ಉತ್ಸಾಹವಿದ್ದರೆ ಸಾಲದು ಧೈರ್ಯವೂ ಬೇಕು
Team Udayavani, Jul 1, 2020, 5:10 AM IST
ಒಮ್ಮೆ ಗುರುಗಳು ತಮ್ಮ ಶಿಷ್ಯರೊಡಗೂಡಿ ಸ್ನಾನಕ್ಕೆಂದು ನದಿಗೆ ಹೋಗಿದ್ದರು. ಎಲ್ಲರೂ ಸ್ನಾನ ಮಾಡುತ್ತಿರುವಾಗ, ಒಬ್ಬ ಶಿಷ್ಯ ಆಯ ತಪ್ಪಿ ಜಾರಿ, ಪ್ರವಾಹದಲ್ಲಿ ಬಿದ್ದುಬಿಟ್ಟ. ಉಳಿದ ಶಿಷ್ಯರಿಗೆ ಸಹಪಾಠಿಗಾದ ಗತಿಯನ್ನು ಕಂಡು ಆತಂಕವಾಯಿತು. ಅಲ್ಲೇ ಇದ್ದ ಒಬ್ಬ ಶಿಷ್ಯನಿಗೆ ಗುರುಗಳು ಕೇಳಿದರು- “ನದಿಗೆ ಇಳಿದು ಆತನನ್ನು ರಕ್ಷಿಸುವೆಯಾ?’ ಎಂದು.
ಆಗ ಆತ- “ಆಗಬಹುದು ಗುರುಗಳೇ!’ ಎಂದು ಉತ್ಸಾಹದಿಂದ ನದಿಗೆ ಜಿಗಿದ. ಆದರೆ ಅವನೂ ಪ್ರವಾಹದಲ್ಲಿ ಸಿಕ್ಕಿಕೊಂಡ. ಆಗ ಗುರುಗಳು ಇನ್ನೊಬ್ಬ ಶಿಷ್ಯನಿಗೆ- “ಅಯ್ಯಾ, ನೀನಾದರೂ ಅವರಿಬ್ಬರನ್ನೂ ರಕ್ಷಿಸ ಬಲ್ಲೆಯಾ?’ ಎಂದು ಕೇಳಿಕೊಂಡರು. ಆತ ಧೈರ್ಯದಿಂದ “ಆಗಬಹುದು ಗುರುಗಳೇ’ ಎಂದು ನದಿಗೆ ಜಿಗಿದು, ಇಬ್ಬರನ್ನೂ ಪ್ರವಾಹದಿಂದ ರಕ್ಷಿಸಿದ. ಇಲ್ಲಿ ನಾವು ಎರಡು ವಿಷಯವನ್ನು ಗಮನಿಸಬೇಕು. ಒಂದು ಉತ್ಸಾಹ. ಇನ್ನೊಂದು ಧೈರ್ಯ. ಉತ್ಸಾಹ ಎಂದರೆ ಕಾರ್ಯಕ್ಕೆ ಬೇಕಾದ ಕ್ಷಮತೆ. ಮೊದಲನೆಯವನಿಗೆ ನದಿಯನ್ನು ಈಜುವ ಸಾಮರ್ಥ್ಯವಿದೆ. ಆದರೆ ಧೈರ್ಯವಿರಲಿಲ್ಲ.
ಹಾಗಾಗಿ ಆತನ ಪ್ರಯತ್ನ ವಿಫಲವಾಯಿತು. ಅದೇ ಎರಡನೆಯವನಿಗೆ ಉತ್ಸಾ ಹದ ಜೊತೆ ಧೈರ್ಯವೂ ಇತ್ತು. ಧೈರ್ಯ ಎಂದರೆ ತಾನು ಮಾಡುವ ಕಾರ್ಯದಲ್ಲಿ ಫಲ ವನ್ನು ಕಂಡೇ ಕಾಣುತ್ತೇನೆ ಎಂಬ ಮನಸ್ಸಿನ ಸ್ಥಿರತೆ. ಎರಡನೆ ಯವನು ಉತ್ಸಾಹದ ಜೊತೆ ಧೈರ್ಯದಿಂದ ಕಾರ್ಯ ಪ್ರವೃ ತ್ತ ನಾದ್ದರಿಂದ ಪ್ರವಾಹದಲ್ಲಿ ಸಿಲು ಕಿದ ತನ್ನ ಮಿತ್ರರನ್ನು ಬದು ಕಿಸಲು ಸಮರ್ಥನಾದ. ಧೈರ್ಯ ವಿದ್ದಾಗ ಮನಸ್ಸಿನಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಇದರ ಪರಿಣಾಮ ವಾಗಿ, ಆರಂಭಿಸಿದ ಕಾರ್ಯವು ಫಲ ಕೊಡುತ್ತದೆ.
ಸಾರ್ವಭೌಮಕೆ ನಾಕು ಗುಣಕೆ ಗುಣರಾಜ್ಯದಲಿ|
ಧೈರ್ಯ ಮೊದಲನೆಯದೆರಡನೆಯದು ಮತಿಯೋಜೆ||
ಸರ್ವದಯೆ ಮೂರನೆಯದದುವೆ ನೀತಿಯ ಮೂಲ|
ನಿರ್ಮಮತ್ವವೇ ಮುಕುಟ ಮಂಕುತಿಮ್ಮ||
ಎಂದು ಡಿ.ವಿ.ಜಿಯವರು ಧೈರ್ಯಕ್ಕೆ ಮೊದಲನೆಯ ಸ್ಥಾನವನ್ನು ಕೊಟ್ಟಿದ್ದಾರೆ. ಸತ್ಯಾರ್ಥವನ್ನು ಗ್ರಹಿಸುವ ಬುದ್ಧಿಯನ್ನೇ ಧೈರ್ಯ ಎಂಬುದಾಗಿ ಶ್ರೀರಂಗ ಮಹಾ ಗುರುಗಳು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
* ಚಂಪಕಾ ನರಸಿಂಹ ಭಟ್, ಸಂಸ್ಕೃತಿ ಚಿಂತಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.