಳಲು ಅವಕಾಶ ನೀಡಿದರು. ಆದರೆ ಕೋವಿಡ್ 19ದಿಂದಾಗಿ ಭಾರೀ ತೊಂದರೆಯಾಯಿತು. ಪ್ರವೀಣ್ ಶೆಟ್ಟಿ, ಹರೀಶ್ ಕೋಡಿ ಮೊದಲಾದವರ ನೆರವಿನಿಂದಾಗಿ ನನ್ನಂತಹ ನೂರಾರು ಮಂದಿ ಊರಿಗೆ ಬರುವಂತಾಯಿತು. ಆದರೆ ಊರಿಗೆ ಬಂದಾಗ ಎದುರಾದ ಕೆಲವೊಂದು ಸಮಸ್ಯೆ ನೋಡಿ ಬೇಸರವಾಗಿದೆ. ಈಗ ಕ್ವಾರಂಟೈನ್ ಇರುವಲ್ಲಿ ಸದ್ಯಕ್ಕೆ ತೊಂದರೆ ಇಲ್ಲ. ಊಟ, ವಸತಿಗೆ ನಮ್ಮಿಂದ ಹಣ ಕೇಳಿದರೆ ನಮ್ಮ ಬಳಿ ಇಲ್ಲ. ನಮ್ಮಂತಹ ಸ್ಥಿತಿ ಯಾರಿಗೂ ಬರಬಾರದು. ದುಬಾೖಯಲ್ಲಿ ಇನ್ನೂ ಸಾವಿರಾರು ಮಂದಿ ಊರಿಗೆ ಬರಲು ಕಾಯುತ್ತಿದ್ದಾರೆ. ಅವರಿಗೆ ಸರಕಾರ ನೆರವಾಗಬೇಕು’ ಎಂದು ದುಬಾೖಯಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿರುವ ಮತ್ತೋರ್ವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.