ಅಂದು ಮುಗಿಬಿದ್ದಿದ್ದರು, ಇಂದು ಕೇಳ್ಳೋರೆ ಇಲ್ಲ!
ಬಸವ ಜಯಂತಿಯಂದು ಆರಂಭವಾಗಿದ್ದ "ಕರುಣಾಗೋಡೆ'
Team Udayavani, Jun 2, 2020, 5:55 AM IST
ಉಡುಪಿ: ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಕಷ್ಟದಲ್ಲಿರುವ ಬಡವರಿಗೆ ನೆರವಾಗಲೆಂದು ನಗರದ ಸಿಟಿ ಬಸ್ ನಿಲ್ದಾಣದ ಸಮೀಪದ ಫುಟ್‌ಪಾತ್ ಮೇಲೆ ಬಸವ ಸಮಿತಿ ವತಿಯಿಂದ ದಾನಿಗಳ ಮತ್ತು ಬಡವರ ಸೇತುವಾಗಿ ಆರಂಭಿಸಿದ ಕರುಣಾಗೋಡೆ ಎನ್ನುವ ಯೋಜನೆ ನಿರ್ವಹಣೆ ಕೊರತೆಯಿಂದ ಅದನ್ನೀಗ ಕೇಳುವವರೇ ಇಲ್ಲದಂತಾಗಿದೆ.
ಫುಟ್‌ಪಾತ್ ಮೇಲೆ ಗೋಡೆಯಲ್ಲಿ ನಿರ್ಮಿಸಿರುವ ರ್ಯಾಪ್ ಬಳಿ ಬಟ್ಟೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿವೆ.ಬಳಸದೆ ಮನೆಯಲ್ಲಿ ಹಾಳಾಗುತ್ತಿರುವ ಅಗತ್ಯವಿಲ್ಲದ ವಸ್ತುಗಳಿದ್ದರೆ ಅದನ್ನು ದಾನಿಗಳು ತಂದು ಇಲ್ಲಿ ಇಡಲು ಅವಕಾಶ ಕಲ್ಪಿಸಲಾಗಿತ್ತು. ಅಗತ್ಯವಿದ್ದ ಬಡವರು ಅದನ್ನು ಬಳಕೆಗೆ ಕೊಂಡು ಹೋಗಲು ಅನುವು ಮಾಡಿಕೊಡಲಾಗಿತ್ತು. ಅದರಂತೆ ದಾನಿಗಳು ಬೃಹತ್ ಪ್ರಮಾಣದಲ್ಲಿ ಹಳೆಯ ಬಟ್ಟೆಗಳನ್ನು ರ್ಯಾಪ್‌ನಲ್ಲಿ ತಂದು ಇರಿಸಿದ್ದು, ಯಾರೂ ಕೂಡ ಕೊಂಡು ಹೋಗಿಲ್ಲ. ಪರಿಣಾಮ ಬಟ್ಟೆ ಇನ್ನಿತರ ವಸ್ತುಗಳು ಗಾಳಿ-ಮಳೆಗೆ ಒದ್ದೆಯಾಗಿ ಚೆಲ್ಲಾಪಿಲ್ಲಿಯಾಗಿ ರ್ಯಾಪ್‌ನಿಂದ ಕೆಳಗೆ ಹರಡಿ ಬಿದ್ದುಕೊಂಡಿವೆ.
ಆರಂಭದ ದಿನ ಕರುಣಾಗೋಡೆ ಮುಂದೆ ನೂರಾರು ಕಾರ್ಮಿಕರು ಮುಗಿಬಿದ್ದಿದ್ದರು. ಆರಂಭದಲ್ಲಿ ಕೆಲವರು ದಿನಸಿ, ಹಣ್ಣುಹಂಪಲು, ತರಕಾರಿ ತಂದಿರಿಸಿ ಉತ್ಸಾಹ ತೋರಿದ್ದರು. ವಲಸೆ ಕಾರ್ಮಿಕರು ಇದರ ಪ್ರಯೋಜನವನ್ನು ಪಡಕೊಂಡಿದ್ದರು. ಅನಂತರದಲ್ಲಿ ಅವರೆಲ್ಲ ಊರುಗಳಿಗೆ ತೆರಳಿದ್ದಾರೆ.
ನೆರವಾಗುವ ಉದ್ದೇಶ
ಬಡವರಿಗೆ ನೆರವಾಗುವ ಉತ್ತಮ ಉದ್ದೇಶದಿಂದ ಆರಂಭಿಸಿದ್ದೆವು. ಅನಂತರದಲ್ಲಿ ಅಂದುಕೊಂಡ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಲಾಕ್‌ಡೌನ್‌ನಿಂದ ಊರಿಂದ ಆಚೆ ಬಾಕಿಯಾಗಿ ಉಳಿದುಕೊಂಡಿದ್ದರಿಂದ ಸಮಸ್ಯೆಯಾಯಿತು. ಇನ್ನೆರಡು ದಿನಗಳೊಳಗೆ ಸ್ಥಳಕ್ಕೆ ಬಂದು ಅಸ್ತವ್ಯಸ್ತವಾಗಿರುವುದನ್ನು ಸರಿಪಡಿಸುವೆ.
– ಜನಾರ್ದನ ವಿ. ಕೆಂಬಾವಿ, ಬಸವ ಸಮಿತಿ ಕಾರ್ಯಕರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.